ಪೋಪ್ ಫ್ರಾನ್ಸಿಸ್: ಜಗತ್ತಿಗೆ ಭರವಸೆಯನ್ನು ತರಲು ನಾವು ಶುಭ ಸಂದೇಶದ ಸಂತೋಷವನ್ನು ಹಂಚಿಕೊಳ್ಳಬೇಕು
ವರದಿ: ಲೀಸಾ ಝೆಂಗಾರಿನಿ
ಪೋಪ್ ಫ್ರಾನ್ಸಿಸ್ ಅವರು ಫ್ರೆಂಚ್ ಮಿಷನರಿ ಸಂಸ್ಥೆಯಾದ ಕಾಂಗ್ರೆಸ್ ಮಿಷನ್ ಸಂಸ್ಥೆಯ ಪ್ರತಿನಿಧಿಗಳನ್ನು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ. ಒಡೆದು ಹೋಗಿರುವ ಈ ಜಗತ್ತಿಗೆ ಸಾಂತ್ವನವನ್ನು ತರಲು ಶುಭಸಂದೇಶದ ಸಂತೋಷವನ್ನು ಹಂಚಿಕೊಳ್ಳಲು ಇವರಿಗೆ ಪೋಪ್ ಫ್ರಾನ್ಸಿಸ್ ಅವರು ಕರೆ ನೀಡಿದ್ದಾರೆ.
"ಮನುಷ್ಯರು ನೋವು ಹಾಗೂ ನಲಿವುಗಳನ್ನು ಅನುಭವಿಸುತ್ತಿರುವ ಜಗತ್ತಿಗೆ ಹೋಗಲು ಭಯವನ್ನು ಪಡಬೇಡಿ. ಸುವಾರ್ತಾ ಪ್ರಸಾರಕರಾಗಿ ನೀವೆಲ್ಲರೂ ಧೈರ್ಯದಿಂದ ಮುನ್ನುಗ್ಗಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಈ ಸಂಸ್ಥೆಯ ಪ್ರತಿನಿಧಿಗಳಿಗೆ ಹೇಳಿದ್ದಾರೆ.
ಈ ಸಂಸ್ಥೆಯು ವರ್ಷದಲ್ಲಿ ಎರಡರಿಂದ ಮೂರು ಬಾರಿಗೆ ಈ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಈ ಕಾರ್ಯಕ್ರಮದ ಮೂಲಕ ಇಡೀ ದೇಶದ ಮೂಲೆ-ಮೂಲೆಗಳಿಂದ ಜನರನ್ನು ಇಲ್ಲಿಗೆ ಕರೆತಂದು ಪ್ರಾರ್ಥಿಸುವಂತೆ ಹಾಗೂ ಆ ಮೂಲಕ ಶುಭ ಸಂದೇಶವನ್ನು ಸಾರುವಂತೆ ಇದು ಪ್ರೇರೇಪಿಸುತ್ತದೆ.
ನವೆಂಬರ್‌ನಲ್ಲಿ ಬರ್ಸಿಯಲ್ಲಿ ನಡೆಯಲಿರುವ ಈ ವರ್ಷದ ಕೂಟವು ಪ್ರಸ್ತುತ ಭರವಸೆಯ ಜುಬಿಲಿ ಸಂದರ್ಭದಲ್ಲಿ ನಡೆಯುತ್ತದೆ ಎಂದು ಗಮನಿಸಿದ ಪೋಪ್ ಫ್ರಾನ್ಸಿಸ್, "ಸಂತೋಷವು ಭರವಸೆ ಮತ್ತು ಬೇರ್ಪಡಿಸಲಾಗದು" ಎಂದು ಹೇಳಿದರು. ಇದು "ಕ್ಷಣಿಕ ಉತ್ಸಾಹಕ್ಕೆ ಸೀಮಿತವಾಗಿಲ್ಲ ಆದರೆ ಕ್ರಿಸ್ತನೊಂದಿಗಿನ ವೈಯಕ್ತಿಕ ಮುಖಾಮುಖಿಯಿಂದ ಉದ್ಭವಿಸುತ್ತದೆ ಮತ್ತು ನಮ್ಮ ಸಹೋದರ ಸಹೋದರಿಯರ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ" ಎಂದು ಹೇಳಿದರು.