ಭಾರತ: ಪೂರ್ವದ ಲೂರ್ದ್ ನಗರದಲ್ಲಿ ಪೂಜ್ಯ ಕನ್ಯಾ ಮಾತೆಮೇರಿಯ ಜನನೋತ್ಸವ
ಆಂಡ್ರಿಯಾ ರೇಗೊ ಮತ್ತು ಧರ್ಮಗುರು ರಿಚೀ ವಿನ್ಸೆಂಟ್
ಸೆಪ್ಟೆಂಬರ್ 8ರಂದು, ಭಾರತದ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ "ಆರೋಗ್ಯಮಾತೆಯ ಮಹಾದೇವಾಲಯ" ಎಂದು ಸ್ಥಳೀಯವಾಗಿ ಕರೆಯಲ್ಪಡುವ "ವೇಲಂಕಣಿಯ ಅಮ್ಮ ಆರೋಗ್ಯಮಾತೆಯ ಮಹಾದೇವಾಲಯ " ದಲ್ಲಿ ಲಕ್ಷಾಂತರ ಭಕ್ತರು ಪೂಜ್ಯ ಕನ್ಯಾ ಮಾತೆಮೇರಿಯ ಜನನೋತ್ಸವದ ಹಬ್ಬವನ್ನು ಸಂತೋಷದಿಂದ ಆಚರಿಸಿದರು.
"ನಮ್ಮ ಆರೋಗ್ಯ ಮಾತೆಯ ತಾಯಿ"ಯ ಮೇಲಿನ ಭಕ್ತಿಯು ಎಲ್ಲಾ ಹಂತಗಳ ಜನರಲ್ಲಿ ಏಕತೆಯ ಭಾವವನ್ನು ಬೆಳೆಸುತ್ತದೆ, ಅವರು ಕೃಪೆ ಮತ್ತು ನಮ್ರತೆಯ ಸಾರಾಂಶವಾದ ಮಾತೆಮೇರಿಯ ಜೀವನಕ್ಕಾಗಿ ದೇವರನ್ನು ಮಹಿಮೆಪಡಿಸಲು ಒಟ್ಟುಗೂಡಿದರು.
ಪೂಜ್ಯ ಕನ್ಯಾ ಮಾತೆಮೇರಿಯ ಸ್ಮರಾಣರ್ಥದ ಹಬ್ಬಗಳು
ಆಗಸ್ಟ್ 29 ರಂದು ತಂಜಾವೂರಿನ ಧರ್ಮಾಧ್ಯಕ್ಷರಾದ ಧರ್ಮಾಧ್ಯಕ್ಷ ಸಗಯರಾಜ್ ತಂಬುರಾಜರವರು "ಮಾತೆಮಾರಿಯಾಳ ಧ್ವಜವನ್ನು” ಹಾರಿಸುವಾಗ ಭಕ್ತವಿಶ್ವಾಸಿಗಳು ದಿವ್ಯಬಲಿಪೂಜೆಯನ್ನು ಸಲ್ಲಿಸುವ ಉದ್ಘಾಟನಾ ಸಮಾರಂಭದೊಂದಿಗೆ ಉತ್ಸವಗಳು ಪ್ರಾರಂಭವಾದವು.
ಹನ್ನೊಂದು ದಿನಗಳ ನವೇನ ದಿನಗಳಲ್ಲಿ, ನಮ್ಮ ಆರೋಗ್ಯ ಮಾತೆಯ ತಾಯಿ"ಯ ನವೇನಾ ದಿನಗಳು ಸೇರಿದಂತೆ, ಬೆಳಿಗ್ಗೆಯಿಂದ ಸಂಜೆಯವರೆಗೆ ತಮಿಳು, ಇಂಗ್ಲಿಷ್, ಮರಾಠಿ, ಕೊಂಕಣಿ, ಮಲಯಾಳಂ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ದಿನಕ್ಕೆ 14ಬಾರಿ ಪ್ರಾರ್ಥನೆಗಳು ಮತ್ತು ದಿವ್ಯಬಲಿಪೂಜೆಗಳನ್ನು ಸಲ್ಲಿಸಲಾಯಿತು.
