ಪೋಪ್ ಫ್ರಾನ್ಸಿಸ್ ಅವರ ಫೆಬ್ರವರಿ ತಿಂಗಳ ಪ್ರಾರ್ಥನಾ ಕೋರಿಕೆ: ದೈವಕರೆಗಳಿಗಾಗಿ
ಪೋಪ್ ಫ್ರಾನ್ಸಿಸ್ ಅವರು ಫೆಬ್ರವರಿ ತಿಂಗಳ ಪ್ರಾರ್ಥನಾ ಕೋರಿಕೆಯನ್ನು ಬಿಡುಗಡೆ ಮಾಡಿದ್ದು, ಈ ತಿಂಗಳು ವಿಶ್ವದಲ್ಲಿ ದೈವಕರೆಗಳಿಗಾಗಿ ಪ್ರಾರ್ಥಿಸುವಂತೆ ಕೋರಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಫೆಬ್ರವರಿ ತಿಂಗಳ ಪ್ರಾರ್ಥನಾ ಕೋರಿಕೆಯನ್ನು ಬಿಡುಗಡೆ ಮಾಡಿದ್ದು, ಈ ತಿಂಗಳು ವಿಶ್ವದಲ್ಲಿ ದೈವಕರೆಗಳಿಗಾಗಿ ಪ್ರಾರ್ಥಿಸುವಂತೆ ಕೋರಿದ್ದಾರೆ.
"ಫೆಬ್ರವರಿ ತಿಂಗಳಲ್ಲಿ ಧಾರ್ಮಿಕ ಸಮುದಾಯಕ್ಕಾಗಿ ನಾವು ಪ್ರಾರ್ಥಿಸೋಣ. ದೇವರು ಇವರನ್ನು ಆಶೀರ್ವದಿಸಲು ನಾವು ಪ್ರಾರ್ಥಿಸೋಣ. ವಿಶ್ವದಲ್ಲಿ ಇನ್ನೂ ಹೆಚ್ಚು ಹೆಚ್ಚು ಯುವಕ ಯುವತಿಯರು ದೈವ ಪ್ರೇರಣೆಯಿಂದ ಪ್ರೇರಿತರಾಗಿ ಯಾಜಕ ಹಾಗೂ ಧಾರ್ಮಿಕ ಬದುಕಿಗೆ ಕಾಲಿಡುವಂತಾಗಲಿ" ಎಂದು ಪೋಪ್ ಫ್ರಾನ್ಸಿಸ್ ಅವರು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.
"ದೇವರು ಈಗಲೂ ಸಹ ಯುವ ಸಮೂಹವನ್ನು ಅವರಿಗೇ ಗೊತ್ತಿಲ್ಲದ ವಿಧಗಳಲ್ಲಿ ದೈವ ಕರೆಯಿಂದ ಕರೆಯುತ್ತಿದ್ದಾರೆ. ಅವರಿಗೆ ಈಗಲೂ ಸೇವೆ ಮಾಡುವ ಕೊಯ್ಲುಗಾರರ ಅವಶ್ಯಕತೆ ಇದೆ. ನಾವೆಲ್ಲರೂ ಧರ್ಮಸಭೆಗೆ ಹೆಚ್ಚು ಹೆಚ್ಚು ದೈವ ಕರೆಗಳು ಸಿಗುವಂತೆ ಪ್ರಾರ್ಥಿಸಬೇಕೆಂದು" ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
05 ಫೆಬ್ರವರಿ 2025, 14:15