MAP

ಕಾಂಗೋ ದೇಶದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದ ಪೋಪ್ ಫ್ರಾನ್ಸಿಸ್

ಕಾಂಗೋ ದೇಶದಲ್ಲಿ ಬಂಡಾಯಗಾರರು ಬಂಡೆದ್ದ ಕಾರಣ ಇಲ್ಲಿನ ಗೋಮಾ ಪ್ರದೇಶದಲ್ಲಿನ ಜನತೆ ಊರುಗಳನ್ನು ತೊರೆದು ಪಲಾಯನ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿ ಶಾಂತಿ ನೆಲೆಸಬೇಕೆಂದು ಪೋಪ್ ಫ್ರಾನ್ಸಿಸ್ ಅವರು ಪ್ರಾರ್ಥಿಸಿ, ಕರೆ ನೀಡಿದ್ದಾರೆ.

ವರದಿ: ಡೆವಿನ್ ವಾಟ್ಕಿನ್ಸ್

ಕಾಂಗೋ ದೇಶದಲ್ಲಿ ಬಂಡಾಯಗಾರರು ಬಂಡೆದ್ದ ಕಾರಣ ಇಲ್ಲಿನ ಗೋಮಾ ಪ್ರದೇಶದಲ್ಲಿನ ಜನತೆ ಊರುಗಳನ್ನು ತೊರೆದು ಪಲಾಯನ ಮಾಡುತ್ತಿದ್ದಾರೆ. ಈ ವೇಳೆ ಅಲ್ಲಿ ಶಾಂತಿ ನೆಲೆಸಬೇಕೆಂದು ಪೋಪ್ ಫ್ರಾನ್ಸಿಸ್ ಅವರು ಪ್ರಾರ್ಥಿಸಿ, ಕರೆ ನೀಡಿದ್ದಾರೆ. 

"ಕಾಂಗೋ ದೇಶದಲ್ಲಿ ಶಾಂತಿ ನೆಲೆಯೂರಲು ನಾನು ಪ್ರಾರ್ಥಿಸುವ ಈ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಸರ್ಕಾರ ಹಾಗೂ ಅಂತರಾಷ್ಟ್ರೀಯ ಸಮುದಾಯವು ಈ ಸಮಸ್ಯೆಯನ್ನು ಬಗೆಹರಿಸಲು ಸೂಕ್ತ ಹಾಗೂ ತ್ವರಿತ ಕ್ರಮಗಳನ್ನು ಕೈಗೊಳ್ಳಲಿ ಎಂದು ಆಶಿಸುತ್ತೇನೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಬುಧವಾರ ತಮ್ಮ ವಾರದ ಸಾರ್ವಜನಿಕ ಭೇಟಿಯಲ್ಲಿ ಈ ಮನವಿಯನ್ನು ಮಾಡಿದ್ದಾರೆ.

ಕಾಂಗೋ ದೇಶದಲ್ಲಿ ಪ್ರಸ್ತುತ ಉಂಟಾಗುತ್ತಿರುವ ಅವ್ಯವಸ್ಥೆ, ಬಂಡುಕೋರರ ದಾಳಿಗಳೂ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಬೆಳಕನ್ನು ಚೆಲ್ಲಿರುವ ಪೋಪ್ ಫ್ರಾನ್ಸಿಸ್ ಅವರು ಇಲ್ಲಿನ ಸಮಸ್ಯೆಗೆ ಶೀಘ್ರವೇ ಪರಿಹಾರವನ್ನು ಕೈಗೊಳ್ಳಬೇಕು ಹಾಗೂ ಆ ಮೂಲಕ ಅಲ್ಲಿನ ಜನತೆ ನಿಶ್ಚಿಂತೆಯಿಂದ ಜೀವಿಸಲು ಅವಕಾಶಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಸಂತ ಜೋಸೆಫರ ಮಾದರಿ

