MAP

Displaced Palestinians flee amid an Israeli military operation, in Gaza City Displaced Palestinians flee amid an Israeli military operation, in Gaza City 

ಅಂತರಾಷ್ಟ್ರೀಯ ಕಾರಿತಾಸ್: ಶಾಂತಿ ಮತ್ತು ಮಾನವ ಹಕ್ಕುಗಳ ಗೌರವ ಪರಸ್ಪರ ಪೂರಕವಾಗಿದೆ

ಅಂತರಾಷ್ಟ್ರೀಯ ಕಾರಿತಾಸ್ನ ಸಮಗ್ರ ಮಾನವ ಅಭಿವೃದ್ಧಿ ನಿರ್ದೇಶಕರು, ಸಂಘಟನೆಯ ಹೇಳಿಕೆಯು ಹಿಂಸಾಚಾರವನ್ನು ಕೊನೆಗೊಳಿಸಲು ಮತ್ತು ಪ್ರದೇಶ ಹಾಗೂ ಪ್ವಿಶ್ವದಾದ್ಯಂತ ಮಾನವ ಹಕ್ಕುಗಳ ರಕ್ಷಣೆಯನ್ನು ಉತ್ತೇಜಿಸಲು ಬಲವಾದ ಪದಗಳನ್ನು ಬಳಸಿದೆ ಎಂದು ವಿವರಿಸುತ್ತಾರೆ.

ಕೀಲ್ಸ್ ಗುಸ್ಸಿ

ಆಗಸ್ಟ್ 25 ರಂದು, ಅಂತರಾಷ್ಟ್ರೀಯ ಕಾರಿತಾಸ್ನ "ಗಾಜಾ ನಗರದ ಮೇಲಿನ ಮಾನವ ನಿರ್ಮಿತ ಕ್ಷಾಮ ಮತ್ತು ದಾಳಿಗೆ ಪ್ರತಿಕ್ರಿಯಿಸುತ್ತಾ ಕಠಿಣ ಪದಗಳ ಹೇಳಿಕೆಯನ್ನು ನೀಡಿತು.

ಅಂತರಾಷ್ಟ್ರೀಯ ಕಾರಿತಾಸ್ನ ಸಮಗ್ರ ಮಾನವ ಅಭಿವೃದ್ಧಿ ನಿರ್ದೇಶಕ ವಿಕ್ಟರ್ ಜೆನಿನಾ, ವ್ಯಾಟಿಕನ್ ಧ್ಧಿಯು ಕ್ಸೇವಿಯರ್ ಸಾರ್ತ್ರೆರವರೊಂದಿಗಿನ ಸಂದರ್ಶನದಲ್ಲಿ, ಸಂಸ್ಥೆಯು ಬಳಸಿದ ಕಠಿಣ ಪದಗಳನ್ನು ವಿವರಿಸುತ್ತಾರೆ ಮತ್ತು ಲಕ್ಷಾಂತರ ಜನರನ್ನು ಬಾಧಿಸುತ್ತಿರುವ ಕ್ಷಾಮವನ್ನು ಖಂಡಿಸುತ್ತಾರೆ.

ನಾಗರಿಕರು ಹೊರೆಯನ್ನು ಹೊರುತ್ತಿದ್ದಾರೆ
ಆಗಸ್ಟ್ 20ರಂದು ಗಾಜಾ ನಗರದ ಮೇಲೆ ಸತತ ದಾಳಿಗಳ ನಂತರ, ಇಸ್ರಯೇಲ್‌ ಪಡೆಗಳು ನಗರಕ್ಕೆ ನುಗ್ಗಿದವು ಮತ್ತು ಎರಡು ದಿನಗಳ ನಂತರ ವಿಶ್ವಸಂಸ್ಥೆಯು ಅಧಿಕೃತವಾಗಿ ಆ ಪ್ರದೇಶದಲ್ಲಿ ಕ್ಷಾಮವನ್ನು ಘೋಷಿಸಿತು. ನಾಗರಿಕರ ಈ ಹದಗೆಡುತ್ತಿರುವ ಪರಿಸ್ಥಿತಿಗಳಿಗೆ ಸ್ಪಂದಿಸಲು ಕಾರಿತಾಸ್ ಹೇಳಿಕೆ ಬಯಸಿದೆ ಎಂದು ಜೆನಿನಾರವರು ಹೇಳುತ್ತಾರೆ.

