MAP

Il Papa, preparer� un documento sui diritti dei bambini

ಮಕ್ಕಳ ಕುರಿತು ಪ್ರೇಷಿತ ಪರಿಪತ್ರವನ್ನು ಬರೆಯಲಿರುವ ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ನಗರದಲ್ಲಿ ನಡೆದ ಮೊಟ್ಟ ಮೊದಲ ಮಕ್ಕಳ ಶೃಂಗಸಭೆಯನ್ನು ಪೋಪ್ ಫ್ರಾನ್ಸಿಸ್ ಅವರು ಸಮಾಪ್ತಿಗೊಳಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು ಮುಂದಿನ ದಿನಗಳಲ್ಲಿ ಮಕ್ಕಳ ಕುರಿತು ಪೋಪ್ ಫ್ರಾನ್ಸಿಸ್ ಪ್ರೇಷಿತ ಪರಿಪತ್ರವನ್ನು ಬರೆಯುತ್ತೇನೆ ಎಂಬ ಸುಳಿವನ್ನು ನೀಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಫೆಬ್ರವರಿ 3 ಅನ್ನು ಮಕ್ಕಳಿಗಾಗಿ ಮೀಸಲಿಡಲಾಗಿತ್ತು. ವ್ಯಾಟಿಕನ್ ನಗರದಲ್ಲಿ ನಡೆದ ಮೊಟ್ಟ ಮೊದಲ ಮಕ್ಕಳ ಶೃಂಗಸಭೆಯು ಮುಕ್ತಾಯಗೊಂಡಿತು. ಈ ಸಭೆಗೆ ವಿವಿಧ ದೇಶಗಳಿಂದ ಮಕ್ಕಳ ಹಕ್ಕುಗಳ ಕುರಿತು ಮಾತನಾಡಲು ತಜ್ಞರು ಆಗಮಿಸಿದ್ದರು. 

ಪ್ರಸ್ತುತ ಜಗತ್ತಿನಲ್ಲಿ ಎಲ್ಲಿ ನೋಡಿದರೂ ಯುದ್ಧ, ಹಿಂಸೆ, ನೋವು ಹಾಗೂ ಆಕ್ರಂದನಗಳೇ ಕಾಣುತ್ತಿವೆ. ಈ ಸಂದರ್ಭದಲ್ಲಿ ಇಲ್ಲಿ ನೆರೆದಿದ್ದ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಈ ಸಭೆಗೆ ಆಗಮಿಸಿದ ಎಲ್ಲರಿಗೂ ಧನ್ಯವಾದಗಳು. ಮಕ್ಕಳ ಜೀವನವನ್ನು ಸುಂದರವಾಗಿಸುವಲ್ಲಿ ನಿಮಗಿರುವ ಕಾಳಜಿಗೆ ಶರಣು ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ಈ ಜಗತ್ತಿಲ್ಲಿ ಬಹಳಷ್ಟು ಕಡೆಗಣೆಗೆ ಒಳಗಾದವರು ಮಕ್ಕಳೇ ಆಗಿದ್ದಾರೆ. ಈ ನಿಟ್ಟಿನಲ್ಲಿ ಮಕ್ಕಳನ್ನು ಪೋಷಿಸುವ ಹಾಗೂ ಅವರನ್ನು ಸರಿಯಾದ ನಿಟ್ಟಿನಲ್ಲಿ ನಡೆಸುವ ಜವಾಬ್ದಾರಿ ನಮಗಿದೆ ಎಂದು ಹೇಳುತ್ತಾ, ಮುಂದೆ ಮಕ್ಕಳಿಗಾಗಿ ನಾನು ಪ್ರೇಷಿತ ಪರಿಪತ್ರವನ್ನು ಬರೆಯುತ್ತೇನೆ ಎಂದು ಸುಳಿವನ್ನು ನೀಡಿದ್ದಾರೆ.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು ಮಕ್ಕಳ ಪ್ರಗತಿ ಹಾಗೂ ಏಳ್ಗೆಯ ಕುರಿತ ಎಂಟು ಅಂಶಗಳ ದಾಖಲೆಗೆ ಇತರೆ ಸದಸ್ಯರ ಜೊತೆಗೂಡಿ ಸಹಿಯನ್ನು ಹಾಕಿದ್ದಾರೆ. 

04 ಫೆಬ್ರವರಿ 2025, 14:49