MAP

ಆರ್ಚ್'ಬಿಷಪ್ ನೊಯೆಲ್ ಟ್ರೀನೋರ್ ಅವರ ನಿಧನಕ್ಕೆ ಸಂತಾಪ ಸಂದೇಶ ಕಳುಹಿಸಿದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಅವರು ಕಳೆದ ವಾರ ಐರ್ಲೆಂಡ್ ದೇಶದಲ್ಲಿ ನಿಧನ ಹೊಂದಿದ ಆರ್ಚ್'ಬಿಷಪ್ ನೊಯೆಲ್ ಟ್ರೀನೋರ್ ಅವರ ಕುರಿತಂತೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ.

ವರದಿ: ಅಂಟೋನೆಲ್ಲಾ ಪಲೇರ್ಮೋ, ಅಜಯ್ ಕುಮಾರ್

ಪೋಪ್ ಫ್ರಾನ್ಸಿಸ್ ಅವರು ಕಳೆದ ವಾರ ಐರ್ಲೆಂಡ್ ದೇಶದಲ್ಲಿ ನಿಧನ ಹೊಂದಿದ ಆರ್ಚ್'ಬಿಷಪ್ ನೊಯೆಲ್ ಟ್ರೀನೋರ್ ಅವರ ಕುರಿತಂತೆ ಸಂತಾಪ ಸಂದೇಶವನ್ನು ಕಳುಹಿಸಿದ್ದಾರೆ.

ಪೋಪ್ ಫ್ರಾನ್ಸಿಸ್ ಅವರು ಆರ್ಚ್'ಬಿಷಪ್ ಟ್ರೀನೋರ್ ಅವರ ಕುರಿತು ಕಳುಹಿಸಿರುವ ನಿಧನವಾರ್ತೆಯನ್ನು ಯೂರೋಪಿಯನ್ ಒಕ್ಕೂಟಕ್ಕೆ ಪ್ರೇಷಿತ ರಾಯಭಾರಿ ಅವರು ಬೆಲ್ಫಾಸ್ಟ್ ನಗರದಲ್ಲಿ ಬಲಿಪೂಜೆಯನ್ನು ಅರ್ಪಿಸುವ ವೇಳೆ ಓದಿದ್ದಾರೆ.

ಆರ್ಚ್'ಬಿಷಪ್ ಟ್ರೀನೋರ್ ಅವರು ಯೂರೋಪಿಯನ್ ಒಕ್ಕೂಟಕ್ಕೆ ಪೋಪ್ ಫ್ರಾನ್ಸಿಸ್ ಅವರ ಪ್ರೇಷಿತ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಆರ್ಚ್'ಬಿಷಪ್ ಟ್ರಿನೋರ್ ಅವರ ಅಂತ್ಯಸಂಸ್ಕಾರವು ನಿನ್ನೆ ಬೆಲ್ಫಾಸ್ಟ್ ನಗರದ ಸಂತ ಪೇತ್ರರ ಪ್ರಧಾನಾಲಯದಲ್ಲಿ ನಡೆಯಿತು.

21 ಆಗಸ್ಟ್ 2024, 18:56