MAP

 Gaza catholic church Gaza catholic church  (© KIRCHE IN NOT)

ಧರ್ಮಗುರು ರೊಮೆನೆಲ್ಲಿ: ಗಾಜಾದ ಕ್ರೈಸ್ತರು ಬಳಲುತ್ತಿರುವವರೊಂದಿಗಿದ್ದಾರೆ

ಗಾಜಾದಲ್ಲಿ ಶಾಂತಿಗಾಗಿ ವಿಶ್ವಗುರು ಹದಿನಾಲ್ಕನೇ ಲಿಯೋರವರು ಮನವಿ ಮಾಡುತ್ತಿರುವಾಗ, ಗಾಜಾದಲ್ಲಿರುವ ಏಕೈಕ ಕಥೋಲಿಕ ಧರ್ಮಕೇಂದ್ರದ ಧರ್ಮಗುರು ಗೇಬ್ರಿಯಲ್ ರೊಮೆನೆಲ್ಲಿರವರು ವ್ಯಾಟಿಕನ್ ಸುದ್ಧಿಗೆ ಹೇಳುವಂತೆ, ಈ ಪ್ರದೇಶದಲ್ಲಿರುವ ಕ್ರೈಸ್ತರು ಅಗತ್ಯವಿರುವವರಿಗೆ ಸೇವೆ ಸಲ್ಲಿಸಲು ಬದ್ಧರಾಗಿದ್ದಾರೆ ಮತ್ತು ಯುದ್ಧದ ಅಂತ್ಯಕ್ಕಾಗಿ ಜನರು ಪ್ರಾರ್ಥಿಸುವಂತೆ ಕೇಳಿಕೊಳ್ಳುತ್ತಾರೆ.

ಫ್ರಾನ್ಸೆಸ್ಕಾ ಸಬಾಟಿನೆಲ್ಲಿ

ಗಾಜಾ ಗಡಿಯಲ್ಲಿರುವ ಪವಿತ್ರ ಕುಟುಂಬದ ಕಥೋಲಿಕ ದೇವಾಲಯದ ಧರ್ಮಕೇಂದ್ರದ ದರ್ಮಗುರು ಮತ್ತು ಇತರ ಧಾರ್ಮಿಕರು "ನೆರವಿನ ಅಗತ್ಯವಿರುವವರಿಗೆ, ವೃದ್ಧರು, ರೋಗಿಗಳಿಗೆ - ಸೇವೆ ಸಲ್ಲಿಸುವುದನ್ನು" ಮುಂದುವರಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

ವ್ಯಾಟಿಕನ್ ಸುದ್ಧಿಯ ಜೊತೆಯವರಿಗೆ ಮಾತನಾಡಿದ ಧರ್ಮಕೇಂದ್ರದ ದರ್ಮಗುರು ಗೇಬ್ರಿಯಲ್ ರೊಮೆನೆಲ್ಲಿರವರು, ನಾವು ಪ್ರಭುವಿನ ಕೈಯಲ್ಲಿದ್ದೇವೆ ಮತ್ತು ವಿಶ್ವದಾದ್ಯಂತದ ಅನೇಕ ಒಳ್ಳೆಯ ಜನರ ಸಹಾಯದಿಂದ ಇದು ನಿಲ್ಲುತ್ತದೆ ಎಂದು ನಾವು ನಂಬುತ್ತೇವೆ ಎಂದು ಹೇಳಿದರು.

ಗಾಜಾದಲ್ಲಿರುವ ಏಕೈಕ ಕಥೋಲಿಕ ಧರ್ಮಕೇಂದ್ರದಲ್ಲಿ ಒಟ್ಟುಗೂಡಿದ ಎಲ್ಲರೂ "ಪ್ರಭುಯೇಸು ಕ್ರಿಸ್ತರಿಗಾಗಿ, ಆತನ ಸೇವೆ ಮಾಡಲು ಇಲ್ಲಿದ್ದಾರೆ ಮತ್ತು ನಾವು ಬಡವರು ಮತ್ತು ರೋಗಿಗಳ, ಬಳಲುತ್ತಿರುವವರ ವ್ಯಕ್ತಿತ್ವದಲ್ಲಿ ಆತನನ್ನು ಸೇವಿಸುತ್ತೇವೆ ಎಂದು ಅರ್ಜೆಂಟೀನಾದಲ್ಲಿ ಜನಿಸಿದ ಧರ್ಮಗುರು ಹೇಳಿದರು.

ಧರ್ಮಗುರು ರೊಮೆನೆಲ್ಲಿರವರು ಮತ್ತು ಅವರೊಂದಿಗೆ ಆ ಆವರಣದಲ್ಲಿದ್ದ ಧಾರ್ಮಿಕ ಪುರುಷರು ಮತ್ತು ಮಹಿಳೆಯರು ನೆರವಿನ ಅಗತ್ಯವಿರುವವರ ಪರವಾಗಿ ಉಳಿಯಲು ಮತ್ತು ಎಲ್ಲರಿಗೂ ಸೇವೆ ಸಲ್ಲಿಸಲು ಆಯ್ಕೆ ಮಾಡಿಕೊಂಡಿದ್ದಾರೆ, ಏಕೆಂದರೆ ಪ್ರಭು ದೇವರು ನಮ್ಮೆಲ್ಲರಿಂದ ಕೇಳಿಕೊಂಡದ್ದು ಅದನ್ನೇ ಎಂದು ಅವರು ಹೇಳಿದರು.

