ಬೆನಿನ್‌ನಲ್ಲಿ ದೃಷ್ಟಿಹೀನ ಜನರಿಗೆ ಕ್ರಿಸ್ತರ ಬೆಳಕಿನ ಸಂಘದ ಸೇವಕರ ನೆರವು
ಸಿಸ್ಟರ್ ಚಿಬಿ ನಟಾಚಾ ಡಾಟೊ, SLC
ಜುಲೈ 13 ರಂದು 15 ವರ್ಷದ ಮ್ಯಾಕ್ಸಿಮ್ ರಜೆ ಆರಂಭವಾಗುವ ಮುನ್ನಾದಿನದಂದು. ತನ್ನ ಹೆತ್ತವರನ್ನು ಮತ್ತೆ ನೋಡಲು ಆತನು ಅಸಹನೆ ತೋರುತ್ತಿದ್ದರೂ, ಆತನು "ತನ್ನ ಎರಡನೇ ತಾಯಿ" ಎಂದು ಪರಿಗಣಿಸುವ ವ್ಯಕ್ತಿಯಿಂದ ಸೃಷ್ಟಿಸಲ್ಪಟ್ಟ ಪ್ರೀತಿಯ ವಾತಾವರಣದಲ್ಲಿ ಕಳೆದ ತಿಂಗಳುಗಳ ಬಗ್ಗೆ ಆತನಿಗೆ ಈಗಾಗಲೇ ಭಾವನೆಗಳು ಮರುಕಲ್ಪಿಸಿವೆ.
ಸಿಸ್ಟರ್ ಅಡಿಲೇಡ್ ಟೊಗ್ನಿಜಿನ್ ರವರು, ಬೆನಿನ್‌ನ ಆರ್ಥಿಕ ರಾಜಧಾನಿ ಕೊಟೊನೌದಿಂದ ಸುಮಾರು 83 ಕಿಲೋಮೀಟರ್ ದೂರದಲ್ಲಿರುವ ಜಾಂಗ್ಲಾನ್ಮೆಯಲ್ಲಿರುವ ಸಿಲೋಯ್ ಕೇಂದ್ರದ ಮುಖ್ಯಸ್ಥರಾಗಿದ್ದಾರೆ.
ಮ್ಯಾಕ್ಸಿಮ್ ರವರು ಮೂಲತಃ ಬೆನೈನ್‌ನ ಕ್ಲೌಕಾನ್ಮೆ ಜಿಲ್ಲೆಯ (ನೈಋತ್ಯ) ಹಳ್ಳಿಯವರು. ಐದನೇ ವಯಸ್ಸಿನಲ್ಲಿ ಅವರು ಈ ಕೇಂದ್ರಕ್ಕೆ ಬಂದಾಗ, ಮ್ಯಾಕ್ಸಿಮ್ ರವರು ಸಂಪೂರ್ಣ ಹತಾಶೆಯಲ್ಲಿದ್ದರು.
"ನಾನು ಕುರುಡನಾಗಿ ಹುಟ್ಟಿದ್ದ" ಕಾರಣ, ಅವರು ದುಃಖದಿಂದ ನಿಟ್ಟುಸಿರು ಬಿಟ್ಟಿದ್ದರು. 2015ರಲ್ಲಿ ನಾನು ಸಿಲೋ ಕೇಂದ್ರಕ್ಕೆ ಬರುವ ಮೊದಲು, ನನ್ನ ಕುರುಡುತನದಿಂದಾಗಿ ನನ್ನ ಜೀವನ ಮುಗಿದುಹೋಯಿತು ಎಂದು ನಾನು ಭಾವಿಸಿದ್ದೆ.
ಧಾರ್ಮಿಕ ಭಗಿನಿಯರ ಮಾರ್ಗದರ್ಶನದಿಂದಾಗಿ, ಅವರು ಜುಲೈ 2025ರಲ್ಲಿ ತಮ್ಮ BEPC ಡಿಪ್ಲೊಮಾವನ್ನು ಪಡೆದರು. "ಕಂಪ್ಯೂಟರ್‌ಗಳ ಬಗ್ಗೆ ಮತ್ತು ಫ್ರೆಂಚ್ ಭಾಷೆಯನ್ನು ಮಾತನಾಡುವುದು ಮತ್ತು ಓದುವುದು ಹೇಗೆ ಎಂಬುದನ್ನು ಕಲಿಯಲು ಹಾಗೆ ಶಾಲೆಗೆ ದಾಖಲಾಗುವಾಗಲೂ ಸಹ, ಅವರಿಗೆ ಆಶ್ಚರ್ಯವಾಯಿತು. ಈ ಕೇಂದ್ರವು "ನನಗೆ ಜೀವನದಲ್ಲಿ ಹೊಸ ಅವಕಾಶವನ್ನು ನೀಡಿತು" ಎಂದು ಕೇಂದ್ರವು ನೀಡಿದ ಕೊಡಗೆಯನ್ನು ಅವರು ಸಂತೋಷದಿಂದ ವಿವರಿಸಿದರು.
