MAP

ಸಿಸ್ಟರ್ ರಫೆಲಾ ಪೆತ್ರಿನಿ ಅವರನ್ನು ವ್ಯಾಟಿಕನ್ ಗವರ್ನರೇಟ್ ಅಧ್ಯಕ್ಷರನ್ನಾಗಿ ನೇಮಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಇಂದು ಸಿಸ್ಟರ್ ರಫೆಲಾ ಪೆತ್ರಿನಿ ಎಫ್.ಎಸ್.ಎಂ ಅವರನ್ನು ಪೊಂಟಿಫಿಕಲ್ ಆಯೋಗ ಹಾಗೂ ವ್ಯಾಟಿಕನ್ ನಗರ ರಾಜ್ಯಾಡಳಿತ (ಗವರ್ನರೇಟ್) ಅಧ್ಯಕ್ಷೆಯನ್ನಾಗಿ ನೇಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಇಂದು ಸಿಸ್ಟರ್ ರಫೆಲಾ ಪೆತ್ರಿನಿ ಎಫ್.ಎಸ್.ಎಂ ಅವರನ್ನು ಪೊಂಟಿಫಿಕಲ್ ಆಯೋಗ ಹಾಗೂ ವ್ಯಾಟಿಕನ್ ನಗರ ರಾಜ್ಯಾಡಳಿತ (ಗವರ್ನರೇಟ್) ಅಧ್ಯಕ್ಷೆಯನ್ನಾಗಿ ನೇಮಿಸಿದ್ದಾರೆ. 

ಈ ಕುರಿತು ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಪವಿತ್ರ ಪೀಠದ ಮಾಧ್ಯಮ ಕಚೇರಿಯು ಈ ನೇಮಕಾತಿ ಮಾರ್ಚ್ 1 ರಿಂದ ಜಾರಿಗೆ ಬರುತ್ತದೆ ಎಂದು ತಿಳಿಸಿದೆ.

ಫ್ರಾನ್ಸಿಸ್ಕನ್ ಸಿಸ್ಟರ್ಸ್ ಆಫ್ ದಿ ಯೂಕರಿಸ್ಟ್ ಧಾರ್ಮಿಕ ಸಭೆಗೆ ಸೇರಿರುವ ಸಿಸ್ಟರ್ ರಫೆಲಾ ಪೆತ್ರಿನಿ ಅವರು 2021 ರಿಂದ ವ್ಯಾಟಿಕನ್ ಗವರ್ನರೇಟ್'ನ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನೇಮಕಾತಿಯೊಂದಿಗೆ ವ್ಯಾಟಿಕನ್ ಆಡಳಿತಾತ್ಮಕ ಪರಿಧಿಯಲ್ಲಿ ಅತ್ಯುನ್ನತ ಹುದ್ದೆಗೇರಿದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಅವರು ಭಾಜನರಾಗಲಿದ್ದಾರೆ. 

ಈ ಹುದ್ದೆಯಲ್ಲಿ ಅವರು ಪವಿತ್ರ ಪೀಠದ ಮಾರ್ಗಸೂಚಿಗಳಂತೆ ವ್ಯಾಟಿಕನ್ನಿನ ಪ್ರತಿದಿನದ ಕಾರ್ಯಗಳ ಉಸ್ತುವಾರಿಯನ್ನು ನಡೆಸಲಿದ್ದಾರೆ. 

15 ಫೆಬ್ರವರಿ 2025, 16:48