MAP

ಜೂಬಿಲಿ ಭೇಟಿಯಲ್ಲಿ ಪೋಪ್: ಭರವಸೆ ಎಂದರೆ ದೇವರ ಬಳಿಗೆ ಹಿಂತಿರುಗುವುದು

ಜ್ಯೂಬಿಲಿ ವರ್ಷದ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಪ್ರತಿ ತಿಂಗಳು ವಿಶೇಷ ಸಾರ್ವಜನಿಕ ಭೇಟಿಯನ್ನು ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಎರಡನೇ ವಿಶೇಷ ಜ್ಯೂಬಿಲಿ ಸಾರ್ವಜನಿಕ ಭೇಟಿಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ಮಾತನಾಡಿರುವ ಅವರು "ಪರಿವರ್ತನೆ" ಎಂಬುದನ್ನು ಜೀವನ ಪರ್ಯಂತ ಪ್ರಯಾಣವನ್ನಾಗಿಸಬೇಕು. ನಮ್ಮ ಈ ಬದುಕಿನ ಪಯಣದಲ್ಲಿ ಭರವಸೆ ಎಂದರೆ ದೇವರ ಬಳಿಗೆ ಹಿಂತಿರುಗುವುದು ಎಂದು ಹೇಳಿದ್ದಾರೆ.

ವರದಿ: ಲೀಸಾ ಝೆಂಗಾರಿನಿ

ಪೋಪ್ ಫ್ರಾನ್ಸಿಸ್ ಅವರು "ಮನಪರಿವರ್ತನೆ", ಭರವಸೆ, ವಿಶ್ವಾಸದ ಪರಿವರ್ತನಾ ಶಕ್ತಿಯ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದರು. ನೆರೆದಿದ್ದ ಭಕ್ತಾಧಿಗಳಿಗೆ ಈ ಕುರಿತು ವಿವರಿಸಿ ಹೇಳಿದರು. "ದೇವರ ಕನಸಿನ ಪರಿಧಿಯಲ್ಲಿ ನಾವು ನಮ್ಮ ಜೀವನಗಳನ್ನು ರೂಪಿಸಿಕೊಳ್ಳಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

"ಪರಿವರ್ತನೆ" ಎಂದರೆ ನಮ್ಮ ದಿಕ್ಕನ್ನು ಬದಲಿಸುವುದು. ನಾವು ಪರಿವರ್ತನೆ ಹೊಂದಿದಾಗ ನಮ್ಮ ದಿಕ್ಕು ಬದಲಾಗಿ ನಾವು ಬೇರೊಂದು ದಿಕ್ಕಿನಲ್ಲಿ ಚಲಿಸುತ್ತೇವೆ. ಇದರಿಂದ ನಮ್ಮ ಬದುಕಿನಲ್ಲಿ ಆಗಿರುವ ಬದಲಾವಣೆಗಳನ್ನು ಗಮನಿಸುತ್ತೇವೆ. ಬದುಕಿನಲ್ಲಿ ಬದಲಾವಣೆ ಎಂಬುದು ಒಂದು ದಿನದ್ದೋ ಅಥವಾ ಒಂದು ಕ್ಷಣದ್ದೋ ಅಲ್ಲ ಬದಲಿಗೆ ಅದು ನಿರಂತರ ನಡೆಯುವ ಪ್ರಕ್ರಿಯೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. 

"ಬದುಕಿನಲ್ಲಿ ಆಗುವ ಬದಲಾವಣೆಯು ನಮಗೆ ಭರವಸೆಯನ್ನು ನೀಡುತ್ತದೆ. ಈ ಭರವಸೆಯು ನಮ್ಮನ್ನು ದೇವರ ಬಳಿಗೆ ಕರೆದುಕೊಂಡು ಹೋಗುವಂತೆ ಮಾಡುತ್ತದೆ" ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು "ನಾವು ದೇವರ ಬಳಿಗೆ ನಮ್ಮೆಲ್ಲಾ ದೀನತೆ ಹಾಗೂ ಬಲಹೀನತೆಗಳಿಂದ ಹಿಂತಿರುಗುವಂತೆ ಭರವಸೆ ನಮಗೆ ನೆರವಾಗುತ್ತದೆ ಎಂದು ಹೇಳುತ್ತಾರೆ. ಇದೇ ವೇಳೆ ಪೋಪ್ ಫ‌್ರಾನ್ಸಿಸ್ ಅವರು ಹೇಗೆ ಮಗ್ದಲದ ಮರಿಯಳು ದೇವರ ಕೃಪೆಯಿಂದ ಸೌಖ್ಯವನ್ನು ಹೊಂದುತ್ತಾಳೆ ಎಂಬ ಉದಾಹರಣೆಯನ್ನು ನೀಡಿದರು.

"ನಮ್ಮ ಬದುಕಿನಲ್ಲಿ ಯಾವುದೇ ರೀತಿಯ ಅಹಂ ಎನ್ನುವುದು ಇದ್ದರೆ ಅದು ನಾವು ಪರಿವರ್ತನೆ ಹೊಂದುವುದರಿಂದ ನಮ್ಮನ್ನು ತಡೆಯುತ್ತದೆ. ಹಾಗಾಗಿ ನಾವು ನಮ್ಮ ಅಹಂಗಳನ್ನು ಬಿಟ್ಟು ದೀನತೆಯಿಂದ, ಭರವಸೆಯ ಮಾರ್ಗದಲ್ಲಿ ಮುನ್ನಡೆಯಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಜ್ಯೂಬಿಲಿ ಸಾರ್ವಜನಿಕ ಭೇಟಿಯಲ್ಲಿ ಭಕ್ತಾಧಿಗಳನ್ನು ಉದ್ದೇಶಿಸಿ ನುಡಿದಿದ್ದಾರೆ.    

01 ಫೆಬ್ರವರಿ 2025, 13:58

ಇತ್ತೀಚಿನ ಭೇಟಿಗಳು

ಎಲ್ಲಾ ಓದಿ >