MAP

ಮಕ್ಕಳಿಗೆ ಪೋಪ್ ಫ್ರಾನ್ಸಿಸ್: ನಿಜವಾದ ಸ್ನೇಹ ಭರವಸೆ ಮತ್ತು ನೋವನ್ನು ಹಂಚಿಕೊಳ್ಳುತ್ತದೆ

ಪೋಲ್ಯಾಂಡ್ ದೇಶದಲ್ಲಿ ಆಂಕಾಲಜಿ ಹಾಗೂ ಪೀಡಿಯಾಟ್ರಿಕ್ ಹೆಮಟಾಲಜಿ ವಿಭಾಗದ ಮಕ್ಕಳ ಜೊತೆಗೆ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ವೈದ್ಯಕೀಯ ಆರೈಕೆಯನ್ನು ಪಡೆಯಲು ಅಶಕ್ತರಾಗಿರುವ ಮಕ್ಕಳಿಗಾಗಿ ಪ್ರಾರ್ಥಿಸುವಂತೆ ಅವರನ್ನು ಪ್ರೋತ್ಸಾಹಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಲ್ಯಾಂಡ್ ದೇಶದಲ್ಲಿ ಆಂಕಾಲಜಿ ಹಾಗೂ ಪೀಡಿಯಾಟ್ರಿಕ್ ಹೆಮಟಾಲಜಿ ವಿಭಾಗದ ಮಕ್ಕಳ ಜೊತೆಗೆ ಮಾತನಾಡಿದ ಪೋಪ್ ಫ್ರಾನ್ಸಿಸ್ ಅವರು ವೈದ್ಯಕೀಯ ಆರೈಕೆಯನ್ನು ಪಡೆಯಲು ಅಶಕ್ತರಾಗಿರುವ ಮಕ್ಕಳಿಗಾಗಿ ಪ್ರಾರ್ಥಿಸುವಂತೆ ಅವರನ್ನು ಪ್ರೋತ್ಸಾಹಿಸಿದ್ದಾರೆ.

ಪೋಲ್ಯಾಂಡ್ ದೇಶದಲ್ಲಿ ಆಂಕಾಲಜಿ ಹಾಗೂ ಪೀಡಿಯಾಟ್ರಿಕ್ ಹೆಮಟಾಲಜಿ ವಿಭಾಗದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿರುವ ಮಕ್ಕಳಿಗೆ ಹಾಗೂ ಯುವಕ ಯುವತಿಯರಿಗೆ ಪೋಪ್ ಫ್ರಾನ್ಸಿಸ್ ಅವರು ಭರವಸೆಯ ಕುರಿತು ಮಾತನಾಡಿದರು. 

ಜ್ಯೂಬಿಲಿ 2025 ರ ಹಿನ್ನೆಲೆ ಪೋಪ್ ಫ್ರಾನ್ಸಿಸ್ ಅವರು ಮಾತನಾಡಿದರು. "ಈ ವರ್ಷದಲ್ಲಿ ದೇವರು ನಮಗೆ ವಿಶೇಷ ವರದಾನಗಳನ್ನು ನೀಡಲಿದ್ದಾರೆ" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

ಇದೇ ವೇಳೆ ಪೋಪ್ ಫ್ರಾನ್ಸಿಸ್ ಅವರು "ಪರಸ್ಪರ ನೀವು ಭರವಸೆ ಹಾಗೂ ಪ್ರೀತಿಯನ್ನು ನೀಡುತ್ತಾ ಜೀವಿಸಬೇಕು" ಎಂದು ಅವರಿಗೆ ಕಿವಿಮಾತನ್ನು ಹೇಳಿದರು.

ಮಕ್ಕಳು ಮತ್ತು ಯುವಜನರಿಗೆ ಯೇಸುವಿನ ಪ್ರೀತಿಯ ಮತ್ತೊಂದು ಚಿಹ್ನೆಯನ್ನು ಅವರ ಸುತ್ತಮುತ್ತಲಿನ ಜನರಲ್ಲಿ ಕಾಣಬಹುದು ಎಂದು ಪೋಪ್ ನೆನಪಿಸಿದರು.

10 ಜನವರಿ 2025, 15:00