ಅಲ್ಮೋ ಕಾಲೇಜಿಯ ಕಪ್ರಾನ್ಸಿಯಾಗೆ ಪೋಪ್: ದೇವರಿಗೂ ಬಡವರಿಗೂ ಹತ್ತಿರವಾಗಿರಿ
ವರದಿ: ವ್ಯಾಟಿಕನ್ ನ್ಯೂಸ್
ಪೋಪ್ ಫ್ರಾನ್ಸಿಸ್ ಅವರು ಇಂದು ರೋಮ್ ನಗರದಲ್ಲಿರುವ ರೋಮ್ ಧರ್ಮಕ್ಷೇತ್ರದ ಗುರುಮಠವಾದ ಆಲ್ಮೋ ಕಾಲೇಜಿಯ ಕಪ್ರಾನ್ಸಿಯಾದ ಸದಸ್ಯರು ಹಾಗೂ ಪ್ರತಿನಿಧಿಗಳನ್ನು ಇಂದು ಭೇಟಿ ಮಾಡಿದ್ದಾರೆ. ದೇವರಿಗೂ ಬಡವರಿಗೂ ಹತ್ತಿರವಾಗಿರಿ ಎಂದು ಅವರಿಗೆ ಪೋಪ್ ಫ್ರಾನ್ಸಿಸ್ ಅವರು ಕಿವಿಮಾತನ್ನು ಹೇಳಿದ್ದಾರೆ.
ಆಲ್ಮೋ ಕಾಲೇಜಿಯ ಕಪ್ರಾನ್ಸಿಯಾ ಎಂಬುದು ರೋಮ್ ನಗರದ ಅತ್ಯಂತ ಪುರಾತನ ಕಾಲೇಜಾಗಿದ್ದು, ಇದನ್ನು ಹದಿನೈದನೇ ಶತಮಾನದಲ್ಲಿ ಕಾರ್ಡಿನಲ್ ಡೊಮಿನಿಕ್ ಕಪ್ರಾನ್ಸಿಯಾ ಅವರು ಸ್ಥಾಪಿಸಿದರು. ಇದು ಗುರುಮಠವಾಗಿದ್ದು, ರೋಮ್, ಇಟಲಿ ಸೇರಿದಂತೆ ವಿಶ್ವದ ವಿವಿಧ ಗುರು ಅಭ್ಯರ್ಥಿಗಳಿಗೆ ತರಭೇತಿ ನೀಡುವ ತಾಣವಾಗಿದೆ. ಪೋಪ್ ಹದಿನಾರನೇ ಬೆನೆಡಿಕ್ಟರು, ಪೋಪ್ ಹನ್ನೆರಡನೇ ಭಕ್ತಿನಾಥರು ಇದೇ ಕಾಲೇಜಿನಲ್ಲಿ ವ್ಯಾಸಾಂಗವನ್ನು ಪೂರ್ಣಗೊಳಿಸಿದ್ದಾರೆ.
ಈ ಕಾಲೇಜಿನಿಂದ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿ ಮಾಡಿದ ತಂಡದಲ್ಲಿ ಗುರು ಅಭ್ಯರ್ಥಿಗಳು, ಗುರುಗಳು, ಸೇವಾದರ್ಶಿಗಳು ಇದ್ದರು. ಈ ವೇಳೆ ಇವರನ್ನು ಉದ್ದೇಶಿಸಿ ಮಾತನಾಡಿರುವ ಪೋಪ್ ಫ್ರಾನ್ಸಿಸ್ ಅವರು "ನೀವು ಸದಾ ಪ್ರಭುವಿನಲ್ಲಿ ಮುನ್ನಡೆಯಬೇಕು. ಧಾರ್ಮಿಕ ಬದುಕಿನಲ್ಲಿ ಸಂತೋಷದಿಂದ ಸೇವೆಯನ್ನು ಸಲ್ಲಿಸಬೇಕು. ಇದೇ ಸಂದರ್ಭದಲ್ಲಿ ದೇವರು ಹಾಗೂ ಬಡವರೊಂದಿಗೆ ನಡೆಯಬೇಕು. ಅವರೊಂದಿಗೆ ಸಾಮೀಪ್ಯದಲ್ಲಿರಬೇಕು" ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದ್ದಾರೆ.
ಆಧ್ಯಾತ್ಮಿಕ ನವೀಕರಣ, ರಚನಾತ್ಮಕ ಸುಧಾರಣೆ ಮತ್ತು ಎಲ್ಲರ ಅಗತ್ಯಗಳಿಗೆ ಅನುಗುಣವಾಗಿ ಹೆಚ್ಚು ಭಾಗವಹಿಸುವ ಮತ್ತು ಪಯಣಿಸುವ ಧರ್ಮಸಭೆಗಾಗಿ ಸಿನೊಡ್‌ನ ಕರೆಯನ್ನು ಅನುಸರಿಸಿ, ಈಗಾಗಲೇ ಅವರ ರಚನೆಯಲ್ಲಿ ಸಿನೊಡಾಲಿಟಿಯನ್ನು ಸಂಪೂರ್ಣವಾಗಿ ಸ್ವೀಕರಿಸುವಂತೆ ಪೋಪ್ ಅವರನ್ನು ಒತ್ತಾಯಿಸಿದರು.