MAP

Shooting at Annunciation Church, which is also home to a an elementary school, in Minneapolis Shooting at Annunciation Church, which is also home to a an elementary school, in Minneapolis  (Tim Evans)

ಮಿನ್ನಿಯಾಪೋಲಿಸ್ ದುರಂತದ ನಂತರ ಅಮೆರಿಕದ ಧರ್ಮಸಭೆಯು ಶೋಕದಲ್ಲಿದೆ

ಬುಧವಾರ ಮಿನ್ನಿಯಾಪೋಲಿಸ್‌ನಲ್ಲಿ ನಡೆದ ಮಂಗಳವಾರ್ತೆಯ ಕಥೋಲಿಕ ಶಾಲೆಯಲ್ಲಿನ ದಿವ್ಯಬಲಿಪೂಜೆಯ ಸಮಯದಲ್ಲಿ ಯುವಕನೊಬ್ಬ ಗುಂಡು ಹಾರಿಸಿದ ದುರಂತದ ನಂತರ ಅಮೇರಿಕದ ಧರ್ಮಸಭೆ ತನ್ನ ದುಃಖ ಮತ್ತು ಸಂತಾಪವನ್ನು ವ್ಯಕ್ತಪಡಿಸುತ್ತದೆ. ಈ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದರು ಮತ್ತು ಸುಮಾರು ಹದಿನೇಳು ಜನರು ಗಾಯಗೊಂಡರು, ನಂತರ ಗುಂಡು ಹಾರಿಸಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡರು.

ವ್ಯಾಟಿಕನ್ ಸುದ್ದಿ

ಅಮೇರಿಕದ ಧರ್ಮಸಭೆಯ ಮಿನ್ನೇಸೋಟದ ಮಿನ್ನಿಯಾಪೋಲಿಸ್‌ನಲ್ಲಿ ಬುಧವಾರ ಮಂಗಳವಾರ್ತೆಯ ಕಥೋಲಿಕ ಶಾಲೆಯಲ್ಲಿ ತರಗತಿಗಳು ಪ್ರಾರಂಭವಾಗುವ ಮೊದಲು ದಿವ್ಯಬಲಿಪೂಜೆಯ ಸಮಯದಲ್ಲಿ ಯುವಕನೊಬ್ಬ ಗುಂಡು ಹಾರಿಸಿದ ಘಟನೆ ನಡೆದಿದ್ದು, ಸಮುದಾಯಕ್ಕೆ ಸಂತಾಪ, ಒಗ್ಗಟ್ಟು ಮತ್ತು ಪ್ರಾರ್ಥನೆಯ ಸಂದೇಶಗಳು ಹರಿದು ಬಂದಿವೆ. ಆರಂಭಿಕ ವರದಿಗಳ ಪ್ರಕಾರ, ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದರು ಮತ್ತು ಹದಿನೇಳು ಜನರು ಗಾಯಗೊಂಡರು, ಆದರೆ ಗುಂಡು ಹಾರಿಸಿದ ವ್ಯಕ್ತಿ ತನ್ನ ಪ್ರಾಣವನ್ನೇ ತೆಗೆದುಕೊಂಡನು.

