MAP

ಫಾಬ್ರಿಕಾ ಡಿ ಸ್ಯಾನ್ ಪಿಯೆತ್ರೊ ಗೆ ಪೋಪ್ ಫ್ರಾನ್ಸಿಸ್: ತಂತ್ರಜ್ಞಾನ ಎಂಬುದು ದೇವರ ವರದಾನ ಹಾಗೂ ಜವಾಬ್ದಾರಿ

ಪೋಪ್ ಫ್ರಾನ್ಸಿಸ್ ಅವರು ಸಂತ ಪೇತ್ರರ ಮಹಾದೇವಾಲಯದ ಸಂರಕ್ಷಣೆಯ ಉಸ್ತುವಾರಿಯನ್ನು ಹೊಂದಿರುವ ಫಾಬ್ರಿಕಾ ಡಿ ಸ್ಯಾನ್ ಪಿಯೆತ್ರೊ ಸಂಸ್ಥೆಯ ಸದಸ್ಯರೊಂದಿಗೆ ಮಾತನಾಡುತ್ತಾ, ತಂತ್ರಜ್ಞಾನ ಎಂಬುದು ದೇವರ ವರದಾನ ಹಾಗೂ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ವರದಿ: ಕೀಲ್ಚೆ ಗುಸ್ಸೀ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಸಂತ ಪೇತ್ರರ ಮಹಾದೇವಾಲಯದ ಸಂರಕ್ಷಣೆಯ ಉಸ್ತುವಾರಿಯನ್ನು ಹೊಂದಿರುವ ಫಾಬ್ರಿಕಾ ಡಿ ಸ್ಯಾನ್ ಪಿಯೆತ್ರೊ ಸಂಸ್ಥೆಯ ಸದಸ್ಯರೊಂದಿಗೆ ಮಾತನಾಡುತ್ತಾ, ತಂತ್ರಜ್ಞಾನ ಎಂಬುದು  ದೇವರ ವರದಾನ ಹಾಗೂ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಈ ಸದಸ್ಯರನ್ನು ಉದ್ದೇಶಿಸಿ "ತಂತ್ರಜ್ಞಾನವನ್ನು ಪ್ರೇಷಿತ ಸೇವೆಗಾಗಿ ನಾವು ಉಪಯೋಗಿಸಿಕೊಳ್ಳಬೇಕು. ಏಕೆಂದರೆ ತಂತ್ರಜ್ಞಾನ ಎಂಬುದನ್ನು ವ್ಯತಿರಿಕ್ತವಾಗಿ ಬಳಸಿಕೊಳ್ಳುವ ಅಪಾಯವೂ ಸಹ ಇದೆ ಎಂದು ಪೋಪ್ ಫ್ರಾನ್ಸಿಸ್ ಅವರು ಹೇಳಿದರು.

ಸಂತ ಪೇತ್ರರ ಮಹಾದೇವಾಲಯಕ್ಕೆ ಲಕ್ಷಾಂತರ ಭಕ್ತಾಧಿಗಳು ಆಗಮಿಸುತ್ತಾರೆ. ಇದು ವಿಶ್ವಾಸದ ಪ್ರತೀಕವಾಗಿದೆ. ತಂತ್ರಜ್ಞಾನದೊಂದಿಗೆ ಇದನ್ನು ಸಂರಕ್ಷಿಸಬೇಕು ಎಂದು ಪೋಪ್ ಫ್ರಾನ್ಸಿಸ್ ಅವರು ಫಾಬ್ರಿಕಾ ಡಿ ಸ್ಯಾನ್ ಪಿಯೆತ್ರೊ ಸಂಸ್ಥೆಯ ಸದಸ್ಯರಿಗೆ ಹೇಳಿದರು.

11 ನವೆಂಬರ್ 2024, 16:29