ವಿನ್ಸೆನ್ಷಿಯನ್ನರಿಗೆ ಪೋಪ್: ನಿಮ್ಮ ಸ್ಥಾಪಕರ ಸೇವೆಯ ದೃಷ್ಟಿ ಧರ್ಮಸಭೆಗೆ ನವೀಕರಣವಾಗಿದೆ
ವರದಿ: ವ್ಯಾಟಿಕನ್ ನ್ಯೂಸ್
ಸೊಸೈಟಿ ಆಫ್ ಸೇಂಟ್ ವಿನ್ಸೆಂಟ್ ಡಿ ಪೌಲ್ ಧಾರ್ಮಿಕ ಸಭೆಯು ಸ್ಥಾಪನೆಯಾಗಿ 400 ವರ್ಷಗಳಾಗುತ್ತಿರುವ ಹಿನ್ನೆಲೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಈ ಸಭೆಯ ಸುಪೀರಿಯರ್ ಜನರಲ್ ಅವರಿಗೆ ಪತ್ರವನ್ನು ಬರೆದಿದ್ದಾರೆ. ಈ ವೇಳೆ ಅವರು "ನಿಮ್ಮ ಸ್ಥಾಪಕರ ಸೇವೆಯ ದೃಷ್ಟಿ ಧರ್ಮಸಭೆಗೆ ನವೀಕರಣವಾಗಿದೆ" ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಹೇಗೆ ಈ ಧಾರ್ಮಿಕ ಸಭೆಯು ನಾಲ್ಕು ಶತಮಾನಗಳಿಂದ ಧರ್ಮಸಭೆಗೆ ವಿವಿಧ ರೀತಿಯಲ್ಲಿ ಆಧ್ಯಾತ್ಮಿಕವಾಗಿ ನೆರವಾಗುತ್ತಾ ಬರುತ್ತಿದೆ ಎಂದು ಹೇಳಿದ್ದಾರೆ. "ನಿಮ್ಮ ಸ್ಥಾಪಕರ ಪ್ರೇಷಿತ ಹುಮ್ಮಸ್ಸಿನಂತೆ ಹಾಗೂ ಸೇವಾ ಮನೋಭಾವದಂತೆ ನೀವೂ ಸಹ ಅವರ ಹಾದಿಯಲ್ಲಿ ಮುಂದುವರೆಯಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
"ಈ ಸಭೆಯ ಮೂಲಕ ಧರ್ಮಸಭೆಗೆ ವಿವಿಧ ಮಹಾನ್ ವ್ಯಕ್ತಿಗಳು ಸಿಕ್ಕಿದ್ದಾರೆ. ವಿವಿಧ ಸಂತರುಗಳು ಹಾಗೂ ಸತ್ಪುರುಷರು ತಮ್ಮ ವೈವಿಧ್ಯಮಯ ಸೇವೆಯ ಮೂಲಕ ಪ್ರಭುವಿನ ಸೇವೆಯನ್ನು ಮಾಡಿ, ಮಾದರಿಯಾಗಿ ಜೀವಿಸಿದ್ದಾರೆ. ಸಾಮಾಜಿಕ ಸೇವೆಯನ್ನು ಪ್ರೋತ್ಸಾಹಿಸುವಲ್ಲಿ ನಿಮ್ಮ ಸಭೆಯು ಮಹತ್ತರ ಸೇವೆಯನ್ನು ಮಾಡಿದೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ಇದೇ ವೇಳೆ ಅವರು ಸಂತ ವಿನ್ಸೆಂಟ್ ಡಿ ಪೌಲ್ ಸಭೆಯ ಸೇವಾ ತ್ಯಾಗವನ್ನು ಶ್ಲಾಘಿಸಿದ್ದಾರೆ.
ನಿಮ್ಮ ಸ್ಥಾಪಕರ ಪ್ರೇಷಿತ ಹುಮ್ಮಸ್ಸಿನಂತೆ ಹಾಗೂ ಸೇವಾ ಮನೋಭಾವದಂತೆ ನೀವೂ ಸಹ ಅವರ ಹಾದಿಯಲ್ಲಿ ಮುಂದುವರೆಯಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಅಂತಿಮವಾಗಿ "ಮತ್ತಷ್ಟು ಹಾಗೂ ಮಗದಷ್ಟು ಸೇವೆ ನಿಮ್ಮಿಂದಾಗಲಿ. ಆ ಮೂಲಕ ಧರ್ಮಸಭೆಯಲ್ಲಿ ವಿಶ್ವಾಸ ಹೆಚ್ಚಾಗಲಿ" ಎಂದು ಹೇಳಿದ್ದಾರೆ.