ಸಮಾಜದಲ್ಲಿನ 'ಅಪಾಯಕಾರಿ ಕ್ಷಣ'ದಲ್ಲಿ ಪ್ರಾರ್ಥನೆಗೆ ಕರೆ ನೀಡಿದ ಅಮೇರಿಕದ ಕಥೋಲಿಕ ನಾಯಕರು
ವ್ಯಾಟಿಕನ್ ಸುದ್ದಿ
ಸೆಪ್ಟೆಂಬರ್ 10ರಂದು ಉತಾಹ್‌ನ ಓರೆಮ್‌ನಲ್ಲಿರುವ ಉತಾಹ್ ವ್ಯಾಲಿ ವಿಶ್ವವಿದ್ಯಾಲಯದಲ್ಲಿ ಭಾಷಣ ಕಾರ್ಯಕ್ರಮವೊಂದರಲ್ಲಿ ಗುಂಡು ಹಾರಿಸಿ ನಿಧನರಾದ ಸಂಪ್ರದಾಯವಾದಿ ಕಾರ್ಯಕರ್ತ ಚಾರ್ಲಿ ಕಿರ್ಕ್ ರವರ ಹತ್ಯೆಯ ನಂತರ ಅಮೇರಿಕದ ಕಥೋಲಿಕ ಧರ್ಮಾಧ್ಯಕ್ಷರುಗಳು ಮತ್ತು ತಾಯಿ ಧರ್ಮಸಭೆಯ ನಾಯಕರು ದುಃಖ ಮತ್ತು ಶಾಂತಿಗಾಗಿ ಮನವಿ ಮಾಡಿದ್ದಾರೆ.
31 ವರ್ಷದ ಕಿರ್ಕ್, ತನ್ನ ಹೆಂಡತಿ ಮತ್ತು ಇಬ್ಬರು ಚಿಕ್ಕ ಮಕ್ಕಳನ್ನು ಅಗಲಿದ್ದಾರೆ. ದೇಶಾದ್ಯಂತ ಸಮುದಾಯಗಳನ್ನು ಬೆಚ್ಚಿಬೀಳಿಸಿದ ಹಿಂಸಾತ್ಮಕ ಪ್ರಸಂಗಗಳ ಸರಣಿಯ ಮಧ್ಯೆ ಅವರ ಹತ್ಯೆ ನಡೆದಿದೆ.
ಸಂತ್ರಸ್ತರುಗಳನ್ನು ದೇವರಿಗೆ ಒಪ್ಪಿಸುವುದು
ಇತ್ತೀಚಿನ ವಾರಗಳಲ್ಲಿ ಹಲವಾರು ಮುಗ್ಧ ಸಂತ್ರಸ್ತರುಗಳ ಜೀವಗಳನ್ನು ಬಲಿತೆಗೆದುಕೊಂಡಿರುವ ರಾಜಕೀಯ ಮತ್ತು ಸಾಮಾಜಿಕ ಅವ್ಯವಸ್ಥೆಯ ಕೆಟ್ಟ ಮಾದರಿಗೆ ಈ ದುರಂತವು ಸೇರ್ಪಡೆಯಾಗಿದೆ ಎಂದು ಆರ್ಲಿಂಗ್ಟನ್ ಧರ್ಮಕ್ಷೇತ್ರವು ಗಮನಿಸಿದೆ.
ಅವರಲ್ಲಿ ಮಿನ್ನಿಯಾಪೋಲಿಸ್‌ನ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ಮಕ್ಕಳು ಮತ್ತು ಷಾರ್ಲೆಟ್ ಲೈಟ್ ರೈಲ್ ರೈಲಿನಲ್ಲಿ ಕೊಲೆಯಾದ ಉಕ್ರೇನಿಯದ ನಿರಾಶ್ರಿತ ಐರಿನಾ ಜರುಟ್ಸ್ಕಾ; ಮತ್ತು ಈಗ ಟರ್ನಿಂಗ್ ಪಾಯಿಂಟ್ ಆಕ್ಷನ್‌ನ ಸ್ಥಾಪಕ, ಅಮೇರಿಕದ ಸಂಪ್ರದಾಯವಾದಿ ರಾಜಕೀಯ ಕಾರ್ಯಕರ್ತ ಚಾರ್ಲಿ ಕಿರ್ಕ್ರವರೂ ಸೇರಿದ್ದಾರೆ.
