ಪೋಪ್ ಫ್ರಾನ್ಸಿಸ್ ಅವರ ಆತ್ಮಕಥೆ "ಹೋಪ್" 80 ದೇಶಗಳಲ್ಲಿ ಬಿಡುಗಡೆ
ವರದಿ: ಡೆಬೋರಾ ಕ್ಯಾಸ್ಟಲೀನೋ ಲುಬೋವ್
ಪೋಪ್ ಫ್ರಾನ್ಸಿಸ್ ಅವರ ಆತ್ಮಕಥೆ "ಹೋಪ್" ಇಂದು 80 ದೇಶಗಳಲ್ಲಿ ಬಿಡುಗಡೆಗೊಂಡಿದೆ. ಸ್ವತಃ ಪೋಪ್ ಫ್ರಾನ್ಸಿಸ್ ಅವರು ಇದನ್ನು ರಚಿಸಿದ್ದು, ಇಟಲಿಯ ಖ್ಯಾತ ಲೇಖಕ ಕಾರ್ಲೋ ಮುಸ್ಸೋ ಅವರು ಇದನ್ನು ಅನುವಾದಿಸಿದ್ದಾರೆ.
ಪೋಪ್ ಫ್ರಾನ್ಸಿಸ್ ಅವರ ಆತ್ಮಕಥೆಯ ಇಂಗ್ಲೀಷ್ ಆವೃತ್ತಿಯನ್ನು ರ್ಯಾಂಡಮ್ ಹೌಸ್, ವೈಕಿಂಗ್ ಪಬ್ಲೀಷರ್ಸ್ ಜೊತೆಗೂಡಿ ಪ್ರಕಟಿಸಿದೆ.
ಈ ಕುರಿತು ಮಾತನಾಡಿರುವ ರ್ಯಾಂಡಮ್ ಹೌಸ್ ಪಬ್ಲೀಷರ್ಸ್ "ಸಾಮಾನ್ಯವಾಗಿ ಯಾವುದೇ ವಿಶ್ವಗುರುಗಳ ಆತ್ಮಕಥೆಯನ್ನು ಅವರು ನಿಧನದ ನಂತರ ಪ್ರಕಟಿಸಲಾಗುತ್ತದೆ. ಆದರೆ ಇದು ವಿಶೇಷ. ಈ ವರ್ಷ ಜ್ಯೂಬಲಿ ವರ್ಷವಾಗಿರುವ ಕಾರಣ ಪೋಪ್ ಫ್ರಾನ್ಸಿಸ್ ಅವರ ಆತ್ಮಕಥೆಯು ಬಿಡುಗಡೆಯಾಗುತ್ತಿರುವುದು ಬಹಳ ಐತಿಹಾಸಿಕವಾಗಿದೆ" ಎಂದು ಹೇಳಿದೆ.
ಈ ಪುಸ್ತಕದ ವಿಶೇಷತೆ ಎಂದರೆ ಇದರಲ್ಲಿ ಎಲ್ಲೂ ಕಾಣಸಿಗದ ಹಲವಾರು ಚಿತ್ರಗಳನ್ನು ಪೋಪ್ ಫ್ರಾನ್ಸಿಸ್ ಅವರು ಪ್ರಕಟಿಸಲು ಅನುಮತಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರ ಜೀವನದ ಕುರಿತು ಯಾರಿಗೂ ಗೊತ್ತಿರದ ಅನೇಕ ಸಂಗತಿಗಳು ಈ ಪುಸ್ತಕದಲ್ಲಿರಲಿವೆ ಎಂದು ಪ್ರಕಾಶಕರು ಹೇಳಿದ್ದಾರೆ.
ಮುಂದುವರೆದು ಮಾತನಾಡಿರುವ ಪ್ರಕಾಶನ ಸಂಸ್ಥೆಯಾದ ರ್ಯಾಂಡಮ್ ಹೌಸ್ "ಪೋಪ್ ಫ್ರಾನ್ಸಿಸ್ ಅವರು ಆತ್ಮಕಥೆ ಅತ್ಯಂತ ಮಾನವೀಕ ಬರಹವಾಗಿದ್ದು, ಹೃದಯಗಳನ್ನು ಪರಿವರ್ತಿಸುವ ಶಕ್ತಿ ಇದಕ್ಕಿದೆ" ಎಂದು ಹೇಳಿದೆ.