ಕಾರ್ಡಿನಲ್ ಡಿ ಮೆಂಡೋನ್ಸಾರವರು ಹೃತ್ಪೂರ್ವಕ ಸಂತಾಪವನ್ನು ನೀಡುತ್ತಾರೆ
ಭಯಾನಕ ಸುದ್ದಿಯನ್ನು ಕೇಳಿದ ನಂತರ, ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ಡಿಕಾಸ್ಟ್ರಿಯ ಪ್ರಿಫೆಕ್ಟ್ ಕಾರ್ಡಿನಲ್ ಜೋಸ್ ಟೊಲೆಂಟಿನೊ ಡಿ ಮೆಂಡೋನ್ಸಾರವರು, ಮಿನ್ನಿಯಾಪೋಲಿಸ್ ಮಹಾಧರ್ಮಾಧ್ಯಕ್ಷರಾದ ಬರ್ನಾರ್ಡ್ ಹೆಬ್ಡಾರವರಿಗೆ ಟೆಲಿಗ್ರಾಮ್ ಕಳುಹಿಸಿದರು. ಪವಿತ್ರ ದಿವ್ಯಬಲಿಪೂಜೆಯ ಸಮಯದಲ್ಲಿ ಇಬ್ಬರು ಮಕ್ಕಳ ಮರಣಕ್ಕೆ ತಮ್ಮ "ಹೃತ್ಪೂರ್ವಕ ಸಂತಾಪ" ವ್ಯಕ್ತಪಡಿಸಿದರು. ಸಂದೇಶವು ಸಮುದಾಯಕ್ಕೆ ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗಾಗಿ ತೀವ್ರವಾದ ಪ್ರಾರ್ಥನೆಗಳು ಮತ್ತು ಸಂಬಂಧಿತ ಇಡೀ ಸಮುದಾಯಕ್ಕೆ ಆಧ್ಯಾತ್ಮಿಕ ನಿಕಟತೆಯ ಭರವಸೆ ನೀಡಿತು. ನಿರಾಯುಧ ಮತ್ತು ನಿಶ್ಯಸ್ತ್ರೀಕರಣ ಎರಡನ್ನೂ ಒಳಗೊಂಡ ಶಾಂತಿಯ ಮೇಲೆ ಸ್ಥಾಪಿತವಾದ ಭ್ರಾತೃತ್ವದ ಸಂಸ್ಕೃತಿಯನ್ನು ನಿರ್ಮಿಸುವುದನ್ನು ಮುಂದುವರಿಸಲು ಇಂದಿನ ಸವಾಲುಗಳ ಮುಖಾಂತರ ಕಥೋಲಿಕ ಶಿಕ್ಷಣವು ತನ್ನ ಪ್ರಯತ್ನಗಳನ್ನು ನವೀಕರಿಸುವ ಅಗತ್ಯವನ್ನು ಈ ಹೃದಯವಿದ್ರಾವಕ ಘಟನೆ ಹೇಗೆ ತೋರಿಸುತ್ತದೆ ಎಂಬುದನ್ನು ಕಾರ್ಡಿನಲ್ ಡಿ ಮೆಂಡೋನ್ಸಾರವರು ಗಮನಿಸಿದರು.

ದುಃಖಿತರಿಗೆ ಸಾಂತ್ವನ ನೀಡಲಿ ಎಂದು ಕಾರ್ಡಿನಲ್ ಟೋಬಿನ್ ಪ್ರಾರ್ಥಿಸುತ್ತಾರೆ
ನ್ಯೂವಾರ್ಕ್‌ನ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ಜೋಸೆಫ್ ಟೋಬಿನ್ ರವರು, ಮಂಗಳವಾರ್ತೆಯ ಕಥೋಲಿಕ ಶಾಲೆಯಲ್ಲಿ ನಡೆದ ದುರಂತ ಗುಂಡಿನ ದಾಳಿಯಿಂದ ಬಾಧಿತರಾದ ಎಲ್ಲರಿಗಾಗಿ ತಮ್ಮೊಂದಿಗೆ ಪ್ರಾರ್ಥನೆಯಲ್ಲಿ ಸೇರಲು ಭಕ್ತವಿಶ್ವಾಸಿಗಳನ್ನು ಒತ್ತಾಯಿಸಿದರು. "ಹೊಸ ಶೈಕ್ಷಣಿಕ ವರ್ಷಕ್ಕೆ ಸಂತೋಷದಾಯಕ ಆರಂಭವಾಗಿರಬೇಕಾಗಿದ್ದನ್ನು ಅರ್ಥಹೀನ ಹಿಂಸಾಚಾರವು ಹೇಗೆ ಛಿದ್ರಗೊಳಿಸಿತು ಎಂದು ಗಮನಿಸಿದರು. ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಅವರು, "ನಾವು ಮಂಗಳವಾರ್ತೆಯ ಕಥೋಲಿಕ ಶಾಲೆಯ ಮಕ್ಕಳು, ಕುಟುಂಬಗಳು, ಶಿಕ್ಷಕರು ಮತ್ತು ಧರ್ಮಕೇಂದ್ರದ ಸಮುದಾಯವನ್ನು ಪ್ರಾರ್ಥನೆಯಲ್ಲಿ ನಿಕಟವಾಗಿರಿಸುತ್ತೇವೆ ಮತ್ತು ಯಾವುದೇ ಮಗು ಕಲಿಕೆ ಮತ್ತು ಆರಾಧನೆಯ ಸ್ಥಳದಲ್ಲಿ ಎಂದಿಗೂ ಭಯವನ್ನು ಎದುರಿಸಬಾರದು ಮತ್ತು ಯಾವುದೇ ಪೋಷಕರು ಹಿಂಸಾಚಾರದಲ್ಲಿ ಮಗುವಿನ ನಷ್ಟವನ್ನು ಸಹಿಸಬಾರದು ಎಂದು ಹೇಳಿದರು. ಕೊನೆಯಲ್ಲಿ, "ನಮ್ಮ ರಕ್ಷಕರಾದ ಕ್ರಿಸ್ತನು ದುಃಖಿತರಿಗೆ ಸಾಂತ್ವನ ಮತ್ತು ದುಃಖಿಸುವ ಎಲ್ಲರಿಗೂ ಶಾಂತಿಯನ್ನು ನೀಡಲಿ" ಎಂದು ನಾವು ಪ್ರಾರ್ಥಿಸುತ್ತೇವೆ.

