MAP

ಕಾರಿತಾಸ್ ಸದಸ್ಯರಿಗೆ ಪೋಪ್: ಮಾನವ ಘನತೆಯನ್ನು ರಕ್ಷಿಸುವ ನಿಮ್ಮ ಕರೆಯನ್ನು ಸಂರಕ್ಷಿಸಿರಿ

ಕಾರಿತಾಸ್ ಸಂಸ್ಥೆಯ ನಾಯಕರು ಹಾಗೂ ಸದಸ್ಯರನ್ನು ವ್ಯಾಟಿಕನ್ ನಗರದಲ್ಲಿ ಖಾಸಗಿಯಾಗಿ ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್ ಅವರು ಅವರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮಾನವ ಘನತೆಯನ್ನು ರಕ್ಷಿಸುವ ನಿಮ್ಮ ಕರೆಯನ್ನು ಸಂರಕ್ಷಿಸಿರಿ ಎಂದು ಅವರಿಗೆ ಕಿವಿಮಾತನ್ನು ಹೇಳಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಲ್ಯಾಟಿನ್ ಅಮೇರಿಕಾದ ಕಾರಿತಾಸ್ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರುಗಳನ್ನು ಭೇಟಿ ಮಾಡಿದ ಪೋಪ್ ಫ್ರಾನ್ಸಿಸ್ ಅವರು ಅವರ ಸೇವೆಯನ್ನು ಶ್ಲಾಘಿಸಿದರು. ಇದೇ ವೇಳೆ ಅವರು ಮಾನವ ಘನತೆಗಾಗಿ ನೀವೆಲ್ಲರೂ ಕಾರ್ಯನಿರ್ವಹಿಸುತ್ತಿದ್ದೀರಿ. ಇದಕ್ಕೆ ನೀವು ದೇವರಿಂದ ಕರೆಯನ್ನು ಹೊಂದಿದ್ದೀರಿ. ಆ ಕರೆಯನ್ನು ನೀವು ಸಂರಕ್ಷಿಸಬೇಕು ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು "ಯೇಸು ಕ್ರಿಸ್ತರ ಮಾದರಿಯನ್ನು ನೀವೆಲ್ಲರೂ ಪಾಲಿಸಬೇಕು. ಪ್ರಭು ನಮ್ಮನ್ನು ಸಂರಕ್ಷಿಸುತ್ತಾರೆ. ಇದೇ ಸಂರಕ್ಷಣೆಯ ಅಭಯದಲ್ಲಿ ನಾವು ಮುಂದುವರೆಯಬೇಕು. ಬದುಕಿನ ವಿವಿಧ ಮಜಲುಗಳಲ್ಲಿ ಸಂಕಷ್ಟಗಳನ್ನು ಅನುಭವಿಸುತ್ತಿರುವ ಎಲ್ಲರಿಗೂ ನೀವು ನೆರವಾಗಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಅವರಿಗೆ ಪ್ರೋತ್ಸಾಹವನ್ನು ನೀಡಿದರು. 

ಲ್ಯಾಟಿನ್ ಅಮೇರಿಕಾ ಹಾಗೂ ಕೆರೀಬಿಯನ್ ದೇಶಗಳ ಕಾರಿತಾಸ್ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಿರ್ದೇಶಕರುಗಳು ಪೋಪ್ ಫ್ರಾನ್ಸಿಸ್ ಅವರನ್ನು ಒಂದೇ ನಿಯೋಗವಾಗಿ ಭೇಟಿ ನೀಡಿದರು. ಈ ವೇಳೆ ಪೋಪ್ ಫ್ರಾನ್ಸಿಸ್ ಅವರು ಅವರೆಲ್ಲರನ್ನೂ ಉದ್ದೇಶಿಸಿ ಮಾತನಾಡಿದ್ದಾರೆ.

15 ಜನವರಿ 2025, 16:10