MAP

ಪೋಪ್ ಫ್ರಾನ್ಸಿಸ್: ನಾನು ಗಾಝಾದ ಧರ್ಮಕೇಂದ್ರಕ್ಕೆ ಕರೆ ಮಾಡಿ ಮಾತನಾಡಿದೆ; ಅವರು ಸಂತೋಷವಾಗಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಇಂದು ಗಾಝಾ ಪಟ್ಟಿಯಲ್ಲಿರುವ ಪವಿತ್ರ ಹೃದಯದ ದೇವಾಲಯ ಧರ್ಮಕೇಂದ್ರಕ್ಕೆ ಕರೆ ಮಾಡಿ ಮಾತನಾಡಿದ್ದಾರೆ. ಅಲ್ಲಿನ ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ತಿಳಿದುಕೊಂಡ ಪೋಪ್ ಫ್ರಾನ್ಸಿಸ್ ಅವರು ಈ ವಿಷಯವನ್ನು ಸಾರ್ವಜನಿಕ ಭೇಟಿಯಲ್ಲಿ ಭಕ್ತಾಧಿಗಳೊಂದಿಗೆ ಹಂಚಿಕೊಂಡಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

"ನಾನು ಯಾವಾಗಲೂ ಮಾಡುವಂತೆ ನಿನ್ನೆಯೂ ಸಹ ಗಾಝಾಕ್ಕೆ ಕರೆ ಮಾಡಿ ಮಾತನಾಡಿದೆ. ಅವರು ಅಲ್ಲಿ ಸಂತೋಷವಾಗಿದ್ದಾರೆ. ಸುಮಾರು 600 ಜನರು ಅಲ್ಲಿದ್ದಾರೆ. ಇಂದು ನಾವು ಕಾಳುಗಳನ್ನು ಹಾಗೂ ಸ್ವಲ್ಪ ಚಿಕನ್ ಅನ್ನು ತಿಂದೆವು ಎಂದು ನನಗೆ ಹೇಳಿದರು. ಅವರು ಸಂತೋಷದಿಂದ ಇದ್ದಾರೆ ಎಂಬುದು ಖುಷಿಯ ಸಂಗತಿ" ಎಂದು ಪೋಪ್ ಫ್ರಾನ್ಸಿಸ್ ಅವರು ನೆರೆದಿದ್ದ ಭಕ್ತಾಧಿಗಳಿಗೆ ಹೇಳಿದರು.

ಕಳೆದ ಹದಿನೈದು ತಿಂಗಳಿನಿಂದ ಈವರೆಗೂ ಪೋಪ್ ಫ್ರಾನ್ಸಿಸ್ ಅವರು ಗಾಝಾದ ಪರಿಸ್ಥಿತಿಯ ಕುರಿತು ಅವಲೋಕಿಸುತ್ತಿದ್ದು, ಇಲ್ಲಿನ ಜನತೆ ಮೇಲೆ ಅವರು ವಿಶೇಷ ಪ್ರೀತಿಯನ್ನು ಹೊಂದಿದ್ದಾರೆ. ಇಲ್ಲಿನ ಸ್ಥಿತಿಗತಿಗಳ ಕುರಿತು ಪ್ರತಿದಿನ ಮಾಹಿತಿ ಪಡೆಯುತ್ತಿದ್ದು, ಅವರಿಗೆ ಬೇಕಾದ ಎಲ್ಲಾ ರೀತಿಯ ನೆರವನ್ನು ನೀಡುತ್ತಿದ್ದಾರೆ.

ಅದಲ್ಲದೆ ಪೋಪ್ ಫ್ರಾನ್ಸಿಸ್ ಅವರು ಎಲ್ಲಾ ವೇದಿಕೆಗಳಲ್ಲಿ ವಿಶ್ವ ಶಾಂತಿಯ ಕುರಿತು ಮಾತನಾಡುತ್ತಿದ್ದು, ವಿಶ್ವದಲ್ಲಿ ನಡೆಯುತ್ತಿರುವ ಎಲ್ಲಾ ರೀತಿಯ ಯುದ್ಧಗಳು ನಿಂತು ಜಗತ್ತಿನಲ್ಲಿ ಶಾಂತಿ ಮೂಡಬೇಕೆಂದು ಹೇಳುತ್ತಾರೆ. ಯುದ್ಧ ಎಂಬುದು ಎಂದಿಗೂ ಸೋಲು ಎಂದು ಹೇಳುವ ಪೋಪ್ ಫ್ರಾನ್ಸಿಸ್ ಅವರು ಯುದ್ಧ ಪ್ರದೇಶಗಳಲ್ಲಿ ಶಾಶ್ವತ ಕದನ ವಿರಾಮಕ್ಕಾಗಿ ಮನವಿ ಹಾಗೂ ಒತ್ತಾಯಗಳನ್ನು ಮಾಡಿದ್ದಾರೆ.    

22 ಜನವರಿ 2025, 17:44