ಸೆಪ್ಟೆಂಬರ್ 7 ರಂದು, ಪಾಂಡಿಚೇರಿ-ಕಡಲೂರಿನ ಮಹಾಧರ್ಮಾಧ್ಯಕ್ಷರಾದ ಫ್ರಾನ್ಸಿಸ್ ಕಾಲಿಸ್ಟ್ ರವರು ಪವಿತ್ರ ದಿವ್ಯಬಲಿಪೂಜೆಯ ಅಧ್ಯಕ್ಷತೆ ವಹಿಸಿದ್ದರು, ನಂತರ ಅಲಂಕೃತ ಪೂಜ್ಯ ಕನ್ಯಾ ಮಾತೆಮೇರಿಯ ಜನನೋತ್ಸವದ ರಥ ಮೆರವಣಿಗೆ ರಾತ್ರಿ ಮಹಾದೇವಾಲಯದ ಮೈದಾನದ ಮೂಲಕ ಸಾಗಿತು. ಮಧ್ಯರಾತ್ರಿಯಲ್ಲಿ ಪೂಜ್ಯ ಕನ್ಯಾ ಮಾತೆಮೇರಿಯ ಜನನೋತ್ಸವನ್ನು ಆಚರಿಸಲು ಸಂತೋಷದಾಯಕ ಕೇಕ್ ಕತ್ತರಿಸುವ ಸಮಾರಂಭಕ್ಕೆ ಕಾರಣವಾಯಿತು.
ಸೆಪ್ಟೆಂಬರ್ 8 ರಂದು ಮದ್ರಾಸ್-ಮೈಲಾಪುರದ ಮಹಾಧರ್ಮಾಧ್ಯಕ್ಷರು ಮತ್ತು ತಮಿಳುನಾಡು ಧರ್ಮಾಧ್ಯಕ್ಷರುಗಳ ಸಮ್ಮೇಳನದ ಅಧ್ಯಕ್ಷ ಮಹಾಧರ್ಮಾಧ್ಯಕ್ಷರಾದ ಜಾರ್ಜ್ ಅಂತೋನಿಸಾಮಿರವರು ಬೆಳಗಿನ ಜಾವ ವಿಶೇಷ ದಿವ್ಯಬಲಿಪೂಜೆಯನ್ನು ನೆರವೇರಿಸುವುದರೊಂದಿಗೆ ಆಚರಣೆಗಳು ಮುಂದುವರೆದವು ಮತ್ತು ಆಚರಣೆಯು ದಿನವಿಡೀ ರೋಸರಿ ಪಠಣ ಮತ್ತು ಭಕ್ತರ ನಿರಂತರ ಪ್ರಾರ್ಥನೆಗಳೊಂದಿಗೆ ಮುಂದುವರೆಯಿತು.
ರಾಜ್ಯ ಮತ್ತು ರಾಷ್ಟ್ರದಾದ್ಯಂತ ಹಬ್ಬಗಳು
ತಮಿಳುನಾಡಿನ ರಾಜಧಾನಿ ಚೆನ್ನೈನ ಬೆಸೆಂಟ್ ನಗರದಲ್ಲಿರುವ ಅಮ್ಮ ಆರೋಗ್ಯಮಾತೆಯ ವೇಲಂಕಣಿ ದೇಗುಲದಲ್ಲಿ, ಆರೋಗ್ಯ ಮಾತೆಗೆ ಸಮರ್ಪಿತವಾದ ಮತ್ತೊಂದು ಯಾತ್ರಾ ಕೇಂದ್ರವಾದ ಈ ಹಬ್ಬದ ದಿನದಂದು ಪವಿತ್ರ ದಿವ್ಯಬಲಿಪೂಜೆಯಲ್ಲಿ ಭಾಗವಹಿಸಲು ಸಾವಿರಾರು ಯಾತ್ರಿಕರು ಕಾಲ್ನಡಿಗೆಯಲ್ಲಿ ನಡೆದುಕೊಂಡು ಹೋಗುವುದನ್ನು ವೀಕ್ಷಿಸಲಾಯಿತು.
ಈ ವರ್ಷ, 11 ದಿನಗಳ ಹಬ್ಬದ ಮೊದಲ ದಿನವನ್ನು ಗುರುತಿಸುವ ಮೂಲಕ, ಮದ್ರಾಸ್-ಮೈಲಾಪುರದ ಮಹಾಧರ್ಮಾಧ್ಯಕ್ಷರಾದ ಜಾರ್ಜ್ ಅಂತೋನಿಸಾಮಿರವರ ಅಧ್ಯಕ್ಷತೆಯಲ್ಲಿ ನಡೆದ ಧ್ವಜಾರೋಹಣ ಸಮಾರಂಭದಲ್ಲಿ ದೇವಾಲಯವು ಹತ್ತು ಲಕ್ಷಕ್ಕೂ ಹೆಚ್ಚು ಯಾತ್ರಿಕರನ್ನು ಸ್ವಾಗತಿಸಿತು.
