MAP

ಸುಡಾನ್ ಮತ್ತು ಕೊಲಂಬಿಯಾದಲ್ಲಿ ಶಾಂತಿಗಾಗಿ ಪೋಪ್ ಫ್ರಾನ್ಸಿಸ್ ಮನವಿ

ಪೋಪ್ ಫ್ರಾನ್ಸಿಸ್ ಅವರು ಪ್ರಸ್ತುತ ಸುಡಾನ್ ದೇಶದಲ್ಲಿ ಯುದ್ಧ ಉಲ್ಬಣಗೊಂಡಿರುವ ನಿಟ್ಟಿನಲ್ಲಿ ಮಾತನಾಡಿದ್ದು, ಇಲ್ಲಿ ಯುದ್ಧ ನಡೆಸುತ್ತಿರುವವರಿಗೆ ಕದನ ವಿರಾಮ ಘೋಷಿಸುವಂತೆ ಕರೆ ನೀಡಿದ್ದಾರೆ. ಯುದ್ಧದ ಕಾರಣದಿಂದ ಸಾವಿರಾರು ಜೀವಗಳು ಬಲಿಯಾಗಲಿದ್ದು, ಇದನ್ನು ತಪ್ಪಿಸಲು ಹಾಗೂ ಸಮಸ್ಯೆಗಳನ್ನು ಪರಿಹರಿಸಲು ಶಾಂತಿಯ ಮಾರ್ಗವನ್ನು ಕಂಡುಕೊಳ್ಳಬೇಕು ಎಂದು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ವ್ಯಾಟಿಕನ್ ನಗರದಲ್ಲಿ ಭಾನುವಾರ ತಮ್ಮ ತ್ರಿಕಾಲ ಪ್ರಾರ್ಥನೆಯ ನಂತರ ಪೋಪ್ ಫ್ರಾನ್ಸಿಸ್ ಅವರು ಈ ಮನವಿಯನ್ನು ಮಾಡಿದ್ದಾರೆ.

ಅವರು ಸುಡಾನ್‌ನಲ್ಲಿ ಹೋರಾಡುತ್ತಿರುವ ಪಕ್ಷಗಳನ್ನು ಹೋರಾಟವನ್ನು ನಿಲ್ಲಿಸಲು ಮತ್ತು ಮಾತುಕತೆಯ ಮೇಜಿನ ಬಳಿ ಕುಳಿತುಕೊಳ್ಳಲು ಆಹ್ವಾನಿಸಿದರು, ಶಾಂತಿ ಮಾತುಕತೆಗಳನ್ನು ಬೆಂಬಲಿಸಲು ಮತ್ತು ಮಾನವೀಯ ಸಹಾಯವನ್ನು ಸುಗಮಗೊಳಿಸಲು ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದರು.

"ನಾನು ಎರಡೂ ದೇಶಗಳ ಜನರಿಗೆ ಹತ್ತಿರವಾಗಿ ನಿಲ್ಲುತ್ತೇನೆ ಮತ್ತು ಎಲ್ಲಾ ರೀತಿಯ ಹಿಂಸಾಚಾರಗಳನ್ನು ತಪ್ಪಿಸಲು ಭ್ರಾತೃತ್ವ, ಐಕಮತ್ಯಕ್ಕೆ ಅವರನ್ನು ಆಹ್ವಾನಿಸುತ್ತೇನೆ" ಎಂದು ಅವರು ಹೇಳಿದರು.

ಕೊಲಂಬಿಯಾದ ಕ್ಯಾಟಟಂಬೊ ಪ್ರದೇಶದಲ್ಲಿನ ಪರಿಸ್ಥಿತಿಯ ಬಗ್ಗೆ ಪೋಪ್ ಕಳವಳ ವ್ಯಕ್ತಪಡಿಸಿದ್ದಾರೆ, ಅಲ್ಲಿ ಸಶಸ್ತ್ರ ಗುಂಪುಗಳ ನಡುವಿನ ಘರ್ಷಣೆಗಳಿಂದ ಅನೇಕ ನಾಗರಿಕರು ಕೊಲ್ಲಲ್ಪಟ್ಟರು, ಇದು 30,000 ಕ್ಕೂ ಹೆಚ್ಚು ಜನರನ್ನು ಅವರ ಮನೆಗಳಿಂದ ಹೊರದಬ್ಬಿ ಅವರು ನಿರಾಶ್ರಿತರಾಗುವಂತೆ ಮಾಡಿದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

26 ಜನವರಿ 2025, 15:10