MAP

ದೈವವಾಕ್ಯದ ಭಾನುವಾರದಂದು ಬಲಿಪೂಜೆ ಅರ್ಪಿಸಲಿರುವ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಜನವರಿ 26 ರಂದು ವ್ಯಾಟಿಕನ್ ನಗರದ ಸಂತ ಪೇತ್ರರ ಮಹಾದೇವಾಲಯದಲ್ಲಿ ದೇವರವಾಕ್ಯದ ಭಾನುವಾರದ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಜನವರಿ 26 ರಂದು ವ್ಯಾಟಿಕನ್ ನಗರದ ಸಂತ ಪೇತ್ರರ ಮಹಾದೇವಾಲಯದಲ್ಲಿ ದೇವರವಾಕ್ಯದ ಭಾನುವಾರದ ಬಲಿಪೂಜೆಯನ್ನು ಅರ್ಪಿಸಲಿದ್ದಾರೆ.

ದೇವರ ವಾಕ್ಯದ ಪ್ರಾಮುಖ್ಯತೆಯನ್ನು ತಿಳಿಸಲು ಪೋಪ್ ಫ್ರಾನ್ಸಿಸ್ ಅವರು ದೇವರ ವಾಕ್ಯದ ಭಾನುವಾರದ ಆಚರಣೆಯನ್ನು 2019 ರಲ್ಲಿ ಸ್ಥಾಪಿಸಿದರು. ಅಂದಿನಿಂದ ಪ್ರತಿ ವರ್ಷ ಜನವರಿ ತಿಂಗಳಲ್ಲಿ ದೇವರ ವಾಕ್ಯದ ಭಾನುವಾರವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

"ನಿಮ್ಮ ವಾಕ್ಯದಲ್ಲಿ ಭರವಸೆ ಇಟ್ಟಿದ್ದೇನೆ"  ಎಂಬ ಕೀರ್ತನೆ ಗ್ರಂಥದ ವಾಕ್ಯವು ಈ ವರ್ಷದ ದೇವರ ವಾಕ್ಯದ ಭಾನುವಾರದ ಶೀರ್ಷಿಕೆಯಾಗಿದೆ. 

ಬಲಿಪೂಜೆ ಆದ ನಂತರ ಪೋಪ್ ಫ್ರಾನ್ಸಿಸರು ನೆರೆದಿರುವ ಭಕ್ತಾಧಿಗಳಿಗೆ ಸಂತ ಲೂಕರ ಶುಭಸಂದೇಶದ ಪ್ರತಿಗಳನ್ನು ಹಂಚುತ್ತಾರೆ. ಇದು ದೇವರ ವಾಕ್ಯವನ್ನು ಸಾರುವ ಸಾಂಪ್ರದಾಯಿಕ ವಿಧಾನವಾಗಿದೆ.  

21 ಜನವರಿ 2025, 13:54