MAP

ಜೆಮೆಲ್ಲಿ ಆಸ್ಪತ್ರೆಯಲ್ಲಿ ಸಮಾಧಾನದ ರಾತ್ರಿಯನ್ನು ಕಳೆದ ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ಮಾಧ್ಯಮ ಕಚೇರಿಯ ಪ್ರಕಟಣೆಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಇಂದು ಬೆಳಿಗ್ಗೆ ಉಪಹಾರವನ್ನು ಸೇವಿಸಲು ಎದ್ದು ಕುಳಿತುಕೊಂಡರು. ಕಳೆದ ರಾತ್ರಿ ಆರಾಮವಾಗಿ ಕಳೆದರು ಎಂದು ಮಾಹಿತಿಯನ್ನು ನೀಡಲಾಗಿದೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ ಮಾಧ್ಯಮ ಕಚೇರಿಯ ಪ್ರಕಟಣೆಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಇಂದು ಬೆಳಿಗ್ಗೆ ಉಪಹಾರವನ್ನು ಸೇವಿಸಲು ಎದ್ದು ಕುಳಿತುಕೊಂಡರು. ಕಳೆದ ರಾತ್ರಿ ಆರಾಮವಾಗಿ ಕಳೆದರು ಎಂದು ಮಾಹಿತಿಯನ್ನು ನೀಡಲಾಗಿದೆ.

"ಕಳೆದ ರಾತ್ರಿ ಪೋಪ್ ಫ್ರಾನ್ಸಿಸ್ ಅವರು ಒಳ್ಳೆಯ ನಿದ್ರೆಯನ್ನು ಮಾಡಿದರು. ಇಂದು ಬೆಳಿಗ್ಗೆ ಉಪಹಾರಕ್ಕೆ ಎದ್ದು ಕುಳಿತರು" ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ಹೇಳಿದೆ.

ಕಳೆದ ರಾತ್ರಿಯ ವೈದ್ಯಕೀಯ ವರದಿಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರ ಆರೋಗ್ಯ ಸ್ಥಿತಿ ಸುಧಾರಿಸಿದೆ ಎಂದು ವ್ಯಾಟಿಕನ್ ಮಾಧ್ಯಮ ಕಚೇರಿಯು ವರದಿ ಮಾಡಿತ್ತು.

ಪೋಪ್ ಫ್ರಾನ್ಸಿಸ್ ಅವರಿಕೆ ನ್ಯುಮೋನಿಯಾ ಇದ್ದು, ಅವರು ಸ್ವತಂತ್ರವಾಗಿ ಉಸಿರಾಡುತ್ತಿದ್ದಾರೆ ಹಾಗೂ ಅವರ ಹೃದಯ ಗಟ್ಟಿಯಾಗಿದೆ ಎಂದು ವರದಿಯಾಗಿದೆ.

21 ಫೆಬ್ರವರಿ 2025, 16:20