MAP

PMML party volunteers prepare clothing for flood victims in Pakistan PMML party volunteers prepare clothing for flood victims in Pakistan  (ANSA)

ಪ್ರವಾಹದಿಂದ ಬಳಲುತ್ತಿರುವ ಸಾವಿರಾರು ಜನರಿಗೆ ಪಾಕಿಸ್ತಾನ ಕಾರಿತಾಸ್‌ ನೆರವು ನೀಡಿದೆ

ಪಾಕಿಸ್ತಾನ ಕಾರಿತಾಸ್‌ ನೆರವು ಕಾರ್ಯನಿರ್ವಾಹಕ ನಿರ್ದೇಶಕಿ ವರದಿ ಮಾಡಿರುವ ಪ್ರಕಾರ, ಪ್ರವಾಹ ಪೀಡಿತ 2,500 ಕುಟುಂಬಗಳು, ಸುಮಾರು 17,500 ಜನರು, ಆಹಾರ ಪ್ಯಾಕೇಜ್‌ಗಳು, ನೈರ್ಮಲ್ಯ ಕಿಟ್‌ಗಳು ಮತ್ತು ಕುಡಿಯುವ ನೀರಿನ ರೂಪದಲ್ಲಿ ಸಹಾಯ ಪಡೆಯುವ ನಿರೀಕ್ಷೆಯಿದೆ.

ಕೀಲ್ಸ್ ಗುಸ್ಸಿ

ಆಗಸ್ಟ್ 15-16 ರಂದು ಪಾಕಿಸ್ತಾನದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹದ ನಂತರ, ಪಾಕಿಸ್ತಾನದ ಕಾರಿತಾಸ್‌, ಅದರ ಪರಿಣಾಮಗಳಿಂದ ಬದುಕುತ್ತಿರುವವರಿಗೆ ಪರಿಹಾರ ಮತ್ತು ಆರೈಕೆಯನ್ನು ಒದಗಿಸಲು ಕೆಲಸ ಮಾಡುತ್ತಿದೆ.

ಧರ್ಮಸಭೆಯ ಪ್ರಾರ್ಥನೆ ಮತ್ತು ಕ್ರಿಯೆಯ ಮೂಲಕ ಪೀಡಿತ ಕುಟುಂಬಗಳೊಂದಿಗೆ ನಿಲ್ಲುತ್ತದೆ. ಪಾಕಿಸ್ತಾನ ಕಾರಿತಾಸ್‌ ನೆರವು ಕಾರ್ಯವು ಸಕ್ರಿಯವಾಗಿ ಪ್ರತಿಕ್ರಿಯಿಸುತ್ತಿದೆ ಮತ್ತು ನಮ್ಮ ಎಲ್ಲಾ ಭಕ್ತವಿಶ್ವಾಸಿಗಳು ಮತ್ತು ನಮ್ಮ ಸ್ಥಳೀಯ ಹಾಗೂ ಅಂತರರಾಷ್ಟ್ರೀಯ ಪಾಲುದಾರರ ನಿರಂತರ ಬೆಂಬಲವನ್ನು ನಾವು ಕೋರುತ್ತೇವೆ ಎಂದು ಕರಾಚಿಯ ಮಹಾಧರ್ಮಕ್ಷೇತ್ರದ ಮಹಾಧರ್ಮಾಧ್ಯಕ್ಷರು ಬೆನ್ನಿ ಮಾರಿಯೋ ಟ್ರಾವಾಸ್ ರವರು ಮತ್ತು ಪಾಕಿಸ್ತಾನದ ಕಾರಿತಾಸ್‌ ಅಧ್ಯಕ್ಷರು ವ್ಯಾಟಿಕನ್‌ನ ಫೈಡ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದರು.

ದಕ್ಷಿಣದ ಪ್ರಾಂತ್ಯವಾದ ಸಿಂಧ್‌ನಲ್ಲಿ ಹೊಸ ಪ್ರವಾಹ ಮತ್ತು ಭಾರೀ ಮಳೆಯ ಎಚ್ಚರಿಕೆಗಳನ್ನು ನೀಡಲಾಗಿರುವುದರಿಂದ ಕರಾಚಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಪ್ರವಾಹದ ಪರಿಣಾಮವಾಗಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ವರದಿಗಳು ಪ್ರದೇಶದಾದ್ಯಂತ ಮೂಲಸೌಕರ್ಯಗಳಿಗೆ ಹಾನಿಯನ್ನುಂಟುಮಾಡಿವೆ ಎಂದು ತೋರಿಸುತ್ತವೆ.

