ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರ ಬಲಿಪೂಜೆಗಳ ವಿವರ ಪ್ರಕಟ
ವ್ಯಾಟಿಕನ್ ಪೀಠದ ದೈವಾರಾಧನಾ ವಿಧಿ ಆಯೋಗವು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಅರ್ಪಿಸಲಿರುವ ಬಲಿಪೂಜೆಗಳು ಹಾಗೂ ಪಾಲ್ಗೊಳ್ಳಲಿರುವ ಆಧ್ಯಾತ್ಮಿಕ ಕಾರ್ಯಕ್ರಮಗಳ ಪಟ್ಟಿಯನ್ನು ಪ್ರಕಟಿಸಿದೆ.
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ ಪೀಠದ ದೈವಾರಾಧನಾ ವಿಧಿ ಆಯೋಗವು ಮಾರ್ಚ್ ಹಾಗೂ ಏಪ್ರಿಲ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು ಅರ್ಪಿಸಲಿರುವ ಬಲಿಪೂಜೆಗಳು ಹಾಗೂ ಪಾಲ್ಗೊಳ್ಳಲಿರುವ ಆಧ್ಯಾತ್ಮಿಕ ಕಾರ್ಯಕ್ರಮಗಳ ಪಟ್ಟಿಯನ್ನು ಪ್ರಕಟಿಸಿದೆ.
ಮಾರ್ಚ್ 5 ರಂದು ರೋಮ್ ನಗರದಲ್ಲಿ ಸಂತ ಸಬೀನಾ ಮಹಾದೇವಾಲಯದಲ್ಲಿ ಪೋಪ್ ಫ್ರಾನ್ಸಿಸ್ ಅವರು ಬೂದಿ ಬುಧವಾರದ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಹಲವು ದಿನಗಳ ನಂತರ ಸಂತ ಪೇತ್ರರ ಮಹಾದೇವಾಲಯದಲ್ಲಿ ಪೋಪ್ ಫ್ರಾನ್ಸಿಸ್ ಅವರು ವರ್ಲ್ಡ್ ಆಫ್ ವಾಲೆಂಟಿಯರ್ಸ್ ಜ್ಯೂಬಿಲಿ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ ಎಂದು ಈ ಪ್ರಕಟಣೆಯು ತಿಳಿಸಿದೆ.
ಏಪ್ರಿಲ್ ತಿಂಗಳಲ್ಲಿ ಪೋಪ್ ಫ್ರಾನ್ಸಿಸ್ ಅವರು "ವ್ಯಾದಿಸ್ತರ ಜ್ಯೂಬಿಲಿ" ಬಲಿಪೂಜೆಯನ್ನು ಅರ್ಪಿಸಲಿದ್ದಾರೆ. ಇದೇ ವೇಳೆ ವಿವಿಧ ಭಾನುವಾರಗಳಂದು ಬಲಿಪೂಜೆ ಸೇರಿದಂತೆ ರೋಮನ್ ಕೂರಿಯಾಕ್ಕೆ ಪೋಪ್ ಫ್ರಾನ್ಸಿಸ್ ಅವರು ಹಮ್ಮಿಕೊಂಡಿರುವ ಆಧ್ಯಾತ್ಮಿಕ ಕಾರ್ಯಕ್ರಮಗಳ ಕುರಿತು ಈ ಪ್ರಕಟಣೆಯು ಮಾಹಿತಿಯನ್ನು ನೀಡಿದೆ.
12 ಫೆಬ್ರವರಿ 2025, 17:07