ಪೋಪ್ ಫ್ರಾನ್ಸಿಸ್ ಅವರು ಭೇಟಿಯ ಧರ್ಮೋಪದೇಶ: ಮೂರು ರಾಯರ ವಿಶ್ವಾಸದಿಂದ ನಾವು ಕಲಿಯಬೇಕಿದೆ.
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಬುಧವಾರದ ಸಾರ್ವಜನಿಕ ಭೇಟಿಗೆಂದು ಸಿದ್ಧಪಡಿಸಿದ್ದ ಧರ್ಮೋಪದೇಶ ಸಾರಾಂಶವನ್ನು ಇಂದು ಬಿಡುಗಡೆ ಮಾಡಲಾಗಿದೆ. ಪ್ರಸ್ತುತ ಅವರು ಜೆಮೆಲ್ಲಿ ಆಸ್ಪತ್ರೆಯಲ್ಲಿ ಡಬಲ್ ನ್ಯೂಮೋನಿಯಾಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಈ ಸಂದೇಶದಲ್ಲಿ ಮೂರು ರಾಯರ ವಿಶ್ವಾಸದ ಅನುರಣೆಯನ್ನು ನಾವು ಮಾಡಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಕರೆ ನೀಡಿದ್ದಾರೆ.
ವೈದ್ಯರು ಸಂಪೂರ್ಣ ವಿಶ್ರಾಂತಿಯನ್ನು ಪಡೆದುಕೊಳ್ಳಬೇಕೆಂದು ಹೇಳಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ವ್ಯಾಟಿಕನ್ ಮಾಧ್ಯಮ ಕಚೇರಿಗೆ ತಮ್ಮ ಸಂದೇಶವನ್ನು ಬಿಡುಗಡೆಗೊಳಿಸುವಂತೆ ಕೋರಿದ ಹಿನ್ನೆಲೆಯಲ್ಲಿ ಅವರ ಸಂದೇಶವನ್ನು ಬಿಡುಗಡೆಗೊಳಿಸಲಾಗಿದೆ.
ತಮ್ಮ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ದೂರದ ದೇಶಗಳಿಂದ ಯೇಸುಕಂದನನ್ನು ನೋಡಲು ಬಂದ ಮೂರು ರಾಯರ ಕುರಿತು ಮಾತನಾಡಿದ್ದಾರೆ. ಈ ಮೂಲಕ ಅವರು ಶುಭಸಂದೇಶದಲ್ಲಿ ಪ್ರಭು ಕ್ರಿಸ್ತರ ಬಾಲ್ಯಾವಸ್ಥೆಯ ಕುರಿತು ಚಿಂತನೆಯನ್ನು ನಡೆಸಿದ್ದಾರೆ.
ಈ ಮೂರು ರಾಯರು ಯೇಸುಕಂದನನ್ನು ಕಾಣಲು ಜುದೇಯ ನಾಡಿನ ಬೆತ್ಲೆಹೇಂ ಎಂಬ ಪುಟ್ಟ ಹಳ್ಳಿಗೆ ಬರುವಾಗ ಅವರಿಗೆ ಮಹದಾನಂದವಾಗುತ್ತದೆ. ಅವರ ಸಂತೋಷಕ್ಕೆ ಮಿತಿಯೇ ಇರುವುದಿಲ್ಲ. ಅಂತೆಯೇ ಯೇಸುಕ್ರಿಸ್ತರನ್ನು ನಾವು ನಮ್ಮ ಜೀವನದಲ್ಲಿ ಕಾಣುವಾಗ ಸಂತೋಷಭರಿತರಾಗಿರಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ಪೋಪ್ ಫ್ರಾನ್ಸಿಸ್ ತಮ್ಮ ಚಿಂತನೆಯನ್ನು ಮುಕ್ತಾಯಗೊಳಿಸುತ್ತಾ, ಎಲ್ಲಾ ಭಕ್ತಾಧಿಗಳು ನಮ್ಮ ನಂಬಿಕೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸಲು ಕ್ರಿಸ್ತ ಶಿಶುವಿಗೆ ಅತ್ಯಂತ ಸುಂದರವಾದ ಉಡುಗೊರೆಗಳನ್ನು ಅರ್ಪಿಸುವಂತೆ ಆಹ್ವಾನಿಸಿದರು.