ಕುಟುಂಬಗಳಲ್ಲಿ ಅರ್ಥಪೂರ್ಣ ಪ್ರಾರ್ಥನೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಇಂದು ವಿಶ್ವ ಪ್ರಾರ್ಥನಾ ದಿನದ ಹಿನ್ನೆಲೆಯಲ್ಲಿ ಸ್ಪೇನ್ ದೇಶದ ಸೆವಿಲ್ ನಗರದಿಂದ ಆಗಮಿಸಿರುವ ಇಂಟರ್ನಾಷ್ಯನಲ್ ಕಾಂಗ್ರೆಸ್ ಆಫ್ ಪಾಪ್ಯುಲರ್ ಪಯೆಟಿ ಸಂಸ್ಥೆಯ ಸದಸ್ಯರನ್ನು ಹಾಗೂ ಪ್ರತಿನಿಧಿಗಳನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದಾರೆ. ಈ ವೇಳೆ ಅವರು ಕುಟುಂಬಗಳಲ್ಲಿ ಅರ್ಥಪೂರ್ಣ ಪ್ರಾರ್ಥನೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ್ದಾರೆ.
ಇವರನ್ನು ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಿಮ್ಮ ಕಾರ್ಯದಲ್ಲಿ ಎಂದಿಗೂ ಸಹ ಪ್ರೀತಿಯ ಹೃದಯಬಡಿತ ಮಿಡಿಯುತ್ತಿರಲಿ. ಸಂಪೂರ್ಣವಾಗಿ ನಿಮ್ಮನ್ನು ನೀವೆ ಕ್ರಿಸ್ತರಿಗೆ ಸಮರ್ಪಿಸಿಕೊಂಡು, ಶುಭಸಂದೇಶದ ಹಾದಿಯಲ್ಲಿ ಮುನ್ನಡೆಯಿರಿ" ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಪ್ರಾರ್ಥನೆಯ ಪ್ರಾಮುಖ್ಯತೆಯ ಕುರಿತು ಅವರಿಗೆ ಹೇಳಿದರು. ಇಂದು ವಿಶ್ವ ಪ್ರಾರ್ಥನಾ ದಿನದ ಹಿನ್ನೆಲೆ "ವಿಶೇಷವಾಗಿ ಕುಟುಂಬಗಳಲ್ಲಿ ಮಾಡುವ ಪ್ರಾರ್ಥನೆಗಳ ಕುರಿತು ಪೋಪ್ ಫ್ರಾನ್ಸಿಸ್ ಅವರು ಮಾತನಾಡಿ, ಅದರ ಪ್ರಾಮುಖ್ಯತೆಯನ್ನು ತಿಳಿಸಿದರು." ಕುಟುಂಬಗಳಲ್ಲಿ ಪ್ರಾರ್ಥನೆ ಎಂಬುದು ನಾವು ಒಂದೇ ಸಮುದಾಯವಾಗಿ ದೇವರನ್ನು ಸ್ತುತಿಸುವುದು ಹಾಗೂ ಅವರಿಗೆ ನಮನವನ್ನು ಸಲ್ಲಿಸುವುದಾಗಿದೆ.
"ನಮ್ಮ ಪ್ರಾರ್ಥನೆ ಬಹಳ ಸರಳವಾಗಿದ್ದರೂ ಸಹ ಅದು ಹೃದಯದಿಂದ ಬಂದದ್ದಾಗಿರಬೇಕು" ಎಂದು ಅವರು ಹೇಳಿದರು.
ಅಂತಿಮವಾಗಿ "ಯೇಸು ಕ್ರಿಸ್ತರು ನಿಮ್ಮನ್ನು ಆಶೀರ್ವದಿಸಲಿ, ಮಾತೆ ಮರಿಯಮ್ಮನವರು ನಿಮಗಾಗಿ ಸದಾ ಪ್ರಾರ್ಥಿಸಲಿ" ಎಂದು ಹೇಳುತ್ತಾ, ಪೋಪ್ ಫ್ರಾನ್ಸಿಸ್ ಅವರಿಗೆ ಶುಭವನ್ನು ಹಾರೈಸಿದರು.