ಈ ಸಂತ್ರಸ್ತರುಗಳಲ್ಲಿ ಪ್ರತಿಯೊಬ್ಬರನ್ನು ನಾವು ನಮ್ಮ ಸ್ವರ್ಗೀಯ ತಂದೆ ಮತ್ತು ಪ್ರತಿಯೊಂದು ಮಾನವ ಜೀವನದ ಕರ್ತೃ ದೇವರಿಗೆ ಮತ್ತು ನಮ್ಮ ಅಲೌಕಿಕ ಭರವಸೆಗೆ ಕಾರಣನಾದ ಆತನ ಪುತ್ರ ಪ್ರಭುಯೇಸು ಕ್ರಿಸ್ತನಿಗೆ ಒಪ್ಪಿಸುತ್ತೇವೆ ಎಂದು ಧರ್ಮಕ್ಷೇತ್ರದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆಳವಾದ ನಂಬಿಕೆ ಮತ್ತು ಏಕತೆಗೆ ಕರೆ
ಇಂತಹ ಹಿಂಸಾಚಾರದ ಬೇರುಗಳು ದೇವರ ನಿರಾಕರಣೆ ಮತ್ತು ಮಾನವ ವ್ಯಕ್ತಿಯ ಘನತೆಯಲ್ಲಿವೆ ಎಂದು ಧರ್ಮಸಭೆಯ ನಾಯಕರು ಒತ್ತಿ ಹೇಳಿದರು. ದೇವರ ಮೇಲೆ ದೃಢವಾದ ಅವಲಂಬನೆ, ಕ್ರಿಸ್ತ ಮತ್ತು ಸುವಾರ್ತೆಗೆ ಆಳವಾದ ಭಕ್ತಿ, ಕಾನೂನಿನಲ್ಲಿ ಪ್ರತಿಫಲಿಸುವ ವ್ಯಕ್ತಿಗಳ ಬಗ್ಗೆ ಪ್ರಾಮಾಣಿಕ ಪ್ರೀತಿ ಮತ್ತು ನ್ಯಾಯ ಹಾಗೂ ಸಾರ್ವಜನಿಕ ಸುವ್ಯವಸ್ಥೆಗೆ ನವೀಕೃತ ಬದ್ಧತೆಯ ಮೂಲಕ ಮಾತ್ರ ನಾವು ಈ ದುಷ್ಪರಿಣಾಮಗಳನ್ನು ನಿರ್ಮೂಲನೆ ಮಾಡಬಹುದು ಎಂದು ಹೇಳಿಕೆ ಮುಂದುವರಿಯುತ್ತದೆ.
ರಾಜಕೀಯ ಭಿನ್ನಾಭಿಪ್ರಾಯಗಳು ಮತ್ತು ನೀತಿ ವಿವಾದಗಳ ವಿಷಯದಲ್ಲಿ ಮಾತ್ರವಲ್ಲದೆ, ನಂಬಿಕೆ, ಕುಟುಂಬ ಮತ್ತು ಶಾಂತಿಯಿಂದ ಒಟ್ಟಿಗೆ ಬದುಕುವ ಹಂಚಿಕೆಯ ಬದ್ಧತೆಯನ್ನು ಎತ್ತಿಹಿಡಿಯುವ ಆಳವಾದ ಸವಾಲಿನಲ್ಲೂ ರಾಷ್ಟ್ರವು "ಅಪಾಯಕಾರಿ ಕ್ಷಣ"ವನ್ನು ಎದುರಿಸುತ್ತಿದೆ ಎಂದು ಅವರು ಎಚ್ಚರಿಸಿದರು.
ಶಾಂತಿಗಾಗಿ ಪ್ರಾರ್ಥನೆಗಳು
ದುರಂತದ ನಂತರ, ಅಮೆರಿಕದಾದ್ಯಂತ ಧರ್ಮಾಧ್ಯಕ್ಷರುಗಳು ಮತ್ತು ಕಥೊಲಿಕ ಅಧಿಕಾರಿಗಳು ಕಿರ್ಕ್ ರವರ ಕುಟುಂಬಕ್ಕಾಗಿ, ಇತ್ತೀಚಿನ ಹಿಂಸಾಚಾರದ ಎಲ್ಲಾ ಸಂತ್ರಸ್ತರುಗಳಿಗಾಗಿ ಮತ್ತು ಅಮೇರಿಕದ ಸಮಾಜದಲ್ಲಿ ಸಮನ್ವಯದ ನವೀಕೃತ ಮನೋಭಾವಕ್ಕಾಗಿ ಪ್ರಾರ್ಥನೆ ಸಲ್ಲಿಸುವಂತೆ ಕರೆ ನೀಡುತ್ತಿದ್ದಾರೆ.
ಈ ಹತ್ಯೆ ನಮ್ಮ ದೇಶಕ್ಕೆ ಮತ್ತು ಮಾನವೀಯತೆಗೆ ಒಂದು ದುರಂತ ಎಂದು ಸಾಲ್ಟ್ ಲೇಕ್ ಸಿಟಿಯ ಧರ್ಮಾಧ್ಯಕ್ಷರು ಆಸ್ಕರ್ ಎ. ಸೋಲಿಸ್ ರವರು ಹೇಳಿದರು, ಭಕ್ತವಿಶ್ವಾಸಿಗಳು ಶಾಂತಿಗಾಗಿ ಮತ್ತು ನಮ್ಮನ್ನು ಅರ್ಥಹೀನ ಹಿಂಸಾಚಾರದಿಂದ ಒಮ್ಮೆ ಮತ್ತು ಶಾಶ್ವತವಾಗಿ ಮುಕ್ತಗೊಳಿಸುವ ರಾಷ್ಟ್ರೀಯ ಪ್ರತೀಕಾರಕ್ಕಾಗಿ ಪ್ರಾರ್ಥಿಸುವಂತೆ ಒತ್ತಾಯಿಸಿದರು.