ಭ್ರಷ್ಟಾಚಾರವು ಘನತೆಯನ್ನು ನಾಶಪಡಿಸುತ್ತದೆ ಎಂದು ಕಾರ್ಡಿನಲ್ ಅಡ್ವಿಂಕುಲಾರವರು ಎಚ್ಚರಿಸಿದ್ದಾರೆ
ಮಾರ್ಕ್ ಸಲೂಡೆಸ್, ಲಿಕಾಸ್ ಸುದ್ದಿ
ಮನಿಲಾದ ಮಹಾಧರ್ಮಾಧ್ಯಕ್ಷರಾದ, ಫಿಲಿಪೈನ್ಸ್‌ನಲ್ಲಿ ಸಾರ್ವಜನಿಕ ಪ್ರತಿಭಟನೆಗಳು ಮತ್ತು ಹೊಣೆಗಾರಿಕೆಯ ಬೇಡಿಕೆಗಳು ಕೇವಲ ರಾಜಕೀಯ ಕ್ರಿಯೆಗಳಲ್ಲ, ಬದಲಾಗಿ ನೈತಿಕ ಬಾಧ್ಯತೆಗಳಾಗಿವೆ ಎಂದು ಒತ್ತಿ ಹೇಳಿದ್ದಾರೆ.
ಅವು ವಾಸ್ತವವಾಗಿ ಜನರ ಸಾಮೂಹಿಕ ನೈತಿಕ ದೃಢವಿಶ್ವಾಸದ ಅಭಿವ್ಯಕ್ತಿಗಳು ಹಾಗೂ ನಮ್ಮ ಮಧ್ಯದಲ್ಲಿ ದುಷ್ಟತನದ ಪ್ರಸರಣವನ್ನು ನಿಗ್ರಹಿಸುವ ಅವರ ಸೂಕ್ತವಾದ ಬಾಧ್ಯತೆಯ ಅನುಸರಣೆಯಾಗಿದೆ ಎಂದು ಕಾರ್ಡಿನಲ್ ಜೋಸ್ ಅಡ್ವಿಂಕುಲಾರವರು ಸೆಪ್ಟೆಂಬರ್ 15 ರಂದು ಬಿಡುಗಡೆ ಮಾಡಿದ ಪಾಲನಾ ಆರೈಕೆಯ ಹೇಳಿಕೆಯಲ್ಲಿ ಹೇಳಿದರು.
ಪ್ರಜಾಪ್ರಭುತ್ವವು ಚುನಾವಣೆಗಳೊಂದಿಗೆ ಪ್ರಾರಂಭವಾಗುವುದಿಲ್ಲ ಮತ್ತು ಕೊನೆಗೊಳ್ಳುವುದಿಲ್ಲ ಎಂದು ಕಾರ್ಡಿನಲ್ ರವರು ಭಕ್ತವಿಶ್ವಾಸಿಗಳಿಗೆ ನೆನಪಿಸಿದರು. ಸಾರ್ವಜನಿಕರು ಜಾಗರೂಕರಾಗಿರಬೇಕು ಮತ್ತು ನಾಯಕರು ತಮ್ಮ ಕಾರ್ಯಗಳಿಗೆ ಹೊಣೆಗಾರರಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕಳೆದ ವಾರ, ಫಿಲಿಪೈನ್ಸ್‌ನ ಕೆಲವು ಧರ್ಮಸಭೆಯ ನಾಯಕರು ಸೆಪ್ಟೆಂಬರ್ 21 ರಂದು EDSA ಪೀಪಲ್ ಪವರ್ ಸ್ಮಾರಕದಲ್ಲಿ ನಡೆದ ಪ್ರವಾಹ ನಿಯಂತ್ರಣ ಯೋಜನೆಗಳಲ್ಲಿ ನಡೆದ ಬಹು-ಶತಕೋಟಿ-ಪೆಸೊ ವೈಪರೀತ್ಯಗಳಿಗೆ ಹೊಣೆಗಾರಿಕೆಯನ್ನು ಒತ್ತಾಯಿಸಲು ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಲು ಸಾರ್ವಜನಿಕರನ್ನು ಪ್ರೋತ್ಸಾಹಿಸಿದರು. ಮನಿಲಾದ ಲುನೆಟಾ ಪಾರ್ಕ್‌ನಲ್ಲಿ ಬೆಳಗಿನ ಪ್ರತಿಭಟನೆ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಕ್ವಿಜಾನ್ ನಗರದ ಪೀಪಲ್ ಪವರ್ ಸ್ಮಾರಕದಲ್ಲಿ ಮಧ್ಯಾಹ್ನದ ದೊಡ್ಡ ಕಾರ್ಯಕ್ರಮ ನಡೆಯಲಿದ್ದು, 15,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ.