250ಕ್ಕೂ ಹೆಚ್ಚು ಮಕ್ಕಳು ಹಸಿವಿನಿಂದ ಸಾವನ್ನಪ್ಪಿದ್ದಾರೆ ಎಂದು ಅವರು ಎತ್ತಿ ತೋರಿಸುತ್ತಾರೆ, ಅದಕ್ಕಾಗಿಯೇ ಕಾರಿತಾಸ್ "ಇದು ಕೊನೆಗೊಳ್ಳಬೇಕೆಂದು ಬಯಸುತ್ತದೆ. ಮತ್ತು ನಾಗರಿಕರು ಹಾಗೂ ಆರೋಗ್ಯ ಸಿಬ್ಬಂದಿಗಳ ಮೇಲಿನ ಉದ್ದೇಶಪೂರ್ವಕ ದಾಳಿಯನ್ನು ಕೊನೆಗೊಳಿಸಲು ನಾವು ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಕರೆಯುತ್ತೇವೆ.

ಎಲ್ಲರೂ ಹಂಚಿಕೊಳ್ಳುವ ಒಂದು ಗುರಿ: ಶಾಶ್ವತ ಶಾಂತಿ
ಜೆನಿನಾ ಕಾರಿತಾಸ್‌ನ ಮುಖ್ಯ ಗುರಿಯನ್ನು ಇತರರು ಹಂಚಿಕೊಳ್ಳುವ ಒಂದು ಗುರಿ ಎಂದು ಒತ್ತಿ ಹೇಳುತ್ತಾರೆ: ಶಾಶ್ವತ ಶಾಂತಿ. ಇನ್ನೂ ಮುಂದೆ ಹೋಗಿ, ಸಮುದಾಯಗಳ ನಡುವಿನ ದ್ವೇಷ ಮತ್ತು ಹಿಂಸೆಯ ಚಕ್ರವನ್ನು ಮುರಿಯುವುದನ್ನು ಸಂಸ್ಥೆ ನೋಡಲು ಬಯಸುತ್ತದೆ ಎಂದು ಅವರು ಹಂಚಿಕೊಳ್ಳುತ್ತಾರೆ.

ಅದಕ್ಕಾಗಿಯೇ ನಾವು ಎಲ್ಲಾ ನಾಗರಿಕರ ಗೌರವವನ್ನು ಬಯಸುತ್ತೇವೆ ಮತ್ತು ಎಲ್ಲಾ ಇಸ್ರೇಲಿ ಒತ್ತೆಯಾಳುಗಳ ಬಿಡುಗಡೆಗೆ ಹಾಗೂ ನಿರಂಕುಶವಾಗಿ ಬಂಧಿಸಲ್ಪಟ್ಟ ಎಲ್ಲಾ ಪ್ಯಾಲಸ್ತೀನಿಯರ ಬಿಡುಗಡೆಗೆ ನಾವು ಏಕೆ ಒತ್ತಾಯಿಸಿದ್ದೇವೆ ಎಂದು ಅವರು ವಿವರಿಸುತ್ತಾರೆ.

