MAP

ಗಾಝಾದಲ್ಲಿನ ಭೀಕರ ಮಾನವ ಸಂಘರ್ಷದ ಕುರಿತು ಕಳವಳ ವ್ಯಕ್ತಪಡಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಸ್ವರ್ಗಸ್ವೀಕೃತ ಮಾತೆಯ ಹಬ್ಬದಂದು ಇಂದು ವ್ಯಾಟಿಕನ್ ನಗರದಲ್ಲಿ ವ್ಯಾಟಿಕನ್ ನಗರದಲ್ಲಿ ದೇವದೂತನ ಸಂದೇಶ ಪ್ರಾರ್ಥನೆಯನ್ನು ಸಲ್ಲಿಸಿದ ನಂತರ, ತಮ್ಮ ಪ್ರಭೋದನೆಯಲ್ಲಿ ಮಾತನಾಡುತ್ತಾ, ಪ್ಯಾಲೆಸ್ತೇನಿನ ಗಾಝಾದಲ್ಲಿ ಆಗುತ್ತಿರುವ ಮಾನವ ಸಂಘರ್ಷದ ಕುರಿತು ತಮ್ಮ ಕಳವಳವನ್ನು ವ್ಯಕ್ತಡಿಸಿದ್ದಾರೆ.

ವರದಿ: ವ್ಯಾಟಿಕನ್ ನ್ಯೂಸ್

ಯುದ್ಧದ ಪರಿಣಾಮವಾಗಿ ತಮ್ಮದಲ್ಲದ ತಪ್ಪಿಗೆ ಮಕ್ಕಳೂ ಸೇರಿದಂತೆ ಸಾವಿರಾರು ಜನರು ನರಳುತ್ತಿದ್ದಾರೆ. ಯುದ್ಧ ಎಂದಿಗೂ ಒಳಿತನ್ನು ಮಾಡುವುದಿಲ್ಲ ಬದಲಿಗೆ ಇದು ವಿನಾಶವನ್ನು ತರುತ್ತದೆ ಎಂದು ಹೇಳಿರುವ ಪೋಪ್ ಫ್ರಾನ್ಸಿಸ್ ಅವರು ಈ ಕೂಡಲೇ ಗಾಝಾದಲ್ಲಿ ಕದನ ವಿರಾಮ ಘೋಷಣೆಯಾಗಬೇಕು ಎಂದು ಹೇಳಿದ್ದಾರೆ.

ಉಕ್ರೇನ್-ರಷ್ಯಾ ಯುದ್ಧ, ಇಸ್ರೇಲ್-ಪ್ಯಾಲೆಸ್ತೇನ್ ಯುದ್ಧ ಆರಂಭವಾದಾಗಿನಿಂದಲೂ ಸಹ ಪೋಪ್ ಫ್ರಾನ್ಸಿಸ್ ಅವರು ಕದನ ವಿರಾಮಕ್ಕಾಗಿ ಹಾಗೂ ಶಾಂತಿ ಸ್ಥಾಪನೆಗಾಗಿ ವಿನಂತಿಗಳನ್ನು ಮಾಡುತ್ತಲೇ ಇದ್ದಾರೆ. ಈ ಕುರಿತು ವಿವಿಧ ದೇಶಗಳ ಮುಖಂಡರೊಂದಿಗೆ ಸಹ ಮಾತುಕತೆಯನ್ನು ನಡೆಸಿದ್ದು, ವಿಶ್ವಶಾಂತಿಗಾಗಿ ನಿರಂತರ ಪ್ರಯತ್ನವನ್ನು ಮುಂದುವರೆಸಿದ್ದಾರೆ.

16 ಆಗಸ್ಟ್ 2024, 18:18