ಒಳ್ಳೆಯ ವಿಶ್ರಾಂತಿ ಪಡೆದ ಪೋಪ್ ಫ್ರಾನ್ಸಿಸ್; ಪ್ರಾರ್ಥನೆ, ಹಾರೈಕೆಗಳಿಗೆ ಪ್ರಶಂಸೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಬ್ರಾಂಚಿಟಿಸ್ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದೀಗ ವ್ಯಾಟಿಕನ್ನಿನ ಮಾಧ್ಯಮ ಪೀಠದ ನಿರ್ದೇಶಕರಾಗಿರುವ ಡಾ. ಮತ್ತಿಯೊ ಬ್ರೂನಿ ಅವರು ಪೋಪ್ ಫ್ರಾನ್ಸಿಸ್ ಅವರು ಆರೋಗ್ಯದ ಪ್ರಸ್ತುತ ಮಾಹಿತಿಯನ್ನು ನೀಡಿದ್ದಾರೆ.
"ಪೋಪ್ ಫ್ರಾನ್ಸಿಸ್ ಅವರು ಇಂದು ವಿಶ್ರಾಂತಿ ತೆಗೆದುಕೊಂಡಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಇಂದು ಬೆಳಿಗ್ಗೆ ಎದ್ದು, ಉಪಹಾರ ಸೇವಿಸಿದರು. ದಿನಪತ್ರಿಕೆಗಳನ್ನು ಓದಿದರು. ಪೋಪ್ ಫ್ರಾನ್ಸಿಸ್ ಅವರ ಆರೋಗ್ಯದ ಕುರಿತು ಹೆಚ್ಚಿನ ಮಾಹಿತಿಯನ್ನು ನಿಮಗೆ ನೀಡಲಾಗುವುದು" ಎಂದು ಮತ್ತಿಯೋ ಬ್ರೂನಿ ಅವರು ಹೇಳಿದರು.
ಪೋಪ್ ಅವರಿಗೆ ಮಕ್ಕಳ ಆಂಕೊಲಾಜಿ ಘಟಕದ ಮಕ್ಕಳಿಂದ ಹಲವಾರು ಶುಭ ಹಾರೈಕೆ ಸಂದೇಶಗಳು, ಚಿತ್ರಗಳು ಮತ್ತು ಕಾರ್ಡ್‌ಗಳು ಬಂದಿವೆ.
ಸೋಮವಾರದ ಹೇಳಿಕೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು "ತಾವು ಸ್ವೀಕರಿಸುತ್ತಿರುವ ಹಲವಾರು ಪ್ರೀತಿ ಮತ್ತು ಆತ್ಮೀಯತೆಯ ಸಂದೇಶಗಳಿಂದ ಸ್ಪರ್ಶಿಸಲ್ಪಟ್ಟಿದ್ದಾರೆ" ಎಂದು ಹೇಳಿದರು.
ಸೋಮವಾರ ಸಂಜೆ, ಪತ್ರಿಕಾ ಕಚೇರಿಯು ಪವಿತ್ರ ತಂದೆಗೆ ಜ್ವರ ಬಂದಿಲ್ಲ ಮತ್ತು ನಿಗದಿತ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ ಎಂದು ತಿಳಿಸಿದೆ.