ಪೋಪ್ ಫ್ರಾನ್ಸಿಸ್ ಅವರ ಬಲ ಮುಂಗೈಗೆ ಗಾಯ
ವ್ಯಾಟಿಕನ್ ಮಾಧ್ಯಮ ಕಚೇರಿಯ ಪ್ರಕಟಣೆಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಇಂದು ಬೆಳಿಗ್ಗೆ ತಮ್ಮ ನಿವಾಸ ಕಾಸಾ ಸಾಂತ ಮಾರ್ತದಲ್ಲಿ ಅಚಾನಕ್ ಆಗಿ ಕೆಳಗೆ ಬಿದ್ದ ಪರಿಣಾಮ ಅವರ ಬಲ ಮುಂಗೈಗೆ ಪೆಟ್ಟಾಗಿದೆ.
ವರದಿ: ವ್ಯಾಟಿಕನ್ ನ್ಯೂಸ್
ವ್ಯಾಟಿಕನ್ ಮಾಧ್ಯಮ ಕಚೇರಿಯ ಪ್ರಕಟಣೆಯ ಪ್ರಕಾರ ಪೋಪ್ ಫ್ರಾನ್ಸಿಸ್ ಅವರು ಇಂದು ಬೆಳಿಗ್ಗೆ ತಮ್ಮ ನಿವಾಸ ಕಾಸಾ ಸಾಂತ ಮಾರ್ತದಲ್ಲಿ ಅಚಾನಕ್ ಆಗಿ ಕೆಳಗೆ ಬಿದ್ದ ಪರಿಣಾಮ ಅವರ ಬಲ ಮುಂಗೈಗೆ ಪೆಟ್ಟಾಗಿದೆ.
ಅದೃಷ್ಟವಶಾತ್ ಅವರ ಕೈ ಮೂಳೆಗೆ ಯಾವುದೇ ರೀತಿಯ ತೊಂದರೆಯಾಗಿರುವುದಿಲ್ಲ.
ಈ ಸುದ್ದಿಯನ್ನು. ವ್ಯಾಟಿಕನ್ ಮಾಧ್ಯಮ ಕಚೇರಿಯು ತಿಳಿಸಿದ್ದು, ಮುನ್ನೆಚ್ಚರಿಕೆಯಾಗಿ ಅವರ ಕೈಗೆ ಕಟ್ಟನ್ನು ಹಾಕಲಾಗಿದೆ ಎಂದು ಪ್ರಕಟಿಸಿದೆ. ಇದರ ಹೊರತಾಗಿಯೂ ಪೋಪ್ ಫ್ರಾನ್ಸಿಸ್ ಅವರು ಎಂದಿನಂತೆ ತಮ್ಮ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.
16 ಜನವರಿ 2025, 15:22