MAP

ಕಾರ್ಡಿನಲ್ ಏಂಜೆಲೋ ಅಮಾತೊ, ಎಸ್.ಡಿ.ಬಿ. ಕಾರ್ಡಿನಲ್ ಏಂಜೆಲೋ ಅಮಾತೊ, ಎಸ್.ಡಿ.ಬಿ. 

ಕಾರ್ಡಿನಲ್ ಎಂಜೆಲೋ ಅಮಾತೊ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ನಿನ್ನೆ ಅಗಲಿದ ಕಾರ್ಡಿನಲ್ ಎಂಜೆಲೋ ಅಮಾತೋ, ಎಸ್.ಡಿ.ಬಿ. ಅವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸುತ್ತಾ ಟೆಲಿಗ್ರಾಂ ಸಂದೇಶವನ್ನು ಸಲೇಷಿಯನ್ ಧಾರ್ಮಿಕ ಸಭೆಯ ವಿಕಾರ್ ರೆಕ್ಟರ್ ಮೇಜರ್ ಆಗಿರುವ ಫಾದರ್ ಸ್ಟೆಫಾನೊ ಮಾರ್ಟೊಗ್ಲಿಯೋ, ಎಸ್.ಡಿ.ಬಿ. ಅವರಿಗೆ ಕಳುಹಿಸಿದ್ದಾರೆ. ಈ ಸಂದೇಶದಲ್ಲಿ ಪೋಪ್ ಫ್ರಾನ್ಸಿಸ್ ಅವರು ಅಗಲಿದ ಕಾರ್ಡಿನಲ್ ಅವರಿಗಾಗಿ ಕಂಬನಿಯನ್ನು ಮಿಡಿದಿದ್ದಾರೆ.

ವರದಿ: ಬಾರ್ಬೆರಾ ಇನ್ನೊಸೆಂತಿ

"ಸಂತ ಡಾನ್ ಬಾಸ್ಕೋ ಅವರ ಆಧ್ಯಾತ್ಮಿಕ ಪುತ್ರರಾದ ಕಾರ್ಡಿನಲ್ ಎಂಜೆಲೋ ಅಮಾತೋ ಅವರು ನಿಷ್ಠೆಯಿಂದ ಧರ್ಮಸಭೆಯ ಸೇವೆಯನ್ನು ಮಾಡಿದ್ದಾರೆ. ವ್ಯಾಟಿಕನ್ನಿನ ವಿಶ್ವಾಸ ಪೀಠದ ಕಾರ್ಯದರ್ಶಿಯಾಗಿ, ಸಂತರುಗಳ ಪದವಿಗೇರಿಸುವ ಪೀಠದ ಉಸ್ತುವಾರಿಯಾಗಿ ಅವರು ದಶಕಗಳ ಕಾಲ ಬಹಳ ವಿಶ್ವಾಸಪೂರ್ವಕವಾಗಿ ಹಾಗೂ ಶ್ರದ್ಧೆಯಿಂದ ಸೇವೆಯನ್ನು ಸಲ್ಲಿಸಿದ್ದಾರೆ. ದಯಾಮಯ ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ. ಈ ಸಂದರ್ಭದಲ್ಲಿ ಸಲೇಷಿಯನ್ ಸಭೆಯ ಎಲ್ಲಾ ಗುರುಗಳಿಗೆ ನಾನು ನನ್ನ ಸಂತಾಪಗಳನ್ನು ಸೂಚಿಸುತ್ತಿದ್ದೇನೆ" ಎಂದು ಪೋಪ್ ಫ್ರಾನ್ಸಿಸ್ ಅವರು ತಮ್ಮ ಟೆಲಿಗ್ರಾಂ ಸಂದೇಶದಲ್ಲಿ ಹೇಳಿದ್ದಾರೆ.

"ಈ ಸಂದರ್ಭದಲ್ಲಿ ಮಾತೆ ಮರಿಯಮ್ಮನವರು ನಿಮ್ಮ ಜೊತೆ ಇದ್ದು, ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ. ನಿನ್ನೆ ಸಂತರುಗಳ ಪದವಿಗೇರಿಸುವ ಪೀಠದ ನಿಕಟ ಪೂರ್ವ ಉಸ್ತುವಾರಿಯಾಗಿದ್ದ ಕಾರ್ಡಿನಲ್ ಎಂಜೆಲೋ ಅಮಾತೋ, ಎಸ್.ಡಿ.ಬಿ. ಅವರು ಕೊನೆಯುಸಿರೆಳೆದರು. ಅವರು ಸಲೇಷಿಯನ್ಸ್ ಆಫ್ ಡಾನ್ ಬಾಸ್ಕೋ ಸಭೆಯ ಗುರುಗಳಾಗಿದ್ದರು.

01 ಜನವರಿ 2025, 13:18