ಹಿಲ್ಟನ್ ಪ್ರತಿಷ್ಟಾನಕ್ಕೆ ಪೋಪ್: ಬಡವರಿಗೆ ಸೇವೆ ಮಾಡಲು ಧರ್ಮಸಭೆಗೆ ಧಾರ್ಮಿಕ ಮಹಿಳೆಯರ ಅವಶ್ಯಕತೆ ಇದೆ
ವರದಿ: ವ್ಯಾಟಿಕನ್ ನ್ಯೂಸ್
ಅಮೇರಿಕಾದ ಕಾನ್ರಾಡ್ ಹಿಲ್ಟನ್ ಪ್ರತಿಷ್ಟಾನದ ಸದಸ್ಯರನ್ನು ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ಅವರನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಬಡವರಿಗೆ ಸೇವೆ ಮಾಡಲು ಧರ್ಮಸಭೆಗೆ ಧಾರ್ಮಿಕ ಮಹಿಳೆಯರ ಅವಶ್ಯಕತೆ ಇದೆ" ಎಂದು ಹೇಳಿದ್ದಾರೆ.
ಪ್ರಸ್ತುತ ಹಿಲ್ಟನ್ ಪ್ರತಿಷ್ಟಾನವು ಮಾಡುತ್ತಿರುವ ಬಡವರ ಸೇವೆಯ ಕುರಿತು ಮಾತನಾಡಿ, ಅವರನ್ನು ಶ್ಲಾಘಿಸಿದ ಪೋಪ್ ಫ್ರಾನ್ಸಿಸ್ ಅವರು ನೀವು ಧಾರ್ಮಿಕ ಬದುಕಿನಲ್ಲಿರುವ ಭಗಿನಿಯರು ಹಾಗೂ ಮಹಿಳೆಯರಿಗೆ ಸಹಾಯ ಮಾಡುವ ಮೂಲಕ ಧರ್ಮಸಭೆಯು ತನ್ನ ಪಿತೃಪ್ರಧಾನ ವ್ಯವಸ್ಥೆಯಿಂದ ಹೊರಬರಲು ನೆರವನ್ನು ನೀಡುತ್ತಿದ್ದೀರಿ ಎಂದು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ಎಲ್ಲರಿಗೂ ಸೇವೆ ಮಾಡಬೇಕು ಎಂಬ ಕರೆಯಿದೆ. ಆದರೆ ನಮ್ಮ ಸೇವೆಗಳು ಸಮಾಜದ ವಿಭಿನ್ನ ಸ್ಥರಗಳಿಗೆ ಹಾಗೂ ವಿಭಿನ್ನ ರೀತಿಯಲ್ಲಿ ಮಾಡುವಂತದ್ದಾಗಿದೆ" ಎಂದು ಹೇಳಿದರು. ಈ ನಿಮ್ಮ ಪ್ರತಿಷ್ಟಾನವು ಮಹಿಳಾ ಧಾರ್ಮಿಕ ವ್ಯಕ್ತಿಗಳನ್ನು ಅಂದರೆ ಭಗಿನಿಯರನ್ನು ಧಾರ್ಮಿಕ ಬದುಕಿಗೆ ತರಭೇತಿ ಹೊಂದಿ, ಹಾಗೂ ಆ ಮೂಲಕ ಕ್ರಿಸ್ತೀಯ ಧಾರ್ಮಿಕ ಬದುಕನ್ನು ರೂಪಿಸಲು ಸಹಾಯ ಮಾಡುತ್ತಿದ್ದೀರಿ. ಇದಕ್ಕಾಗಿ ನನ್ನ ಧನ್ಯವಾಗಳು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
1944 ರಲ್ಲಿ ಪ್ರಸಿದ್ಧ ಹೋಟೆಲ್ ಉದ್ಯಮಿ ಕಾನ್ರಾಡ್ ಹಿಲ್ಟನ್ ಅವರು ಈ ಪ್ರತಿಷ್ಟಾನವನ್ನು ಸ್ಥಾಪಿಸಿದರು. ಈ ಪ್ರತಿಷ್ಠಾನವು ಅನುದಾನಗಳು, ಪಾಲುದಾರಿಕೆಗಳು ಮತ್ತು ವಕಾಲತ್ತುಗಳ ಮೂಲಕ ವಿಶ್ವಾದ್ಯಂತ ನಿರ್ಗತಿಕರು ಮತ್ತು ದುರ್ಬಲ ಜನರ ಜೀವನವನ್ನು ಸುಧಾರಿಸಲು ಗಮನವನ್ನು ಕೇಂದ್ರೀಕರಿಸುತ್ತದೆ.
ಈ ಪ್ರತಿಷ್ಠಾನವು ಮನೆಯಿಲ್ಲದಿರುವಿಕೆ, ವ್ಯಸನ, ಶಿಕ್ಷಣ, ಬಾಲ್ಯದ ಬೆಳವಣಿಗೆ, ವಲಸೆ ಮತ್ತು ಜಾಗತಿಕ ಆರೋಗ್ಯದಂತಹ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನೈಸರ್ಗಿಕ ವಿಪತ್ತುಗಳು ಮತ್ತು ಇತರ ಬಿಕ್ಕಟ್ಟುಗಳಿಂದ ಪೀಡಿತ ಸಮುದಾಯಗಳಿಗೆ ಬೆಂಬಲವನ್ನು ಒದಗಿಸುತ್ತದೆ.