ಸಂತ್ರಸ್ತರುಗಳೊಂದಿಗೆ ಕಾರ್ಡಿನಲ್ ಡೋಲನ್ ರವರ ಐಕ್ಯತೆ
ನ್ಯೂಯಾರ್ಕ್‌ನ ಮಹಾಧರ್ಮಾಧ್ಯಕ್ಷರಾದ ಕಾರ್ಡಿನಲ್ ತಿಮೋತಿ ಡೋಲನ್ ರವರು ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ದಾಳಿಯ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಮತ್ತೊಮ್ಮೆ, ಮತ್ತೊಂದು ಅರ್ಥಹೀನ ಗುಂಡಿನ ದಾಳಿಯ ಸುದ್ದಿಯಿಂದ ನಾವು ಆಘಾತಕ್ಕೊಳಗಾಗಿದ್ದೇವೆ ಮತ್ತು ಗಾಬರಿಗೊಂಡಿದ್ದೇವೆ, ಈ ಬಾರಿ ಅದು ಕಥೋಲಿಕ ದೇವಾಲಯ ಮತ್ತು ಶಾಲೆಯಲ್ಲಿ ನಡೆದಿರುವುದರಿಂದ ಅದು ಹೆಚ್ಚು ಗೊಂದಲಮಯವಾಗಿದೆ, ಕಥೋಲಿಕ ದೇವಾಲಯ ಮತ್ತು ಶಾಲೆಯು ಯಾವಾಗಲೂ ಶಾಂತಿಯ ತಾಣವಾಗಿರಬೇಕು. ಈ ಭೀಕರ ದುರಂತದಿಂದ ಮೊಟಕುಗೊಂಡ ಇಬ್ಬರು ಮುಗ್ಧ ಮಕ್ಕಳಿಗಾಗಿ ನಾವು ಶೋಕಿಸುತ್ತೇವೆ ಮತ್ತು ಹದಿನೇಳು ಮಂದಿ ಗಾಯಗೊಂಡವರನ್ನು ನಮ್ಮ ಪ್ರಾರ್ಥನೆಯ ಉದ್ದೇಶಗಳಲ್ಲಿ ಇಟ್ಟುಕೊಂಡಿದ್ದೇವೆ.

ಮಿನ್ನಿಯಾಪೋಲಿಸ್ ನಗರ, ಮಂಗಳವಾರ್ತೆಯ ಕಥೋಲಿಕ ಶಾಲೆ ಮತ್ತು ಅದರಾಚೆಗಿನ ಅಸಂಖ್ಯಾತ ಕುಟುಂಬಗಳೊಂದಿಗೆ ನಾವು ಸಹಾನುಭೂತಿಯ ಒಗ್ಗಟ್ಟಿನಲ್ಲಿ ಸೇರುತ್ತೇವೆ, ಅವರು ಸಾಮಾನ್ಯವಾಗಿರುವ ಮನಮುಟ್ಟುವ ಬಂದೂಕು ಹಿಂಸಾಚಾರದಿಂದ ಉಂಟಾದ ಊಹಿಸಲಾಗದ ದುಃಖದಿಂದ ಸ್ಪರ್ಶಿಸಲ್ಪಟ್ಟಿದ್ದಾರೆ. ನಮ್ಮ ಹೃದಯಗಳಲ್ಲಿ, ನಮ್ಮ ಸಮುದಾಯಗಳಲ್ಲಿ ಮತ್ತು ನಮ್ಮ ಪ್ರಪಂಚದಲ್ಲಿನ ಎಲ್ಲಾ ಹಿಂಸಾಚಾರವನ್ನು ಕೊನೆಗೊಳಿಸಲು ನಾವು ಪ್ರಾರ್ಥಿಸುತ್ತೇವೆ ಎಂದು ಅವರು ಹೇಳಿದರು.
 

28 ಆಗಸ್ಟ್ 2025, 19:16