ದೃಷ್ಟಿಹೀನ ಜನರ ಸ್ವಾಯತ್ತತೆಯನ್ನು ಅಭಿವೃದ್ಧಿಪಡಿಸುವುದು
1993ರಲ್ಲಿ ಮಹಾಧರ್ಮಾಧ್ಯಕ್ಷರಾದ ಸಾಸ್ಟ್ರೆರವರು ಸಿಲೋಯ್ ಕೇಂದ್ರವನ್ನು SLC ಸಭೆಯ ಧಾರ್ಮಿಕ ಭಗಿನಿಯರ ವಹಿಸಿಕೊಂಡಾಗ ನಿವಾಸಿಗಳು - ದೃಷ್ಟಿಹೀನರು ಮತ್ತು ಅಂಧರು - ಸಮರ್ಪಕ ಶಿಕ್ಷಣವನ್ನು ಪಡೆಯುವ ಮತ್ತು ಅವರ ಸ್ವಾಯತ್ತತೆಯನ್ನು ಅಭಿವೃದ್ಧಿಪಡಿಸುವುದು ಅವರ ಗುರಿಯಾಗಿತ್ತು.
ಈ ಕೇಂದ್ರವು ಕನಿಷ್ಠ ಆರು ವರ್ಷ ವಯಸ್ಸಿನ ದೃಷ್ಟಿಹೀನ ಮಕ್ಕಳನ್ನು ಸ್ವಾಗತಿಸುತ್ತದೆ.
ಕೇಂದ್ರದಲ್ಲಿ ಎರಡು ಆಯ್ಕೆಗಳಿವೆ ಎಂದು ತಾಯಿ ನಾಡಿನ್ ರವರು ವಿವರಿಸಿದರು. "ಇನ್ನೂ ಶಾಲೆಗೆ ಹೋಗಿ ಅಧ್ಯಯನ ಮಾಡಬಹುದಾದವರಿಗೆ ಬ್ರೈಲ್ ಲಿಪಿಯನ್ನು ಕಲಿಸಲಾಗುತ್ತದೆ, ಆದರೆ ತುಂಬಾ ವಯಸ್ಸಾದ ಕಾರಣ ಶಾಲೆಗೆ ಹೋಗಲು ಸಾಧ್ಯವಾಗದವರು ಅವರಿಗೆ ಜೀವನೋಪಾಯಕ್ಕಾಗಿ ಸಹಕರಿಸುವ ಒಂದು ವೃತ್ತಿಯನ್ನು ಕಲಿಯುತ್ತಾರೆ.
ಈ ಮಕ್ಕಳು ಅಭಿವೃದ್ಧಿ ಹೊಂದುವುದನ್ನು ನೋಡುವುದೇ ನಮಗೆ ಸಮಾಧಾನಕರ ಸಂಗತಿ
ಸಂತೋಷ ಮತ್ತು ಭರವಸೆಗೆ ಈ ಕಾರಣಗಳಿದ್ದರೂ, SLC ಸಭೆಯ ಧಾರ್ಮಿಕ ಭಗಿನಿಯರು ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದಾರೆ. ತಮ್ಮ ಸುತ್ತಲೂ ಏನನ್ನೂ ನೋಡಲು ಸಾಧ್ಯವಾಗದವರ ಜೊತೆಗೆ, ಹೆಚ್ಚಿನ ನಿವಾಸಿಗಳು ತಮ್ಮ ಭವಿಷ್ಯದ ಬಗ್ಗೆ ಆತಂಕದಲ್ಲಿದ್ದಾರೆ.
ನನ್ನ ಅಧ್ಯಯನದಲ್ಲಿ ಬಹಳ ದೂರ ಹೋಗಲು ಮತ್ತು ನನ್ನ ಅಂಗವೈಕಲ್ಯ ಹಾಗೂ ನನ್ನ ಸಾಮರ್ಥ್ಯಗಳಿಗೆ ಅನುಗುಣವಾಗಿ ಉದ್ಯೋಗವನ್ನು ಪಡೆಯಲು ಅವಕಾಶವನ್ನು ಕಂಡುಕೊಳ್ಳುವುದು ನನ್ನ ದೊಡ್ಡ ಸವಾಲಾಗಿದೆ ಎಂದು ಕೇಂದ್ರದ ನಿವಾಸಿ ಜೀನ್ ರವರು ಹೇಳಿದರು.
ಅವರ ವೃತ್ತಿಪರ ಸೇರ್ಪಡೆಯೇ ಅವರಿಗೆ ಮುಖ್ಯ ಸಮಸ್ಯೆಯಾಗಿದೆ. ಈ ದೇಶದಲ್ಲಿ ಅವರಿಗೆ ಕೆಲಸ ಹುಡುಕುವುದು ಸುಲಭವಲ್ಲ ಎಂದು ಸಭೆಯ ಮುಖ್ಯಾಧಿಕಾರಿ ತಾಯಿ ಅಡ್ಜಗ್ಬಾರವರು ವಿವರಿಸಿದರು.
ಆದರೂ ಈ ಮಕ್ಕಳು ಉಜ್ವಲ ಭವಿಷ್ಯದ ದೃಷ್ಟಿಯಿಂದ ಬೆಳೆದು ಅಭಿವೃದ್ಧಿ ಹೊಂದುವುದನ್ನು ನೋಡುವುದು ನಮಗೆ ಅತ್ಯಂತ ಸಂತೋಷ ಮತ್ತು ಸಮಾಧಾನವನ್ನು ತರುತ್ತಿದೆ ಎಂದು ಸಿಸ್ಟರ್ ಟೋಗ್ನಿಜಿನ್ರವರು ನಿರ್ಧಸಿದರು.