ವ್ಯಾಟಿಕನ್ ಗವರ್ನರೇಟ್'ಗೆ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿದ ಪೋಪ್ ಫ್ರಾನ್ಸಿಸ್
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ಗವರ್ನರೇಟ್'ಗೆ ಇಬ್ಬರು ನೂತನ ಪ್ರಧಾನ ಕಾರ್ಯದರ್ಶಿಗಳನ್ನು ನೇಮಿಸಿದ್ದಾರೆ. ನೂತನ ಪ್ರಧಾನ ಕಾರ್ಯದರ್ಶಿಗಳಿಗೆ ಜವಾಬ್ದಾರಿಗಳನ್ನು ನೀಡುವಲ್ಲಿ ಗವರ್ನರೇಟ್ ನೂತನ ಅಧ್ಯಕ್ಷೆ ಸಿಸ್ಟರ್ ರಫೇಲಾ ಪೆತ್ರಿನಿ, ಎಫ್.ಎಸ್.ಎಂ ಅವರಿಗೆ ಅಧಿಕಾರವನ್ನು ನೀಡಿದ್ದಾರೆ.
ಇದಕ್ಕಾಗಿ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ಸಿಟಿಯ ಸಂವಿಧಾನಕ್ಕೆ ತಿದ್ದುಪಡಿಯನ್ನು ಮಾಡಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ.
ಮಾರ್ಚ್ 1 ರಿಂದ ಗವರ್ನರೇಟ್ ನೂತನ ಅಧ್ಯಕ್ಷೆಯಾಗಿ ಸಿಸ್ಟರ್ ರಫೇಲಾ ಪೆತ್ರಿನಿ, ಎಫ್.ಎಸ್.ಎಂ ಅವರು ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ. ಈ ನೂತನ ಪ್ರಧಾನ ಕಾರ್ಯದರ್ಶಿಗಳು ಸಿಸ್ಟರ್ ಪೆತ್ರಿನಿ ಅವರ ನೇತೃತ್ವದಲ್ಲಿ ಕಾರ್ಯನಿರ್ವಹಿಸಲಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ನೇಮಿಸಿರುವ ಇಬ್ಬರು ಪ್ರಧಾನ ಕಾರ್ಯದರ್ಶಿಗಳೆಂದರೆ ಆರ್ಚ್'ಬಿಷಪ್ ಎಮಿಲಿಯೋ ನೆಪ್ಪ ಹಾಗು ವಕೀಲ ಜಿಸೆಪ್ಪಿ ಪುಗ್ಲೀಸಿ, ಅಲಿಬ್ರಾಂದಿ. ಇವರು ವ್ಯಾಟಿಕನ್ನಿನ ಗವರ್ನರೇಟಿನಲ್ಲಿ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ.