ಪೋಪ್: ತನ್ನ ಹಾದಿಯನ್ನು ಕಳೆದುಕೊಳ್ಳದಿರಲು ಕಲಾವಿದರು ಮನುಷ್ಯಕುಲಕ್ಕೆ ನೆರವಾಗುತ್ತಾರೆ
ವರದಿ: ವ್ಯಾಟಿಕನ್ ನ್ಯೂಸ್
ಇಂದು ವ್ಯಾಟಿಕನ್ ನಗರದಲ್ಲಿ ಕಲಾವಿದರ ಜ್ಯೂಬಿಲಿ ಬಲಿಪೂಜೆಯನ್ನು ಅರ್ಪಿಸಲಾಗಿದೆ. ಪೋಪ್ ಫ್ರಾನ್ಸಿಸ್ ಅವರು ಈ ಬಲಿಪೂಜೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಅವರು ರೋಮ್ ನಗರದ ಜೆಮೆಲ್ಲಿ ಆಸ್ಪತ್ರೆಯಲ್ಲಿ ಬ್ರಾಂಚಿಟಿಸ್ ಖಾಯಿಲೆಗೆ ಚಿಕಿತ್ಸೆಯನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ವ್ಯಾಟಿಕನ್ನಿನ ಸಂಸ್ಕೃತಿ ಮತ್ತು ಶಿಕ್ಷಣ ಪೀಠದ ಉಸ್ತುವಾರಿಯಾಗಿರುವ ಕಾರ್ಡಿನಲ್ ಹೊಸೆ ಟೊಲೆಂಟಿನೋ ದೆ ಮೆಂಡೋನ್ಸಾ ಅವರು ಈ ಜ್ಯೂಬಿಲಿ ಬಲಿಪೂಜೆಯನ್ನು ಅರ್ಪಿಸಿದ್ದು, ಪ್ರಬೋಧನೆಯ ಸಂದರ್ಭದಲ್ಲಿ ಪೋಪ್ ಫ್ರಾನ್ಸಿಸ್ ಅವರ ಪ್ರಭೋದನೆಯನ್ನು ಓದಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರಬೋಧನೆಯಲ್ಲಿ ಇಂದಿನ ಶುಭಸಂದೇಶದ ಅಷ್ಟಭಾಗ್ಯಗಳ ಕುರಿತು ಮಾತನಾಡಿದ್ದಾರೆ. ಯೇಸುಕ್ರಿಸ್ತರು ಬೆಟ್ಟದ ಮೇಲೆ ಹೋಗಿ ಭೊಧನೆಯನ್ನು ಮಾಡುತ್ತಾ ಬಡವರು ಭಾಗ್ಯವಂತರು... ದೇವರ ಸಾಮ್ರಾಜ್ಯ ಅವರದು... ಸೇರಿದಂತೆ ಅಷ್ಟಭಾಗ್ಯಗಳ ಕುರಿತು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಇದು ದೇವರು ನಮಗಾಗಿ ಹೊಂದಿರುವ ಯೋಜನೆಯ ಮಹತ್ವದ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಕಲೆಯ ಮತ್ತೊಂದು ಪ್ರಮುಖ ಪಾತ್ರವೆಂದರೆ, ಒಳ್ಳೆಯದು ಮತ್ತು ಕೆಟ್ಟದ್ದರ "ಪ್ರತಿಧ್ವನಿಗಳನ್ನು" ಪ್ರತ್ಯೇಕಿಸಲು ವ್ಯಕ್ತಿಗಳಿಗೆ ಸಹಾಯ ಮಾಡುವುದು ಎಂದು ಪೋಪ್ ಫ್ರಾನ್ಸಿಸ್ ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ತಮ್ಮ ಧರ್ಮೋಪದೇಶವನ್ನು ದಿನದ ಸುವಾರ್ತೆ ಮತ್ತು ಯೇಸುವಿನ ಶುಭ ಸಂದೇಶಗಳ ಘೋಷಣೆಗೆ ಹಿಂತಿರುಗುವ ಮೂಲಕ ಮುಕ್ತಾಯಗೊಳಿಸಿದರು. ಕಲಾವಿದರಿಗೆ ಪೋಪ್ ಫ್ರಾನ್ಸಿಸ್ ಅವರು "ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದಕ್ಕಾಗಿ ನಾವು ನಮ್ಮ ದೃಷ್ಟಿಕೋನಗಳನ್ನು ಬದಲಾಯಿಸಿಕೊಳ್ಳಬೇಕು" ಎಂದು ಹೇಳಿದ್ದಾರೆ.