ಪೋಪ್ ಫ್ರಾನ್ಸಿಸ್ ಅವರು ಇಂದು ವ್ಯಾಟಿಕನ್ ನಗರದಲ್ಲಿ ಸಾರ್ವಜನಿಕವಾಗಿ ಭಕ್ತಾಧಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಅವರು ಸಂತ ಜೋಸೆಫರ ಕುರಿತು ಮಾತನಾಡಿದ್ದು, ಸಂತ ಜೋಸೆಫರ ಪವಿತ್ರ ಹಾಗೂ ವಿಶ್ವಾಸದ ಮಾದರಿಯನ್ನು ನಾವೆಲ್ಲರೂ ಪ್ರೀತಿಯಿಂದ ಅನುಕರಿಸಬೇಕೆಂದು ಹೇಳಿದ್ದಾರೆ. 

ದೇವರ ಯೋಜನೆಗಳನ್ನು ನಮ್ಮ ಬದುಕಿಗೆ ಹೇಗೆ ಆಹ್ವಾನಿಸಬೇಕು ಎಂಬ ಕುರಿತು ಸಂತ ಜೋಸೆಫರು ನಮಗೆ ಹಾದಿಯನ್ನು ತೋರುತ್ತಾರೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.

ಜ್ಯೂಬಿಲಿ ವರ್ಷದಲ್ಲಿ 'ಯೇಸುಕ್ರಿಸ್ತರೇ ನಮ್ಮ ಭರವಸೆ" ಎಂಬ ಕುರಿತು ಧರ್ಮೋಪದೇಶವನ್ನು ಮುಂದುವರೆಸಿದ ಪೋಪ್ ಫ್ರಾನ್ಸಿಸ್ ಅವರು ಈ ವಾರ ಸಂತ ಜೋಸೆಫರ ಮಾದರಿಯ ಕುರಿತು ಚಿಂತನೆಯನ್ನು ವ್ಯಕ್ತಪಡಿಸಿದರು.

ದೇವರ ಚಿತ್ತದ ಕುರಿತು ತನ್ನದೇ ಆದ ಸಣ್ಣಪುಟ್ಟ ಅಪನಂಬಿಕೆಗಳಿದ್ದರೂ ಸಹ ಹೇಗೆ ಸಂತ ಜೋಸೆಫರ ದೇವರ ಚಿತ್ತವನ್ನು ನೆರವೇರಿಸಲು ಮಾತೆ ಮರಿಯಮ್ಮನವರನ್ನು ತನ್ನ ಪತ್ನಿಯನ್ನಾಗಿ ಸ್ವೀಕರಿಸಲು ಒಪ್ಪುತ್ತಾರೆ ಹಾಗೂ ಆ ಮೂಲಕ ಪವಿತ್ರ ಕುಟುಂಬದ ಪೋಷಕರಾಗುತ್ತಾರೆ ಎಂಬ ಕುರಿತು ಪೋಪ್ ಫ್ರಾನ್ಸಿಸ್ ಅವರು ಇಂದು ಹೇಳಿದರು.

ಮುಂದುವರೆದು ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು "ಸಂತ ಜೋಸೆಫರು ಮಾತನಾಡುವುದಿಲ್ಲ. ಬದಲಿಗೆ ಅವರು ನಂಬುತ್ತಾರೆ. ವಿಶ್ವಾಸವನ್ನಿಡುತ್ತಾರೆ. ಎಲ್ಲರಂತೆ ಅವರದು ಮಾತಲ್ಲ ಬದಲಿಗೆ ಕೃತಿ. ಅವರು ವಿಶ್ವಾಸದಿಂದ ನಡೆದುಕೊಳ್ಳುವವರಾಗಿದ್ದಾರೆ" ಎಂದು ಹೇಳಿದರು.

ಅಂತಿಮವಾಗಿ ಪೋಪ್ ಫ್ರಾನ್ಸಿಸ್ ಅವರು ಎಲ್ಲರಿಗೂ ಸಂತ ಜೋಸೆಫರ ಮಾದರಿಯನ್ನು ಅನುಸರಿಸುವಂತೆ ಕರೆ ನೀಡಿದರು.   

29 ಜನವರಿ 2025, 13:43