ಶಾಂತಿಗಾಗಿ ಪ್ರಾರ್ಥಿಸಿ, ಯುದ್ಧವನ್ನು ನಿಲ್ಲಿಸಿ
ಜೆರುಸಲೇಮ್‌ನ ಲತೀನ್ ಪಿತಾಮಹ ಕಾರ್ಡಿನಲ್ ಪಿಯರ್‌ಬಟಿಸ್ಟಾ ಪಿಜ್ಜಾಬಲ್ಲಾರವರು ಮತ್ತು ಜೆರುಸಲೇಮ್‌ನ ಗ್ರೀಕ್ ಆರ್ಥೊಡಾಕ್ಸ್ ಪಿತಾಮಹ ಮೂರನೇ ಥಿಯೋಫಿಲೋಸ್ ರವರು ಮಂಗಳವಾರ ನೀಡಿದ ಮನವಿಗೆ ಧರ್ಮಕೇಂದ್ರದ ಧರ್ಮಗುರು ಮತ್ತು ಇತರ ಧಾರ್ಮಿಕರು ಕೈಜೋಡಿಸುತ್ತಾರೆ.

ಧರ್ಮಗುರು ರೊಮೆನೆಲ್ಲಿರವರು ಮತ್ತು ಗಾಜಾ ಧರ್ಮಕೇಂದ್ರದಲ್ಲಿರುವ ಎಲ್ಲರೂ ಶಾಂತಿಗಾಗಿ, ಅದರಿಂದ ವಂಚಿತರಾದ ಎಲ್ಲರ ಸ್ವಾತಂತ್ರ್ಯಕ್ಕಾಗಿ, ಒತ್ತೆಯಾಳುಗಳಿಗಾಗಿ, ಇಡೀ ಗಾಜಾ ಗಡಿಯಲ್ಲಿ ಎಲ್ಲಿಯೂ ಸಿಗದ ಸಾವಿರಾರು ಮತ್ತು ಸಾವಿರಾರು ಅನಾರೋಗ್ಯ ಹಾಗೂ ಗಾಯಗೊಂಡ ಜನರಿಗೆ ಅವರಿಗೆ ಅಗತ್ಯವಿರುವ ಆರೈಕೆ ದೊರೆಯುವ ಸಾಧ್ಯತೆಗಾಗಿ ಪ್ರಾರ್ಥಿಸುತ್ತಲೇ ಇರುತ್ತಾರೆ ಎಂದು ಹೇಳಿದರು.

ವಿನಾಶ, ಸಾವುಗಳು ಮತ್ತು ಗಾಯಗಳು
ಇತ್ತೀಚಿನ ವಾರಗಳಲ್ಲಿ ಗಾಜಾ ನಗರದ ಪರಿಸ್ಥಿತಿ ವಿಶೇಷವಾಗಿ ಗಂಭೀರವಾಗಿದೆ, ನಗರದ ವಿವಿಧ ಭಾಗಗಳಲ್ಲಿ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಬಾಂಬ್ ದಾಳಿಗಳು ಹೆಚ್ಚಿವೆ.

ಈ ಕಾರ್ಯಾಚರಣೆಗಳು ಹೆಚ್ಚಿನ ಸಾವುಗಳು, ಹೆಚ್ಚಿನ ವಿನಾಶ, ಹೆಚ್ಚಿನ ಗಾಯಗಳನ್ನು ತಂದಿವೆ ಎಂದು ಧರ್ಮಗುರು ರೊಮೆನೆಲ್ಲಿರವರು ಹೇಳಿದರು.

"ಭವಿಷ್ಯವನ್ನು ನೋಡುವಾಗ, ಎಲ್ಲರಿಗೂ ಹೆಚ್ಚು ಅನಿಶ್ಚಿತತೆಯನ್ನು ಸೃಷ್ಟಿಸುವ ಸಾಮಾನ್ಯ ಪರಿಸ್ಥಿತಿಯಿದು, ಯುದ್ಧ ಮುಂದುವರಿಯುತ್ತದೆ ಮತ್ತು ಮುಂದಿನ ಹಂತವು ಗಾಜಾ ನಗರದ ವಿರುದ್ಧ ನೇರವಾಗಿ ಯುದ್ಧವಾಗಬಹುದು ಎಂದು ಅವರು ಹೇಳಿದರು.

ಧರ್ಮಗುರು ರೊಮೆನೆಲ್ಲಿರವರು ಎಲ್ಲರೂ ಶಾಂತಿಗಾಗಿ ಪ್ರಾರ್ಥಿಸಲು ಆಹ್ವಾನಿಸಿದರು ಮತ್ತು ಸಂಘರ್ಷವನ್ನು ಕೊನೆಗೊಳಿಸಲು ಕರೆ ನೀಡಿದರು.
 

27 ಆಗಸ್ಟ್ 2025, 18:32