MAP

ಸೇನಾ ಪಡೆಗಳ ಜ್ಯೂಬಿಲಿ ಬಲಿಪೂಜೆಯಲ್ಲಿ ಪೋಪ್: ಸದಾ ಧೈರ್ಯದಿಂದಿರಿ, ದೇವರ ಪ್ರೀತಿಗೆ ಸಾಕ್ಷಿಗಳಾಗಿರಿ

ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಸೇನಾ ಪಡೆಗಳು, ಸೇನಾ ಸಿಬ್ಬಂಧಿಗಳು, ಪೊಲೀಸರು ಸೇರಿದಂತೆ ರಕ್ಷಣಾ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಯೋಧರಿಗಾಗಿ ಹಾಗೂ ಅವರ ಕುಟುಂಬಗಳಿಗಾಗಿ ಜ್ಯೂಬಿಲಿ ಬಲಿಪೂಜೆಯನ್ನು ಅರ್ಪಿಸಿದ್ದಾರೆ. ಈ ಬಲಿಪೂಜೆಯ ಪ್ರಭೋದನೆಯಲ್ಲಿ ಅವರು "ಸದಾ ಧೈರ್ಯದಿಂದಿರಿ ಹಾಗೂ ಅವರ ದೇವರ ಪ್ರೀತಿಯ ಸಾಕ್ಷಿಗಳಾಗಿರಿ" ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

"ಧೈರ್ಯವೇ ನಿಮ್ಮ ಗುರುತು" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು "ನಿಮ್ಮೆಲ್ಲಾ ಕಾರ್ಯಗಳಲ್ಲಿ ಪ್ರಭು ಸದಾ ನಿಮ್ಮೊಂದಿಗಿದ್ದು, ನಿಮ್ಮನ್ನು ಮುನ್ನಡೆಸಲಿ" ಎಂದು ಹೇಳಿದ್ದಾರೆ. ಪ್ರತಿ ದಿನ, ವಿಶೇಷವಾಗಿ ಈ ಜ್ಯೂಬಿಲಿ ವರ್ಷದಲ್ಲಿ ನೀವು ಪ್ರಭುವಿನ ಹಾದಿಯಲ್ಲಿ ಸಾಗಬೇಕು ಹಾಗೂ ಈ ಪಯಣದಲ್ಲಿನ ಎಲ್ಲಾ ಸಂಕಷ್ಟಗಳು, ಸಂತೋಷ, ನೋವು-ನಲಿವುಗಳನ್ನು ಅವರಿಗಾಗಿ ಅರ್ಪಿಸಬೇಕು" ಎಂದು ಹೇಳಿದ್ದಾರೆ.

ಸೇನಾಪಡೆಗಳಲ್ಲಿ ಚಾಪ್ಲಿನ್'ಗಳಾಗಿ ಸೇವೆ ಸಲ್ಲಿಸುತ್ತಿರುವ ಗುರುಗಳನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ನೀವು ಸದಾ ಪರಿಶುದ್ಧತೆಯಿಂದ ಜೀವಿಸಬೇಕು. ರಕ್ಷಣಾ ಕಾರ್ಯದಲ್ಲಿ ಬಳಲಿ, ನೋವನ್ನು ಅನುಭವಿಸುವವರಿಗೆ ಮಾರ್ಗದರ್ಶಕರಾಗಿ, ಅವರನ್ನು ಆಧ್ಯಾತ್ಮಿಕತೆಯ ಹಾದಿಯಲ್ಲಿ ಮುನ್ನಡೆಸಬೇಕೆಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ಸದಾ ನಿಮ್ಮಲ್ಲಿ ಕೃತಜ್ಞತಾ ಭಾವವೆಂಬುದು ಜಾಗೃತವಾಗಿರಲಿ ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು ಅಂತಿಮವಾಗಿ ಅವರ ಮೇಲೆ ದೇವರಾಶೀರ್ವಾದಗಳನ್ನು ಕೋರಿದರು. ಮಾತೆ ಮರಿಯಮ್ಮನವರು ಸದಾ ನಿಮ್ಮ ಜೊತೆ ಇದ್ದು, ನಿಮ್ಮನ್ನು ಹರಸಲಿ ಎಂದು ಕೋರಿದರು.  

09 ಫೆಬ್ರವರಿ 2025, 17:54