ಸಹಾಯವು ಪ್ರಗತಿಯಲ್ಲಿದೆ
ಹಾನಿಯ ವ್ಯಾಪ್ತಿಯನ್ನು ಗುರುತಿಸಿದ ಪಾಕಿಸ್ತಾನದ ಕಾರಿತಾಸ್‌ ಕಾರ್ಯನಿರ್ವಾಹಕ ನಿರ್ದೇಶಕ ಅಮ್ಜದ್ ಗುಲ್ಜಾರ್, ಪರಿಸ್ಥಿತಿಯನ್ನು ರಾಷ್ಟ್ರೀಯ ತುರ್ತುಸ್ಥಿತಿ ಎಂದು ಕರೆದರು. ಪ್ರವಾಹದಿಂದ ಪೀಡಿತ ವಿವಿಧ ಪ್ರದೇಶಗಳಲ್ಲಿ ತಕ್ಷಣದ ಸಹಾಯವನ್ನು ವಿತರಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ನಮ್ಮ ತಂಡಗಳು ಅಗತ್ಯಗಳನ್ನು ನಿರ್ಣಯಿಸಲು ಮತ್ತು ಆಹಾರ, ಆಶ್ರಯ, ವೈದ್ಯಕೀಯ ಆರೈಕೆಯನ್ನು ಒದಗಿಸಲು ಮತ್ತು ದಕ್ಷಿಣದಲ್ಲಿಯೂ ಸಹ ಪೀಡಿತ ಕುಟುಂಬಗಳ ಘನತೆಯನ್ನು ಪುನಃಸ್ಥಾಪಿಸಲು ಕಾರ್ಯಪ್ರವೃತ್ತವಾಗಿವೆ ಎಂದು ಗುಲ್ಜಾರ್ ರವರು ಹಂಚಿಕೊಂಡರು. ಪಾಕಿಸ್ತಾನದ ಕಾರಿತಾಸ್‌ ತಂಡವು ವಿನಾಶವನ್ನು ನಿರ್ಣಯಿಸುತ್ತಿದೆ ಮತ್ತು ಸಹಾಯ ಪ್ರಯತ್ನಗಳನ್ನು ಸಂಘಟಿಸುತ್ತಿದೆ. ಒಟ್ಟಾಗಿ ಕೆಲಸ ಮಾಡುವ ಸ್ವಯಂಸೇವಕರು ಮತ್ತು ಜಿಲ್ಲಾ ಅಧಿಕಾರಿಗಳು ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅವರ ಅಗತ್ಯಗಳನ್ನು ನಿರ್ಧರಿಸುತ್ತಿದ್ದಾರೆ.

ಕಾರ್ಯನಿರ್ವಾಹಕ ನಿರ್ದೇಶಕರು ವರದಿ ಮಾಡಿರುವ ಪ್ರಕಾರ, ಪ್ರವಾಹ ಪೀಡಿತ 2,500 ಕುಟುಂಬಗಳು - ಸುಮಾರು 17,500 ಜನರು - ಆಹಾರ ಪ್ಯಾಕೇಜ್‌ಗಳು, ನೈರ್ಮಲ್ಯ ಕಿಟ್‌ಗಳು ಮತ್ತು ಕುಡಿಯುವ ನೀರಿನ ರೂಪದಲ್ಲಿ ಸಹಾಯ ಪಡೆಯುವ ನಿರೀಕ್ಷೆಯಿದೆ.

ಪಾಕಿಸ್ತಾನದ ಕಾರಿತಾಸ್‌ ಸಾಮಾನ್ಯ ಪ್ರವಾಹ ಸಂಬಂಧಿತ ಕಾಯಿಲೆಗಳ ವಿರುದ್ಧ ಹೋರಾಡಲು ಸಹಾಯ ಮಾಡಲು 15 ಉಚಿತ ವೈದ್ಯಕೀಯ ಶಿಬಿರಗಳನ್ನು ಸ್ಥಾಪಿಸಿದೆ ಮತ್ತು ಮನೆಗಳನ್ನು ಕಳೆದುಕೊಂಡ ಜನರಿಗೆ ಆಶ್ರಯ ಕಿಟ್‌ಗಳನ್ನು ಒದಗಿಸಿದೆ.

ತಕ್ಷಣದ ನೆರವು ಅಗತ್ಯವಿದೆ
ಈಗ, ತೀವ್ರವಾಗಿ ಬಾಧಿತವಾದ ಪ್ರದೇಶಗಳು ಮೊದಲು ನೆರವು ಪಡೆಯುತ್ತಿವೆ. ಪಾಕಿಸ್ತಾನದ ಕಾರಿತಾಸ್‌ ಪ್ರತ್ಯೇಕ ಮತ್ತು ಪ್ರವೇಶಿಸಲಾಗದ ಸಮುದಾಯಗಳಿಗೆ ಆದ್ಯತೆ ನೀಡುವುದರ ಮೇಲೆ ಮೊದಲು ಗಮನಹರಿಸಿದೆ ಎಂದು ಗುಲ್ಜಾರ್ ರವರು ವಿವರಿಸಿದರು.

ಈ ಪ್ರದೇಶಗಳಲ್ಲಿ, ಜನರು ಮೂಲಭೂತ ವೈದ್ಯಕೀಯ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಅವರು ಚಲನೆಯ ಆರೋಗ್ಯ ಘಟಕಗಳನ್ನು ನೀಡುತ್ತಿದ್ದಾರೆ.

ಪಾಕಿಸ್ತಾನದಲ್ಲಿನ ಮಾನವೀಯ ಬಿಕ್ಕಟ್ಟಿಗೆ ಸ್ಪಂದಿಸಲು ನಾಗರಿಕ ಸಮಾಜ ಸಂಸ್ಥೆಗಳು, ದಾನಿಗಳು ಮತ್ತು ಪಾಲುದಾರರು ಒಟ್ಟಾಗಿ ಬರಬೇಕೆಂದು ಗುಲ್ಜಾರ್ ರವರು ಮನವಿ ಮಾಡಿದರು. "ಜೀವಗಳನ್ನು ಉಳಿಸಲು, ಕುಟುಂಬಗಳನ್ನು ರಕ್ಷಿಸಲು ಮತ್ತು ಬಾಧಿತರಿಗೆ ಘನತೆಯನ್ನು ಪುನಃಸ್ಥಾಪಿಸಲು ತಕ್ಷಣದ ಬೆಂಬಲದ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
 

25 ಆಗಸ್ಟ್ 2025, 18:26