MAP

Papa riceve la Medaglia di Sant’Agostino dal priore provinciale agostiniano Robert P. Hagan Papa riceve la Medaglia di Sant’Agostino dal priore provinciale agostiniano Robert P. Hagan 

ಸತ್ಯ, ಏಕತೆ ಮತ್ತು ಪ್ರೀತಿ: ವಿಶ್ವಗುರು XIV ಲಿಯೋರವರಲ್ಲಿ ಆಗಸ್ತೀನಿಯರ ಮನೋಭಾವ

ಸೆಪ್ಟೆಂಬರ್ 17 ರಂದು ವಿಶ್ವಗುರು XIV ಲಿಯೋರವರು ತಮ್ಮ ಸಂತರ ದಿನವನ್ನು ಆಚರಿಸುತ್ತಾ, ವಿಲ್ಲನೋವಾದ ಸಂತ ಥಾಮಸ್‌ ಆಗಸ್ತೀನಿರವರ ಪ್ರಾಂತ್ಯದ ಮುಖ್ಯಸ್ಥರು ವಿಶ್ವಗುರು "ದೇವರು ಮತ್ತು ಜನರ ಮಾತುಗಳನ್ನು ಕೇಳುವ ಪ್ರಾರ್ಥನೆಯ ವ್ಯಕ್ತಿ" ಎಂದು ಹೇಳುತ್ತಾರೆ.

ಧರ್ಮಗುರು ಪಾವೆಲ್ ರೈಟೆಲ್-ಆಂಡ್ರಿಯಾನಿಕ್ ಮತ್ತು ಕರೋಲ್ ಡಾರ್ಮೊರೊಸ್

ವಿಶ್ವಗುರು XIV ಲಿಯೋರವರನ್ನು ಅವರ ಸಂತರ ದಿನದಂದು ಆಚರಿಸುತ್ತಾ, ಸಂತ ರಾಬರ್ಟ್ ಬೆಲ್ಲರ್ಮೈನ್, ವಿಲ್ಲನೋವಾದ ಸಂತ ಥಾಮಸ್‌ ಆಗಸ್ತೀನಿರವರ ಪ್ರಾಂತ್ಯದ ಮುಖ್ಯಸ್ಥ ಧರ್ಮಗುರು ರಾಬರ್ಟ್ ಹಗನ್ OSA, ಆಗಸ್ತೀನ್‌ ಸಭೆಯ ತಮ್ಮ ಸಹೋದರನನ್ನು ಪ್ರೇಷಿತರಾದ ಪೇತ್ರರ ಉತ್ತರಾಧಿಕಾರಿ ಪೀಠಕ್ಕೆ ಆಯ್ಕೆ ಮಾಡುವುದು ಜಗತ್ತಿಗೆ ಸಂತ ಆಗಸ್ತೀನ್ ರವರ ಮೌಲ್ಯಗಳಾದ ಸತ್ಯ, ಏಕತೆ ಮತ್ತು ಪ್ರೀತಿಯನ್ನು ಮರುಶೋಧಿಸಲು ಒಂದು ಅವಕಾಶ ದೊರಕಿದೆ ಎಂದು ನಂಬುತ್ತಾರೆ ಎಂದು ಹೇಳಿದರು.

27 ವರ್ಷಗಳಿಂದ ವಿಶ್ವಗುರುವನ್ನು ಅರಿತಿರುವ ಧರ್ಮಗುರು ಹ್ಯಾಗನ್, ಅವರು ದೇವರೊಂದಿಗಿನ ಆಳವಾದ ಪ್ರಾರ್ಥನಾಪೂರ್ವಕ ಬಂಧದೊಂದಿಗೆ ಜನರಿಗೆ ಹತ್ತಿರವಾಗುವ ಬಯಕೆಯನ್ನು ಸಂಯೋಜಿಸುತ್ತಾರೆ ಎಂದು ಒತ್ತಿ ಹೇಳುತ್ತಾರೆ. ಅವರು ವಿವರಿಸುವಂತೆ, ಅವರು ದೇವರೊಂದಿಗಿನ ಪ್ರಾರ್ಥನಾಪೂರ್ವಕ ಸಂಬಂಧ ಮತ್ತು ಜನರೊಂದಿಗೆ ಇರಬೇಕೆಂಬ ಪ್ರೀತಿಯ ಬಯಕೆಯ ಅದ್ಭುತ ಸಂಯೋಜನೆಯನ್ನು ಹೊಂದಿದ್ದಾರೆ. ಆಗಸ್ತೀನರ ಈ ಮಗ ಈಗ ನಮ್ಮೆಲ್ಲರಿಗೂ ಒಬ್ಬ ಉತ್ತಮ ಕುರುಬರಾಗಿದ್ದಾರೆ.

