ಗಾಝಾದಲ್ಲಿನ ಯುದ್ಧ ದಿನೇ ದಿನೇ ಉಲ್ಬಣಿಸುತ್ತಿದೆ; ಶಾಂತಿಗಾಗಿ ಯಾವ ಕ್ರಮಗಳನ್ನೂ ತೆಗೆದುಕೊಂಡಿಲ್ಲ: ಪೋಪ್ ಫ್ರಾನ್ಸಿಸ್
ಪೋಪ್ ಫ್ರಾನ್ಸಿಸ್ ಅವರು ತಮ್ಮ ಪ್ರೇಷಿತ ಪ್ರಯಾಣದ ವೇಳೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಗಾಝಾ ಪರಿಸ್ಥಿತಿಯ ಕುರಿತು ಪ್ರಶ್ನೆ ಬಂದಾಗ, ಅವರು ಗಾಝಾದಲ್ಲಿನ ಪರಿಸ್ಥಿತಿ ದಿನೇ ದಿನೇ ಉಲ್ಬಣಿಸುತ್ತಿದ್ದು, ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಂತರಾಷ್ಟ್ರೀಯ ಸಮುದಾಯವು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ತಮ್ಮ ಬೇಸವರನ್ನು ವ್ಯಕ್ತಪಡಿಸಿದ್ದಾರೆ.
ವರದಿ: ವ್ಯಾಟಿಕನ್ ನ್ಯೂಸ್

ಈವರೆಗೂ ಈ ಯುದ್ಧದ ಪರಿಣಾಮವಾಗಿ ಗಾಝಾದಲ್ಲಿ ಸುಮಾರು 41,000 ಜನರು ಮೃತ ಹೊಂದಿರುವುದಾಗಿ ಪೋಪ್ ಫ್ರಾನ್ಸಿಸ್ ಹೇಳಿದರು.
ಪೋಪ್ ಫ್ರಾನ್ಸಿಸ್ ಅವರು ಗಾಝಾ ಸೇರಿದಂತೆ, ಉಕ್ರೇನ್ ಹಾಗೂ ಯುದ್ಧ ನಡೆಯುತ್ತಿರುವ ಇನ್ನಿತರ ಪ್ರದೇಶಗಳಲ್ಲಿ ಶಾಂತಿ ಸ್ಥಾಪನೆಗಾಗಿ ಪದೇ ಪದೇ ಮನವಿಯನ್ನು ಮಾಡುತ್ತಿದ್ದಾರೆ ಮಾತ್ರವಲ್ಲದೆ, ವ್ಯಾಟಿಕನ್ ನಗರದಿಂದ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಎಲ್ಲಾ ನೆರವನ್ನೂ ಸಹ ನೀಡುತ್ತಿದ್ದಾರೆ.
14 ಸೆಪ್ಟೆಂಬರ್ 2024, 11:44