ಗ್ವಾಟೆಮಾಲದಲ್ಲಿನ ಬಸ್ ಅಫಘಾತಕ್ಕೆ ಮಿಡಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಗ್ವಾಟೆಮಾಲದಲ್ಲಿ ಸೇತುವೆಯ ಮೇಲೆ ಪ್ರಯಾಣ ಮಾಡುತ್ತಿದ್ದ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 55 ಜನರು ಸಾವನ್ನಪ್ಪಿದ್ದು, ಮೃತರಿಗೆ ಪೋಪ್ ಫ್ರಾನ್ಸಿಸ್ ಅವರು ಪ್ರಾರ್ಥಿಸಿದ್ದು, ಗಾಯಾಳುಗಳು ಬೇಗ ಚೇತರಿಸಿಕೊಂಡು ಗುಣಮುಖರಾಗಿ ಬರುವಂತೆ ಹಾರೈಸಿದ್ದಾರೆ.
ಈ ಘಟನೆಯಿಂದ "ಬಹಳ ನೋವಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಸಂತಿಯಾಗೋ ದೆ ಗ್ವಾಟೆಮಾಲ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷ ಗೊನ್ಸಾಲೋ ದೆ ವಿಲ್ಲಾ ವಾಸ್ಕ್ವೆಝ್ ಅವರಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸಿರುವ ಪೋಪ್ ಫ್ರಾನ್ಸಿಸ್ ಅವರು ಈ ಅಫಘಾತದಲ್ಲಿ ಮೃತ ಹೊಂದಿದ ಎಲ್ಲರ ಆತ್ಮಶಾಂತಿಗಾಗಿ ಪ್ರಾರ್ಥಿಸುವಂತೆ ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ಟೆಲಿಗ್ರಾಂ ಸಂದೇಶಕ್ಕೆ ವ್ಯಾಟಿಕನ್ನಿನ ರಾಜ್ಯ ಕಾರ್ಯದರ್ಶಿಯಾಗಿರುವ ಕಾರ್ಡಿನಲ್ ಪಿಯೆತ್ರೊ ಪರೋಲಿನ್ ಅವರು ಸಹಿ ಹಾಕಿದ್ದಾರೆ. ಈ ಸಂದೇಶದಲ್ಲಿ "ಮೃತರಿಗೆ ನಾನು ಪ್ರಾರ್ಥಿಸುತ್ತಿದ್ದು, ಅವರ ಕುಟುಂಬಗಳಿಗೆ ಹೃದಯಾಂತರಾಳದ ಸಂತಾಪಗಳನ್ನು ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.