ವೆಲ್ಲಂಕಣಿ: 'ಪೂರ್ವದ ಲೂರ್ದುನಗರ'
"ಅನ್ನೈ ವೆಲಂಕಣ್ಣಿ" ಎಂಬ ಶೀರ್ಷಿಕೆ ತಮಿಳು ಭಾಷೆಯಿಂದ ಬಂದಿದೆ, ಅಲ್ಲಿ "ಅನ್ನೈ" ಎಂದರೆ ತಾಯಿ ಮತ್ತು "ವೇಲಂಕಣ್ಣಿ", ಕರಾವಳಿ ತಮಿಳುನಾಡಿನ (ದಕ್ಷಿಣ ಭಾರತ) ಒಂದು ಹಳ್ಳಿಯ ಹೆಸರು, ಅಂದರೆ ವೇಲಂಕಣ್ಣಿ, ೧೬ ನೇ ಶತಮಾನದಲ್ಲಿ ಪೂಜ್ಯಕನ್ಯಾ ಮಾತೆಮೇರಿಯಾಗಿ ಕಾಣಿಸಿಕೊಂಡಿದ್ದಾಳೆಂದು ನಂಬಲಾದ ಹಳ್ಳಿಯದು.
ತಮಿಳುನಾಡಿನ ಅಮ್ಮ ಆರೋಗ್ಯಮಾತೆಯ ವೇಲಂಕಣಿ ದೇಗುಲವನ್ನು ಗೋಥಿಕ್ ಶೈಲಿಯಲ್ಲಿ ನಿರ್ಮಿಸಲಾಗಿದ್ದು, ಇದರ ಸ್ಥಾಪನೆಯು 16ನೇ ಶತಮಾನದಲ್ಲಿ ದೇವರ ಮಾತೆಯ ಎರಡು ದರ್ಶನಗಳು ಮತ್ತು 17 ನೇ ಶತಮಾನದ ಉತ್ತರಾರ್ಧದಲ್ಲಿ ಬಂಗಾಳಕೊಲ್ಲಿಯಲ್ಲಿ ಬಿರುಗಾಳಿಯಿಂದ ಪೋರ್ಚುಗೀಸ್ ನಾವಿಕರು ರಕ್ಷಿಸಿದ ಕಾರಣ ಎಂದು ಹೇಳಲಾಗುತ್ತದೆ.
ಎಲ್ಲಾ ಧರ್ಮಗಳ ಜನರಲ್ಲಿ ಏಕತೆ
ದೃಷ್ಟಿಗೋಚರವಾದ ಶತಮಾನಗಳ ನಂತರವೂ, 11 ದಿನಗಳ ಉತ್ಸವ ಮತ್ತು ಆಚರಣೆಗಳನ್ನು ಪ್ರತಿ ವರ್ಷವೂ ಭವ್ಯವಾಗಿ ಆಚರಿಸಲಾಗುತ್ತದೆ.
ಈ ವರ್ಷವಷ್ಟೇ, ಅಮ್ಮ ಆರೋಗ್ಯಮಾತೆಯ ವೇಲಂಕಣಿಯ ಮಹಾದೇವಾಲಯವನ್ನು ಹನ್ನೊಂದು ದಿನಗಳ ನವೇನಗಳಲ್ಲಿ 3 ಮಿಲಿಯನ್ ಭಕ್ತರು ಭೇಟಿ ನೀಡಿದರು. ಮಹಾದೇವಾಲಯವು, ಭಾರತದಲ್ಲಿ ಹೆಚ್ಚು ಭೇಟಿ ನೀಡುವ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿದೆ, ಅಲ್ಲಿ ಭಾರತದಾದ್ಯಂತದ ಹಿಂದೂಗಳು, ಮುಸ್ಲಿಮರು ಮತ್ತುಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಸಾಮರಸ್ಯದಿಂದ ದಿವ್ಯ ಬಲಿಪೂಜೆ ಸಲ್ಲಿಸಲು ಸೇರುತ್ತಾರೆ. ಪ್ರತಿ ವರ್ಷ, ನೂರಾರು ಪವಾಡದ ಗುಣಪಡಿಸುವಿಕೆಗಳು ವರದಿಯಾಗುತ್ತವೆ.