ಸಂಘಟಕರು ಹೊಣೆಗಾರಿಕೆ, ಪಾರದರ್ಶಕತೆ ಮತ್ತು ಏಕತೆಯನ್ನು ಒತ್ತಿಹೇಳುತ್ತಾರೆ, ಭಾಗವಹಿಸುವವರು ಸಮರ ಕಾನೂನಿನ ವಾರ್ಷಿಕೋತ್ಸವದಂದು ಒಗ್ಗಟ್ಟಿನ ಸಂಕೇತವಾಗಿ ಬಿಳಿ ಬಣ್ಣವನ್ನು ಧರಿಸಲು ಒತ್ತಾಯಿಸಿದರು.
ಪ್ರತಿಭಟನೆಕಾರರನ್ನು ಹಾಗೂ ಭಾಗವಹಿಸುವವರು, ಭ್ರಷ್ಟಾಚಾರವನ್ನು ಕೇವಲ ದುರಾಸೆ ಎಂದು ತಳ್ಳಿಹಾಕದೆ, ಅದನ್ನು "ದುಷ್ಟತೆಯ ದೃಢರೂಪ" ಎಂದು ಗುರುತಿಸಬೇಕು ಎಂದು ಕಾರ್ಡಿನಲ್ ಅಡ್ವಿಂಕುಲಾರವರು ತಮ್ಮ ಪಾಲನಾ ಆರೈಕೆಯ ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.
ಕಾರ್ಡಿನಲ್ ಅಡ್ವಿಂಕುಲಾರವರು ವಿಶ್ವಗುರು ಫ್ರಾನ್ಸಿಸ್ ರವರ "ಸಾಮಾಜಿಕ ದಾನ" ಅಥವಾ "ರಾಜಕೀಯ ಪ್ರೀತಿ" ಎಂಬ ಕರೆಯನ್ನು ಸಹ ಬಳಸಿಕೊಂಡರು, ಕ್ರೈಸ್ತರು ಸಾಮಾನ್ಯ ಒಳಿತಿಗಾಗಿ ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಕರೆ ನೀಡಲಾಗಿದೆ ಎಂದು ಹೇಳಿದರು.
ಕ್ರೈಸ್ತರಾದ ನಾವು ದೇವರ ಮೇಲೆ ಕೇಂದ್ರಿತರು, ಆದ್ದರಿಂದ ರಾಷ್ಟ್ರದ ಮೇಲೆ ಪ್ರೀತಿಯುಳ್ಳವರು. ದೇವರಿಗೆ ನಿಜವಾದ ಭಕ್ತಿಯನ್ನು, ದೇಶದ ಮೇಲಿನ ಪ್ರೀತಿಯಲ್ಲಿ ತೋರಿಸಲಾಗುತ್ತದೆ, ಏಕೆಂದರೆ ಪವಿತ್ರತೆಯು ಶೌರ್ಯವನ್ನು ಹೊರತರುತ್ತದೆ. ನಿಜವಾದ ಪವಿತ್ರತೆಯಲ್ಲಿ, ನ್ಯಾಯಕ್ಕಾಗಿ ಸೇವೆ ಯಾವಾಗಲೂ ಒಳಗೊಂಡಿರುತ್ತದೆ, ಎಂದು ಅವರು ಹೇಳಿದರು.
ಮನಿಲಾದ ಕಾರ್ಡಿನಲ್ ಮಹಾಧರ್ಮಾಧ್ಯಕ್ಷರು, ಭ್ರಷ್ಟಾಚಾರದಿಂದ ಉಂಟಾಗುವ ನೋವು, ವಿಶೇಷವಾಗಿ ಬಡವರಲ್ಲಿ ಕಂಡು ಬರುವ ಅಥವಾ ಅವರು ಜೀವನದಲ್ಲಿ ಎದುರಿಸುವ ಕಷ್ಟಗಳು, ಸ್ವಾರ್ಥ, ಅಪ್ರಾಮಾಣಿಕತೆ ಮತ್ತು ದುರಾಸೆಯ ಮೇಲೆ ಸತ್ಯ, ನ್ಯಾಯ ಮತ್ತು ಶಾಂತಿಯ ವಿಜಯದ ಮೂಲಕ ಸಂತೋಷವಾಗಿ ರೂಪಾಂತರಗೊಳ್ಳಲಿ ಎಂದು ಪ್ರಾರ್ಥಿಸುತ್ತಾ, ಈ ಸಂದರ್ಭದಲ್ಲಿ ನಮ್ಮ ವ್ಯಾಕುಲ ಮಾತೆಮೇರಿಯ ಮಧ್ಯಸ್ಥಿಕೆಯನ್ನು ಕೋರಿದರು.