MAP

ಕಾರ್ಡಿನಲ್ ರಾಬರ್ಟ್ ವಾಲ್ಟರ್ ಮ್ಯಾಕೆಲ್ರೊಯ್ ಕಾರ್ಡಿನಲ್ ರಾಬರ್ಟ್ ವಾಲ್ಟರ್ ಮ್ಯಾಕೆಲ್ರೊಯ್ 

ವಾಷಿಂಗ್ಟನ್ ನೂತನ ಮಹಾಧರ್ಮಾಧ್ಯಕ್ಷರಾಗಿ ನೇಮಕಗೊಂಡ ಕಾರ್ಡಿನಲ್ ಮ್ಯಾಕೆಲ್ರೊಯ್

ಪೋಪ್ ಫ್ರಾನ್ಸಿಸ್ ಅವರು ಅಮೇರಿಕಾದ ವಾಷಿಂಗ್ಟನ್ ಮಹಾಧರ್ಮಕ್ಷೇತ್ರಕ್ಕೆ ನೂತನ ಮಹಾಧರ್ಮಾಧ್ಯಕ್ಷರನ್ನಾಗಿ ಕಾರ್ಡಿನಲ್ ರಾಬರ್ಟ್ ವಾಲ್ಟರ್ ಮ್ಯಾಕೆಲ್ರೊಯ್ ಅವರನ್ನು ನೇಮಿಸಿದ್ದಾರೆ. ಕಾರ್ಡಿನಲ್ ವಿಲ್ಟನ್ ಡೇನಿಯಲ್ ಗ್ರೆಗರಿ ಅವರು ರಾಜೀನಾಮೆ ನೀಡಿದ ನಂತರ ತೆರವಾದ ಸ್ಥಾನಕ್ಕೆ ಪೋಪ್ ಫ್ರಾನ್ಸಿಸ್ ಅವರು ಇವರನ್ನು ನೇಮಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಪೋಪ್ ಫ್ರಾನ್ಸಿಸ್ ಅವರು ಅಮೇರಿಕಾದ ವಾಷಿಂಗ್ಟನ್ ಮಹಾಧರ್ಮಕ್ಷೇತ್ರಕ್ಕೆ ನೂತನ ಮಹಾಧರ್ಮಾಧ್ಯಕ್ಷರನ್ನಾಗಿ ಕಾರ್ಡಿನಲ್ ರಾಬರ್ಟ್ ವಾಲ್ಟರ್ ಮ್ಯಾಕೆಲ್ರೊಯ್ ಅವರನ್ನು ನೇಮಿಸಿದ್ದಾರೆ. ಕಾರ್ಡಿನಲ್ ವಿಲ್ಟನ್ ಡೇನಿಯಲ್ ಗ್ರೆಗರಿ ಅವರು ರಾಜೀನಾಮೆ ನೀಡಿದ ನಂತರ ತೆರವಾದ ಸ್ಥಾನಕ್ಕೆ ಪೋಪ್ ಫ್ರಾನ್ಸಿಸ್ ಅವರು ಇವರನ್ನು ನೇಮಿಸಿದ್ದಾರೆ.

ಕಾರ್ಡಿನಲ್ ರಾಬರ್ಟ್ ವಾಲ್ಟರ್ ಮ್ಯಾಕೆಲ್ರೊಯ್ 2015 ರಿಂದ ಸ್ಯಾನ್ ಡಿಯೆಗೋ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 5 ಫೆಬ್ರವರಿ 1954 ರಂದು ಜನಿಸಿದ ಕಾರ್ಡಿನಲ್ ಸೇಂಟ್ ಜೋಸೆಫ್ ಮೈನರ್ ಸೆಮಿನರಿಯಲ್ಲಿ ವ್ಯಾಸಂಗ ಮಾಡಿದರು, ಮ್ಯಾಸಚೂಸೆಟ್ಸ್‌ನ ಕೇಂಬ್ರಿಡ್ಜ್‌ನಲ್ಲಿರುವ ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪದವಿಯನ್ನು ಗಳಿಸಿದರು ಮತ್ತು ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಲ್ಲಿರುವ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

ಮೆನ್ಲೋ ಪಾರ್ಕ್‌ನಲ್ಲಿರುವ ಸೇಂಟ್ ಪ್ಯಾಟ್ರಿಕ್ ಸೆಮಿನರಿಯಲ್ಲಿ ತನ್ನ ಧಾರ್ಮಿಕ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಅವರು ರೋಮ್‌ನ ಪಾಂಟಿಫಿಕಲ್ ಗ್ರೆಗೋರಿಯನ್ ವಿಶ್ವವಿದ್ಯಾಲಯದಿಂದ ನೈತಿಕ ದೈವಶಾಸ್ತ್ರದಲ್ಲಿ ಡಾಕ್ಟರೇಟ್ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನದಲ್ಲಿ ಡಾಕ್ಟರೇಟ್ ಪಡೆದರು.

ಅವರು 12 ಏಪ್ರಿಲ್ 1980 ರಂದು ಸ್ಯಾನ್ ಫ್ರಾನ್ಸಿಸ್ಕೋದ ಮೆಟ್ರೋಪಾಲಿಟನ್ ಮಹಾಧರ್ಮಕ್ಷೇತ್ರಕ್ಕೆ ಗುರುವಾಗಿ ಅಭ್ಯಂಗಿತರಾದರು. ಜುಲೈ 6, 2010 ರಂದು ಸ್ಯಾನ್ ಫ್ರಾನ್ಸಿಸ್ಕೋದ ಸಹಾಯಕ ಬಿಷಪ್ ಆಗಿ ನೇಮಕಗೊಂಡ ಅವರು 7 ಸೆಪ್ಟೆಂಬರ್ 2010 ರಂದು ಧರ್ಮಾಧ್ಯಕ್ಷ ದೀಕ್ಷೆಯನ್ನು ಪಡೆದರು. ಸ್ಯಾನ್ ಡಿಯಾಗೋ ಧರ್ಮಕ್ಷೇತ್ರವನ್ನು ಅವರು ಮುನ್ನಡೆಸುವಾಗ, ಪೋಪ್ ಫ್ರಾನ್ಸಿಸ್ ಅವರನ್ನು ಆಗಸ್ಟ್ 2017 ರಲ್ಲಿ ಕಾರ್ಡಿನಲ್ ಆಗಿ ನೇಮಿಸಿದರು.

09 ಜನವರಿ 2025, 17:10