ಪೋಪ್ ಫ್ರಾನ್ಸಿಸ್ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರ ಸಲಹೆ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರಿಗೆ ಹೆಚ್ಚಿನ ವಿಶ್ರಾಂತಿಯ ಅಗತ್ಯವಿದೆ ಎಂದು ಅವರಿಗೆ ಚಿಕಿತ್ಸೆಯನ್ನು ನೀಡುತ್ತಿರುವ ವೈದ್ಯರು ಹೇಳಿದ್ದಾರೆ. ಆ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಆಸ್ಪತ್ರೆಯಲ್ಲಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಿದ್ದಾರೆ.
ಆಸ್ಪತ್ರೆಗೆ ದಾಖಲಾದ ನಂತರ ಪೋಪ್ ಫ್ರಾನ್ಸಿಸ್ ಅವರು "ಇಂದು ವಿಶ್ರಾಂತಿಯ ರಾತ್ರಿಯನ್ನು ಕಳೆದಿದ್ದಾರೆ. ಅವರು ಚೆನ್ನಾಗಿ ನಿದ್ರಿಸಿದ್ದಾರೆ" ಎಂದು ವೈದ್ಯರು ಹೇಳಿದ್ದಾರೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿದೆ. ಇದೇ ವೇಳೆ ಇಂದು ಬೆಳಿಗ್ಗೆ ಪವಿತ್ರ ತಂದೆ ಫ್ರಾನ್ಸಿಸ್ ಅವರು ಉಪಹಾರವನ್ನು ಸೇವಿಸಿದ್ದಾರೆ ಹಾಗೂ ಎಂದಿನಂತೆ ಚಿಕಿತ್ಸೆಯ ನಡುವೆಯೂ ಸಹ ಪತ್ರಿಕೆಗಳನ್ನು ಓದಿದ್ದಾರೆ ಎಂದು ಮಾಧ್ಯಮ ಕಚೇರಿಯು ಹೇಳಿದೆ.
ಪೋಪ್ ಫ್ರಾನ್ಸಿಸ್ ಅವರು ಬ್ರಾಂಚಿಟಿಸ್ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆ, ಅವರ ಆರೋಗ್ಯದ ಕುರಿತು ಮಾಹಿತಿಯನ್ನು ವ್ಯಾಟಿಕನ್ನಿನ ಮಾಧ್ಯಮ ಕಚೇರಿಯ ನಿರ್ದೇಶಕ ಮತ್ತಿಯೋ ಬ್ರೂನಿ ಅವರು ನೀಡಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರಿಗೆ ಇದ್ದ ಜ್ವರವು ಉಲ್ಬಣವಾಗದೇ ಹಾಗೇ ಇದೆ. ಅವರ ಆರೋಗ್ಯದ ಕುರಿತ ಮತ್ತಷ್ಟು ಮಾಹಿತಿಯನ್ನು ಇಂದು ಮಧ್ಯಾಹ್ನ ನೀಡಲಾಗುವುದು ಎಂದು ಮತ್ತಿಯೋ ಬ್ರೂನಿ ಅವರು ಹೇಳಿದ್ದಾರೆ.