MAP

General Assembly of the Federation of Catholic Bishops Conference of Oceania - FCBCO Continental Stage of the Synod on Synodality General Assembly of the Federation of Catholic Bishops Conference of Oceania - FCBCO Continental Stage of the Synod on Synodality 

ವಿಶ್ವಗುರು: ಮಾತೆಮೇರಿಯ ಕಣ್ಣುಗಳಿಂದ ನೋಡುವುದರಿಂದ ಜನರು ಮತ್ತು ಸಂಸ್ಕೃತಿಗಳು ಶಾಂತಿಯಿಂದ ಜೀವಿಸಲು ಸಹಾಯವಾಗುತ್ತದೆ

ಪೌಲ್‌ ಆಡಿಯನ್ಸ್ VI ಸಂಭಾಗನದಲ್ಲಿ ಭಾಷಣ ಮಾಡುವ ಮೂಲಕ ವಿಶ್ವಗುರು ಲಿಯೋರವರು 26ನೇ ಅಂತರರಾಷ್ಟ್ರೀಯ ಮಾರಿಯೋಲಾಜಿಕಲ್ ಮಾತೆಮರಿಯಳ ಸಮ್ಮೇಳನವನ್ನು ಮುಕ್ತಾಯಗೊಳಿಸಿದರು. ಪೂಜ್ಯ ಕನ್ಯಾ ಮಾತೆಮೇರಿಯ ಬಾಗಿಲುಗಳನ್ನು ತೆರೆಯುವುದನ್ನು, ಸೇತುವೆಗಳನ್ನು ನಿರ್ಮಿಸುವುದನ್ನು, ಗೋಡೆಗಳನ್ನು ಕೆಡವುದನ್ನು ಮತ್ತು ವೈವಿಧ್ಯತೆಯ ನಡುವೆ ಮಾನವೀಯತೆಯು ಸಾಮರಸ್ಯದಿಂದ ಬದುಕಲು ಸಹಾಯ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಒತ್ತಿ ಹೇಳಿದರು.

ಡೇನಿಯಲ್ ಪಿಕ್ಕಿನಿ

ಮಾತೆಮೇರಿಯ ಆಂತರಿಕ ನೋಟದ ಮೂಲಕ ದೇವರು ಮತ್ತು ಇತಿಹಾಸದ ರಹಸ್ಯವನ್ನು ಆಲೋಚಿಸುವುದರಿಂದ ಪ್ರಚಾರ, ಸಿದ್ಧಾಂತ ಮತ್ತು ವಿಷಕಾರಿ ಮಾಹಿತಿಯ ವಿರೂಪಗಳಿಂದ ನಮ್ಮನ್ನು ರಕ್ಷಿಸುತ್ತದೆ. ಇವುಗಳಲ್ಲಿ ಯಾವುದೂ ನಿರಾಯುಧ ಮತ್ತು ನಿಶ್ಯಸ್ತ್ರಗೊಳಿಸುವ ಪದವನ್ನು ನೀಡಲು ಸಾಧ್ಯವಿಲ್ಲ. ಮೇರಿಯ ನೋಟವು ನಮ್ಮನ್ನು ದೈವಿಕ ಅನುಗ್ರಹಕ್ಕೆ ಆಹ್ವಾನಿಸುತ್ತದೆ, ಇದು ಜನರು, ರಾಷ್ಟ್ರಗಳು ಮತ್ತು ಸಂಸ್ಕೃತಿಗಳು ಶಾಂತಿಯಿಂದ ಒಟ್ಟಿಗೆ ನಡೆಯಲು ಅನುವು ಮಾಡಿಕೊಡುವ ಏಕೈಕ ನಿಜವಾದ ಮಾರ್ಗವಾಗಿದೆ.

ದೇವರ ವಾಕ್ಯವನ್ನು ಆಲಿಸುವುದು ಧರ್ಮಸಭೆಯನ್ನು ಸಿನೊಡಾಲಿಟಿಗೆ ಹೇಗೆ ಆಹ್ವಾನಿಸುತ್ತದೆ ಎಂಬುದನ್ನು ಎತ್ತಿ ತೋರಿಸುವ ಮೂಲಕ, ವಿಶ್ವಗುರು XIV ಲಿಯೋರವರು ತಮ್ಮ ಮುಕ್ತಾಯ ಭಾಷಣದಲ್ಲಿ 26ನೇ ಅಂತರರಾಷ್ಟ್ರೀಯ ಮಾರಿಯೊಲಾಜಿಕಲ್ ಮಾತೆಮರಿಯ ಸಮ್ಮೇಳನವು ಪ್ರಮುಖ ವಿಷಯಗಳು ಮತ್ತು ಫಲಿತಾಂಶಗಳನ್ನು ಸಂಕ್ಷೇಪಿಸಿದರು. ಸೆಪ್ಟೆಂಬರ್ 3 ರಿಂದ 6 ರವರೆಗೆ ರೋಮ್‌ನ ಆಂಟೋನಿಯನಮ್ ಆಡಿಟೋರಿಯಂನಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿಶ್ವಗುರುಗಳ ಅಂತರಾಷ್ಟ್ರೀಯ ಮಾತೆಮರಿಯಳ ಅಕಾಡೆಮಿ ಆಯೋಜಿಸಿತ್ತು.