ಗಾಜಾ ಗಡಿಯಲ್ಲಿ ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರು ಬರಗಾಲವನ್ನು ಎದುರಿಸುತ್ತಿದ್ದಾರೆ ಮತ್ತು ಸಾವಿರಾರು ಜನರು ಇತರ ಸರಬರಾಜು ಮತ್ತು ವೈದ್ಯಕೀಯ ಆರೈಕೆಯ ತೀವ್ರ ಅಗತ್ಯವನ್ನು ಹೊಂದಿದ್ದಾರೆ. ಪರಿಣಾಮವಾಗಿ, ಅನಾರೋಗ್ಯ ಪೀಡಿತರು ಮತ್ತು ಗಾಯಗೊಂಡವರಿಗೆ ಚಿಕಿತ್ಸೆ ನೀಡಲು ಮತ್ತು ಹಸಿವಿನಿಂದ ಬಳಲುತ್ತಿರುವವರಿಗೆ ಆಹಾರವನ್ನು ಒದಗಿಸಲು ವಿಶ್ವಸಂಸ್ಥೆ ಮತ್ತು ಇತರ ಸಂಸ್ಥೆಗಳಿಂದ ಮಾನವೀಯ ನೆರವು ಪಡೆಯುವ ಬೇಡಿಕೆಯನ್ನು ಕಾರಿತಾಸ್ ಹೇಳಿಕೆಯು ಬಲವಾಗಿ ವ್ಯಕ್ತಪಡಿಸುತ್ತದೆ ಎಂದು ಜೆನಿನಾರವರು ಹೇಳುತ್ತಾರೆ.

ಶಾಂತಿ ಆದರೆ ನ್ಯಾಯಯುತ
ಅಂತರಾಷ್ಟ್ರೀಯ ಕಾರಿತಾಸ್ ಹೇಳಿಕೆಯನ್ನು ಸ್ಪಷ್ಟಪಡಿಸುತ್ತಾ, ನಿರ್ದೇಶಕರು ತಕ್ಷಣದ ಮತ್ತು ಶಾಶ್ವತ ಕದನ ವಿರಾಮಕ್ಕಾಗಿ ಸಂಘಟನೆಯ ಬೇಡಿಕೆಯನ್ನು ಎತ್ತಿ ತೋರಿಸುತ್ತಾರೆ ಹಾಗೆಯೇ ಕಳೆದ ವರ್ಷ ಜುಲೈನಲ್ಲಿ ಕಾನೂನುಬಾಹಿರ ಆಕ್ರಮಣವನ್ನು ಕೊನೆಗೊಳಿಸಲು ಕರೆ ನೀಡುವ ಅಂತರರಾಷ್ಟ್ರೀಯ ನ್ಯಾಯಾಲಯದ ಸಲಹಾ ಅಭಿಪ್ರಾಯದ ಸಂಪೂರ್ಣ ಗೌರವವನ್ನು ಎತ್ತಿ ತೋರಿಸುತ್ತಾರೆ.

ಅಂತರರಾಷ್ಟ್ರೀಯ ಕಾನೂನು ಮತ್ತು ಮಾನವ ಹಕ್ಕುಗಳ ರಕ್ಷಣೆಯ ಕಾರಿತಾಸ್‌ ಬಗ್ಗೆ ತುಂಬಾ ಕಾಳಜಿ ವಹಿಸುತ್ತದೆ ಎಂದು ಅವರು ಒತ್ತಿ ಹೇಳುತ್ತಾರೆ, ಮತ್ತು ಇದರ ಪರಿಣಾಮಗಳು "ಈ ಪ್ರದೇಶಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಮತ್ತು ಅಂತರರಾಷ್ಟ್ರೀಯ ಸಂಬಂಧಗಳ ಭವಿಷ್ಯಕ್ಕೂ ತರುತ್ತವೆ". "ನ್ಯಾಯದ ಅಂತರರಾಷ್ಟ್ರೀಯ ಚೌಕಟ್ಟುಗಳ ಸಂಪೂರ್ಣ ನಿರ್ಲಕ್ಷ್ಯವು ಹೆಚ್ಚಿನ ಹಿಂಸಾಚಾರಕ್ಕೆ ಕಾರಣವಾಗಬಹುದು ಮತ್ತು ಅದಕ್ಕಾಗಿಯೇ ನಾವು ಪರಿಸ್ಥಿತಿಯ ಬಗ್ಗೆ ತುಂಬಾ ಕಾಳಜಿ ವಹಿಸುತ್ತೇವೆ."
 

26 ಆಗಸ್ಟ್ 2025, 19:07