ಅವರು ಚಿಕಾಗೋದಲ್ಲಿ ಪ್ರಾಂತೀಯರಾಗಿದ್ದಾಗ ಮತ್ತು ನಂತರ ಸಭೆಯ ಪೂರ್ವ ಪ್ರಧಾನ ಶ್ರೇಷ್ಠಾಧಿಕಾರಿಯಾಗಿದ್ದಾಗ ಧರ್ಮಗುರು ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ ರವರೊಂದಿಗಿನ ಭೇಟಿಗಳನ್ನು ನೆನಪಿಸಿಕೊಳ್ಳುತ್ತಾರೆ. "ನಾನು, ಸಭೆಯ ಪೂರ್ವ ಪ್ರಧಾನ ಶ್ರೇಷ್ಠಾಧಿಕಾರಿಯಾಗಿದ್ದಾಗ ರಾಬರ್ಟ್ ಪ್ರೆವೋಸ್ಟ್ ರವರಿಗೆ ನನ್ನ ಪ್ರತಿಜ್ಞೆ ಮಾಡಿದ್ದೇನೆ. ಅವರು ದಯೆ ಮತ್ತು ಸುಲಭವಾಗಿ ಸಂಪರ್ಕಿಸಬಹುದಾದವರಾಗಿದ್ದರು ಮತ್ತು ಈಗ ನಮ್ಮೆಲ್ಲರಿಗೂ ಅದೇ ಪಾತ್ರದಲ್ಲಿ, ದೇವರು ಅವರನ್ನು, ಅವರ ಕುರಿಮಂದೆಯನ್ನು ಮುನ್ನೆಡೆಸಲು ಏಕೆ ಆರಿಸಿಕೊಂಡರು ಎಂಬುದನ್ನು ನೀವು ಕಾಣಬಹುದು ಎಂದು ಹೇಳಿದರು.

ಧ್ಯೇಯ ಮತ್ತು ಸಮುದಾಯದ ವ್ಯಕ್ತಿ
ವಿಶ್ವಗುರು XIV ಲಿಯೋರವರ ಹಿನ್ನೆಲೆಯ ಪ್ರಮುಖ ಭಾಗವೆಂದರೆ ಅವರ ಧರ್ಮಪ್ರಚಾರಕ ಸೇವೆ. ಅವರು ಅಮೇರಿಕದವರು, ಆದರೆ ಅವರು ಪೆರುವಿನಲ್ಲಿ 20 ವರ್ಷಗಳ ಕಾಲ ಬಡವರ ಜೊತೆ ಸೇವೆ ಸಲ್ಲಿಸಿದರು. ಅವರು ಭಾಷೆಯನ್ನು ಮಾತ್ರ ಕಲಿತಿಲ್ಲ, ಸಂಸ್ಕೃತಿಯನ್ನು ಕಲಿತರು. ನಮಗೆ, ಪೂರ್ವ ಪ್ರಧಾನ ಶ್ರೇಷ್ಠಗುರು, ಒಬ್ಬ ಕಿರು ವಿಶ್ವಗುರುವಾಗಿದ್ದಂತೆ.

ವಿಶ್ವಗುರುಗಳೊಂದಿಗೆ ಆಗಸ್ತೀನಿಯದವರು
ಸೆಪ್ಟೆಂಬರ್ 15 ರಂದು, ವಿಶ್ವಗುರು XIV ಲಿಯೋರವರು ಬಂದ ಕ್ರಮವಾದ ಆಗಸ್ತೀನಿಯದವರ ಸಾಮಾನ್ಯ ಸಭೆಯ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. ಅವರು ಅವರಿಗೆ ಹೇಳಿದರು: ನಾವು ನಮ್ಮ ಸಾಮುದಾಯಿಕ ಜೀವನ ಮತ್ತು ಅಪೊಸ್ತಲರ ಚಟುವಟಿಕೆಯನ್ನು ಪೂರ್ಣಗೊಳಿಸಲು ಬಯಸಿದರೆ, ನಮ್ಮ ಭೌತಿಕ ಸರಕುಗಳನ್ನು ಹಾಗೂ ನಮ್ಮ ಮಾನವ ಮತ್ತು ಆಧ್ಯಾತ್ಮಿಕ ವಸ್ತುಗಳನ್ನು ಹಂಚಿಕೊಳ್ಳಲು ನಾವು ನೋಡಬೇಕಾದದ್ದು ದೈವಿಕ ದಾನದ ವರ್ಣನಾತೀತ ಕೊಡುಗೆಯಾಗಿದೆ. ಅವರು ತಮ್ಮ ಆಗಸ್ತೀನಿನ ಸಹೋದರರನ್ನು ಸಹೋದರ ಸಂತೋಷದಿಂದ, ಆತ್ಮದ ಸಲಹೆಗಳನ್ನು ಸ್ವಾಗತಿಸಲು ಸಿದ್ಧವಾದ ಹೃದಯದಿಂದ ಸಭೆಯ ಸೇವೆಯನ್ನು ಮುಂದುವರಿಸಲು ಒತ್ತಾಯಿಸುವ ಮೂಲಕ ಮುಕ್ತಾಯಗೊಳಿಸಿದರು, "ಪ್ರಭುವಿನ ದಯೆಯು, ನಿಮ್ಮ ಆಲೋಚನೆಗಳು ಮತ್ತು ನಿಮ್ಮ ಕಾರ್ಯಗಳಿಗೆ ಸ್ಫೂರ್ತಿ ನೀಡಲಿ, ನಿಮ್ಮನ್ನು ಅಪೊಸ್ತಲರನ್ನಾಗಿ ಮತ್ತು ಜಗತ್ತಿನಲ್ಲಿ ಸುವಾರ್ತೆಯ ಸಾಕ್ಷಿಗಳನ್ನಾಗಿ ಮಾಡಲಿ" ಎಂದು ಪ್ರಾರ್ಥಿಸಿದರು.
 

17 ಸೆಪ್ಟೆಂಬರ್ 2025, 19:09