ನಾಲ್ಕು ದಿನಗಳಲ್ಲಿ,ವಿಶ್ವದಾದ್ಯಂತದ ಸುಮಾರು 600 ಮಾರಿಯಾಲಜಿ ವಿದ್ವಾಂಸರು ಸಮ್ಮೇಳನದ ವಿಷಯ: ಜ್ಯೂಬಿಲಿ ಮತ್ತು ಸಿನೊಡಾಲಿಟಿ ಮರಿಯನ್ ಮುಖ ಮತ್ತು ಅಭ್ಯಾಸ ಹೊಂದಿರುವ ಧರ್ಮಸಭೆಯನ್ನು ಅನ್ವೇಷಿಸಿದರು.

ಎರಡು ಬೈಬಲ್ ವರ್ಗಗಳು
ಸಮ್ಮೇಳನದ ಶೀರ್ಷಿಕೆಯು ಎರಡು "ಬೈಬಲ್ ವರ್ಗಗಳನ್ನು" ಪ್ರತಿಬಿಂಬಿಸುತ್ತದೆ ಎಂದು ವಿಶ್ವಗುರುವು ಗಮನಸೆಳೆದರು, ಮಹೋತ್ಸವ/ ಜ್ಯೂಬಿಲಿ ಮತ್ತು ಸಿನೊಡಾಲಿಟಿ, ಇದು ದೇವತಾಯಿಯ ದೈವಕರೆಯನ್ನು ಮತ್ತು ಧ್ಯೇಯವನ್ನು ಶಕ್ತಿಯುತವಾಗಿ ವ್ಯಕ್ತಪಡಿಸುತ್ತದೆ. ಅವರಲ್ಲಿ, "ನಾವು ಧರ್ಮಸಭೆಯ ದೈವಕರೆಯನ್ನು ಓದಬಹುದು ಎಂದು ಅವರು ಹೇಳಿದರು. ಹೀಗೆ ಮಾತೆಮೇರಿಯು ಧರ್ಮಸಭೆಗೆ ಮಾದರಿಯಾಗಿ ನಿಲ್ಲುತ್ತಾಳೆ. ಧರ್ಮಸಭೆಯ ಮಾತೆ ಪೂಜ್ಯ ಕನ್ಯಾಮಾತೆ ಮರಿಯಳ ಬಗ್ಗೆ ವಿಶ್ವಗುರು ಹೇಳಿದರು, "ದೇವರ ಪವಿತ್ರ ಜನರಾಗುವುದು ಹೇಗೆ ಎಂದು ನಮಗೆ ಕಲಿಸುತ್ತಾರೆ."

"ಜ್ಯೂಬಿಲಿ ಮಹಿಳೆ"
ಮಾತೆಮೇರಿಯನ್ನು, ವಿಶ್ವಗುರು ಲಿಯೋರವರು ವಿವರಿಸಿದಂತೆ, "ಜ್ಯೂಬಿಲಿ ಮಹಿಳೆ" ಏಕೆಂದರೆ ಆಕೆಯು ಯಾವಾಗಲೂ ದೇವರ ವಾಕ್ಯವನ್ನು ಕೇಳುವುದರಿಂದ ಹೊಸದಾಗಿ ಪ್ರಾರಂಭಿಸುತ್ತಾಳೆ. ಸಂತ ಆಗಸ್ತೀನ್ ರವರು ಪಅಪನಿವೇದನೆಯ ಹತ್ತನೇ ಪುಸ್ತಕದಲ್ಲಿ ವಿವರಿಸಿದ ಮನೋಭಾವದಿಂದ ಆಕೆಯು ಹಾಗೆ ಮಾಡುತ್ತಾಳೆ. ಅಕೆಯು ಬಯಸಿದ ಉತ್ತರವನ್ನು ನಿರೀಕ್ಷಿಸುವ ಮೂಲಕವಲ್ಲ, ಆದರೆ ದೇವರಿಂದ ಆಕೆಯು ಕೇಳುವುದನ್ನು ಬಯಸುವ ಆಯ್ಕೆ ಮಾಡುವ ಮೂಲಕ. ಮಾತೆಮೇರಿಯಂತೆಯೇ, ಧರ್ಮಸಭೆಯು ದೇವರೊಂದಿಗೆ ಸಂವಾದದಲ್ಲಿ ತೊಡಗಿಸಿಕೊಳ್ಳಲು ಅಥವಾ ಕಷ್ಟಕರವಾದ, ಗೊಂದಲದ ಪ್ರಶ್ನೆಗಳನ್ನು ಕೇಳಲು ಎಂದಿಗೂ ಆಯಾಸಗೊಳ್ಳಬಾರದು.

ಮಾತೆಮೇರಿ: ಸಾಂಸ್ಕೃತಿಕ ಸಂವಾದಕ್ಕೆ ಒಂದು ಮಾರ್ಗ
ನಮೋ ಮರಿಯಾದ ಸಭೆಯನ್ನು ಮುನ್ನಡೆಸುವ ಮೊದಲು, ವಿಶ್ವಗುರುವು ವಿಶವಗುರುಗಳ ಅಕಾಡೆಮಿಗೆ ಅದರ ಅಮೂಲ್ಯವಾದ ಧರ್ಮಸಭೆಯ ಸೇವೆಗಾಗಿ ಧನ್ಯವಾದಗಳನ್ನು ಅರ್ಪಿಸಿದರು. ಸಂಸ್ಕೃತಿಗಳ ನಡುವಿನ ಮುಖಾಮುಖಿ ಮತ್ತು ಸಂವಾದದ ಮಾರ್ಗವಾಗಿ ಯೇಸುವಿನ ತಾಯಿಯ ಚಿತ್ರ ಮತ್ತು ಸಂದೇಶವನ್ನು ಪ್ರಸ್ತುತಪಡಿಸಿದರು.
 

06 ಸೆಪ್ಟೆಂಬರ್ 2025, 22:14