MAP

ಪೋಪ್ ಫ್ರಾನ್ಸಿಸ್: ನಾವು ನಮ್ಮ ಯಾಜಕತ್ವದ ಗುರುತನ್ನು ಅಪ್ಪಿಕೊಳ್ಳಬೇಕು

ಪೋಪ್ ಫ್ರಾನ್ಸಿಸ್ ಅವರು ಅರ್ಜೆಂಟೀನ್ ಪ್ರೀಸ್ಟ್ಲಿ ಕಾಲೇಜ್ ಆಫ್ ರೋಮ್ ಸಂಘಟನೆಯ ಗುರುಗಳನ್ನು ಇಂದು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ. ಅವರನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಸಂತ ಹೊಸೆ ಗೇಬ್ರಿಯೆಲ್ ದೆಲ್ ರೊಸಾರಿಯೋ ಬೊಚೇರೋ ಅವರಂತೆ ನಾವು ಸೇವೆ ಹಾಗೂ ಪ್ರಾರ್ಥನೆಯ ಮಾದರಿಯನ್ನು ಅನುಸರಿಸಬೇಕು" ಎಂದು ಕಿವಿಮಾತನ್ನು ಹೇಳಿದ್ದಾರೆ.

ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್

ಪೋಪ್ ಫ್ರಾನ್ಸಿಸ್ ಅವರು ಅರ್ಜೆಂಟೀನ್ ಪ್ರೀಸ್ಟ್ಲಿ ಕಾಲೇಜ್ ಆಫ್ ರೋಮ್ ಸಂಘಟನೆಯ ಗುರುಗಳನ್ನು ಇಂದು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ. ಅವರನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಸಂತ ಹೊಸೆ ಗೇಬ್ರಿಯೆಲ್ ದೆಲ್ ರೊಸಾರಿಯೋ ಬೊಚೇರೋ ಅವರಂತೆ ನಾವು ಸೇವೆ ಹಾಗೂ ಪ್ರಾರ್ಥನೆಯ ಮಾದರಿಯನ್ನು ಅನುಸರಿಸಬೇಕು" ಎಂದು ಕಿವಿಮಾತನ್ನು ಹೇಳಿದ್ದಾರೆ. 

"ನಾವು ನಮ್ಮ ಯಾಜಕತ್ವದ ಗುರುತನ್ನು ಸದಾ ಅಪ್ಪಿಕೊಳ್ಳಬೇಕು.  "ಸಂತ ಹೊಸೆ ಗೇಬ್ರಿಯೆಲ್ ದೆಲ್ ರೊಸಾರಿಯೋ ಬೊಚೇರೋ ಅವರಂತೆ ನಾವು ಸೇವೆ ಹಾಗೂ ಪ್ರಾರ್ಥನೆಯ ಮಾದರಿಯನ್ನು ಅನುಸರಿಸಬೇಕು. ಇವರು ಪ್ರಭುವಿನೆಡೆಗೆ ಹೇಗೆ ವಿಶ್ವಾಸ ಹಾಗೂ ಪ್ರೀತಿಯನ್ನು ಹೊಂದಿ ಜನತೆಗೆ ಸೇವೆ ಸಲ್ಲಿಸಿದರೋ, ಅದೇ ರೀತಿ ನಾವು ಸಹ ಸೇವೆಯನ್ನು ಮಾಡಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

"ನಮ್ಮ ದೈವಕರೆ ಎಂಬುದು ಯಾಜಕರಾದ ಮೇಲೆ ಮುಗಿಯುವುದಿಲ್ಲ. ಬದಲಿಗೆ ದೇವರು ನಮ್ಮನ್ನು ಪ್ರೀತಿಯಿಂದ ಕರೆದಿದ್ದಾರೆ. ಅವರ ಯೋಜನೆಗಳನ್ನು ನಮ್ಮ ಮೂಲಕ ಶೃತಪಡಿಸುತ್ತಾರೆ ಎಂಬುದಾಗಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು. "ಪ್ರಭು ನಮಗೆ ವಿಶೇಷ ಪ್ರೀತಿಯನ್ನು ತೋರಿದ್ದಾರೆ ಹಾಗಾಗಿ ನಾವು ಅವರ ದ್ರಾಕ್ಷಾತೋಟದಲ್ಲಿ ಸೇವಕರಾಗಿ ಆಯ್ಕೆಯಾಗಿದ್ದೇವೆ" ಎಂದು ಹೇಳಿದರು.

ಯಾಜಕರ ಆಂತರಿಕ ಜೀವನದ ಕುರಿತು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ನಿಮ್ಮ ಆಂತರಿಕ ಜೀವನದಲ್ಲಿ ದೈವಕರೆಯ ಕಿಡಿ ಹಾಗೂ ಜ್ವಾಲೆಯನ್ನು ಸದಾ ಕಾಪಿಟ್ಟುಕೊಳ್ಳಬೇಕು. ಅದೇ ನಮ್ಮ ವಿಶ್ವಾಸವಾಗಿದೆ" ಎಂದು ಅವರು ನೆರೆದಿದ್ದ ಅರ್ಜೆಂಟೀನಾದ ಗುರುಗಳಿಗೆ ಕಿವಿಮಾತನ್ನು ಹೇಳಿದರು.      

16 ಜನವರಿ 2025, 15:15