MAP

ಆಸ್ಪತ್ರೆಯಲ್ಲಿ ಹತ್ತನೇ ರಾತ್ರಿಯನ್ನು ಕಳೆದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಹತ್ತನೇ ರಾತ್ರಿಯನ್ನು ಕಳೆದಿದ್ದಾರೆ. ಇಲ್ಲಿ ಅವರು ಡಬಲ್ ನ್ಯುಮೋನಿಯಾಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಹತ್ತನೇ ರಾತ್ರಿಯನ್ನು ಕಳೆದಿದ್ದಾರೆ. ಇಲ್ಲಿ ಅವರು ಡಬಲ್ ನ್ಯುಮೋನಿಯಾಕ್ಕೆ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಭಾನುವಾರ ಸಂಜೆ, ಪವಿತ್ರ ಪೀಠದ ಮಾಧ್ಯಮ ಕಚೇರಿಯು ಅವರ  ಸ್ಥಿತಿ ಗಂಭೀರವಾಗಿದೆ ಎಂದು ತಿಳಿಸಿದೆ, ಆದರೂ ಶನಿವಾರ ಬೆಳಿಗ್ಗೆಯಿಂದ ಅವರಿಗೆ ಯಾವುದೇ ಉಸಿರಾಟದ ತೊಂದರೆಗಳು ಕಂಡುಬಂದಿಲ್ಲ.

ಪೋಪ್ ಫ್ರಾನ್ಸಿಸ್ ಅವರ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸಲು ಅವರ ದೇಹಕ್ಕೆ ರಕ್ತ ವರ್ಗಾವಣೆ ಮಾಡಲಾಗಿತ್ತು.

"ಥ್ರಂಬೋಸೈಟೋಪೆನಿಯಾ ಸ್ಥಿರವಾಗಿದೆ; ಆದಾಗ್ಯೂ, ಕೆಲವು ರಕ್ತ ಪರೀಕ್ಷೆಗಳು ಆರಂಭಿಕ, ಸೌಮ್ಯ ಮೂತ್ರಪಿಂಡ ವೈಫಲ್ಯವನ್ನು ತೋರಿಸುತ್ತವೆ, ಇದು ಪ್ರಸ್ತುತ ನಿಯಂತ್ರಣದಲ್ಲಿದೆ" ಎಂದು ಭಾನುವಾರದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ, "ಮೂಗಿನ ಕ್ಯಾನುಲಾಗಳ ಮೂಲಕ ಹೆಚ್ಚಿನ ಹರಿವಿನ ಆಮ್ಲಜನಕ ಚಿಕಿತ್ಸೆ ಮುಂದುವರಿಯುತ್ತದೆ" ಎಂದು ಸೇರಿಸಲಾಗಿದೆ.

ಭಾನುವಾರದಂದು, ಪೋಪ್ ಅವರು ಜೆಮೆಲ್ಲಿ ಆಸ್ಪತ್ರೆಯಲ್ಲಿರುವ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಚಿಕಿತ್ಸೆಯನ್ನು ನೋಡಿಕೊಳ್ಳುತ್ತಿರುವ ವೈದ್ಯರು ಮತ್ತು ದಾದಿಯರೊಂದಿಗೆ ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿದರು.

24 ಫೆಬ್ರವರಿ 2025, 16:27