ಮ್ಯಾನ್ಮಾರ್ ದೇಶದಲ್ಲಿ ಭೂಕುಸಿತ; ಐಕ್ಯತೆ ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಮ್ಯಾನ್ಮಾರ್ ದೇಶದ ಕಾಚಿನ್ ರಾಜ್ಯದಲ್ಲಿ ತೀವ್ರ ಭೂಕುಸಿತಗಳು ಸಂಭವಿಸಿದ್ದು, ಅನೇಕರಿಗೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು ಇದರಿಂದ ಭಾಧಿತರಾದವರಿಗೆ ಐಕ್ಯತೆಯನ್ನು ವ್ಯಕ್ತಪಡಿಸಿದ್ದಾರೆ ಹಾಗೂ ಅವರಿಗಾಗಿ ಪ್ರಾರ್ಥಿಸುವ ಭರವಸೆಯನ್ನು ನೀಡಿದ್ದಾರೆ.
ಈ ದುರಂತದಿಂದ ಪೀಡಿತ ಜನಸಂಖ್ಯೆಗೆ ತಾನು ಹತ್ತಿರವಾಗಿದ್ದೇನೆ ಮತ್ತು ಪ್ರಾಣ ಕಳೆದುಕೊಂಡವರಿಗಾಗಿ ಮತ್ತು ಅವರ ಕುಟುಂಬಗಳಿಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದು ಪೋಪ್ ಹೇಳಿದರು.
"ಇಂತಹ ಪರೀಕ್ಷೆಗಳನ್ನು ಸಹಿಸಿಕೊಳ್ಳುತ್ತಿರುವ ಈ ಸಹೋದರ ಸಹೋದರಿಯರಿಗೆ ಅಂತರಾಷ್ಟ್ರೀಯ ಸಮುದಾಯದ ಬೆಂಬಲ ಮತ್ತು ಒಗ್ಗಟ್ಟಿನ ಕೊರತೆಯಾಗದಿರಲಿ" ಎಂದು ಅವರು ಮನವಿ ಮಾಡಿದರು.
ಎಂದಿನಂತೆ, ನಡೆಯುತ್ತಿರುವ ಯುದ್ಧಗಳು ಮತ್ತು ಘರ್ಷಣೆಗಳಿಂದ ಬಳಲುತ್ತಿರುವ ಎಲ್ಲರಿಗೂ ಪ್ರಾರ್ಥಿಸಲು ಪವಿತ್ರ ತಂದೆಯು ಎಲ್ಲರಿಗೂ ಒತ್ತಾಯಿಸಿದರು.
"ನಾವು ಮರೆಯಬಾರದು ಯುಕ್ರೇನ್, ಮ್ಯಾನ್ಮಾರ್, ಪ್ಯಾಲೆಸ್ಟೈನ್, ಇಸ್ರೇಲ್ ಮತ್ತು ಅನೇಕ ದೇಶಗಳು ಯುದ್ಧದಲ್ಲಿ ಹುತಾತ್ಮರಾದರು." ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.
ಶಾಂತಿಗಾಗಿ ಪ್ರಾರ್ಥಿಸಲು ಎಲ್ಲಾ ಭಕ್ತಾಧಿಗಳನ್ನು ಒತ್ತಾಯಿಸಿದ ಅವರು, ಯುದ್ಧವು ಯಾವಾಗಲೂ ಸೋಲು ಎಂದು ನೆನಪಿಸಿಕೊಂಡರು.