MAP

Anti-migrant unrest following an attack on an elderly man by unknown assailants earlier in the week, in Torre Pacheco Anti-migrant unrest following an attack on an elderly man by unknown assailants earlier in the week, in Torre Pacheco 

ಸ್ಪೇನ್: ಮುರ್ಸಿಯಾದಲ್ಲಿ ವಲಸೆ ವಿರೋಧಿ ಹಿಂಸಾಚಾರವನ್ನುಧರ್ಮಾಧ್ಯಕ್ಷರು ಖಂಡಿಸಿದ್ದಾರೆ

ಉತ್ತರ ಆಫ್ರಿಕಾದ ಯುವಕರ ಮೇಲೆ ತೀವ್ರ ಬಲಪಂಥೀಯ ದಾಳಿಗಳಿಂದ ಗುರುತಿಸಲ್ಪಟ್ಟ ಸ್ಪೇನ್‌ನ ಟೊರೆ ಪ್ಯಾಚೆಕೊದಲ್ಲಿ ವಾರಾಂತ್ಯದ ವಲಸೆ-ವಿರೋಧಿ ಹಿಂಸಾಚಾರದ ನಂತರ, ಕಾರ್ಟಜೆನಾದ ಧರ್ಮಾಧ್ಯಕ್ಷರು ಅಶಾಂತಿಯನ್ನು ಖಂಡಿಸುತ್ತಾರೆ ಮತ್ತು ಹೆಚ್ಚುತ್ತಿರುವ ಉದ್ವಿಗ್ನತೆಗಳ ನಡುವೆಯೂ ಶಾಂತಿ, ಸಹಬಾಳ್ವೆ ಮತ್ತು ಕ್ರೈಸ್ತ ಸಾಕ್ಷಿಗಾಗಿ ಕರೆ ನೀಡುತ್ತಾರೆ.

ಗಿಯಾಡಾ ಅಕ್ವಿಲಿನೊ

ವಾರಾಂತ್ಯದಲ್ಲಿ ಸ್ಪೇನ್‌ನ ಆಗ್ನೇಯ ಮುರ್ಸಿಯಾ ಪ್ರದೇಶದ ಟೊರೆ ಪ್ಯಾಚೆಕೊ ಪಟ್ಟಣದಲ್ಲಿ ಅಶಾಂತಿಯ ಅಲೆ ಬೀಸಿತು, ಏಕೆಂದರೆ ಉತ್ತರ ಆಫ್ರಿಕಾ ಮೂಲದ ಯುವಕರನ್ನು ಗುರಿಯಾಗಿಸಿಕೊಂಡು ತೀವ್ರ ಬಲಪಂಥೀಯ ಗುಂಪುಗಳು ದಾಳಿಗಳನ್ನು ನಡೆಸಿದವು. ಕಾರ್ಟಜೆನಾದ ದರ್ಮಧ್ಯಕ್ಷರಾದ ಜೋಸ್ ಮ್ಯಾನುಯೆಲ್ ರವರು ಲೋರ್ಕಾ ಪ್ಲೇನ್ಸ್ ಶಾಂತಿಗಾಗಿ ಮನವಿ ಮಾಡಿದರು, ಸ್ಥಳೀಯ ಸಮುದಾಯವು ಅಹಿಂಸೆ ಮತ್ತು ಭ್ರಾತೃತ್ವಕ್ಕೆ ತಮ್ಮ ಸಾಕ್ಷಿಯಲ್ಲಿ ದೃಢವಾಗಿರಲು ಕರೆ ನೀಡಿದರು.

ಸಂವಾದ ಮತ್ತು ಏಕೀಕರಣಕ್ಕಾಗಿ ಕರೆಗಳು
ಟೊರೆ ಪ್ಯಾಚೆಕೊದ ಜನಸಂಖ್ಯೆಯ ಸುಮಾರು ಮೂರನೇ ಒಂದು ಭಾಗದಷ್ಟು ಜನರು ವಿದೇಶಿ ಮೂಲದವರು. ಅನೇಕರು ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ, ಇದು ಪ್ರದೇಶದ ಆರ್ಥಿಕತೆಗೆ ಅಗತ್ಯವಾದ ವಲಯವಾಗಿದೆ. ಈ ಸಾಮಾಜಿಕ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸ್ಥಳೀಯ ಅಧಿಕಾರಿಗಳು ಮತ್ತು ನಾಗರಿಕ ಸಮಾಜ ಗುಂಪುಗಳು ಸಂವಾದ ಮತ್ತು ಶಾಂತಿಯುತ ಸಹಬಾಳ್ವೆಗಾಗಿ ಮನವಿಗಳನ್ನು ನೀಡಿವೆ.

ಮೇಯರ್ ರೋಕಾರವರು ಶಾಂತತೆ ಮತ್ತು ಬಲವಾದ ಭದ್ರತಾ ಕ್ರಮಗಳಿಗಾಗಿ ತಮ್ಮ ಕರೆಯನ್ನು ಪುನರುಚ್ಚರಿಸಿದರು. ಏತನ್ಮಧ್ಯೆ, ಸ್ಪೇನ್‌ನ ಮಾಘ್ರೆಬಿ ಕಾರ್ಮಿಕರ ಸಂಘದ ಅಧ್ಯಕ್ಷೆ ಸಬಾ ಯಾಕುಬಿರವರು ಈ ದಾಳಿಗಳನ್ನು ಖಂಡಿಸಿದರು.

ಕಾರ್ಟಜೆನಾದ ದರ್ಮಧ್ಯಕ್ಷರಾದ ಜೋಸ್ ಮ್ಯಾನುಯೆಲ್ ರವರು ಲೋರ್ಕಾ ಪ್ಲೇನ್ಸ್ ಅವರು ಸಾರ್ವಜನಿಕ ಹೇಳಿಕೆಯ ಮೂಲಕ ಹೃತ್ಪೂರ್ವಕ ಮನವಿಯನ್ನು ನೀಡಿದರು, ಹಿಂಸೆ "ಪರಿಹಾರವಲ್ಲ" ಮತ್ತು ಅದು ಆಳವಾದ ಭಯ ಮತ್ತು ಅಶಾಂತಿಗೆ ಮಾತ್ರ ಕೊಡುಗೆ ನೀಡುತ್ತದೆ ಎಂದು ಒತ್ತಿ ಹೇಳಿದರು. ಟೊರೆ ಪ್ಯಾಚೆಕೊ ಜನರು ದೀರ್ಘಕಾಲದ ಒಗ್ಗಟ್ಟು ಮತ್ತು ಆತಿಥ್ಯದ ಮನೋಭಾವವನ್ನು, ವಿಶೇಷವಾಗಿ ಉದ್ಯೋಗ ಒದಗಿಸುವಲ್ಲಿ ಮತ್ತು ಏಕೀಕರಣವನ್ನು ಬೆಳೆಸುವಲ್ಲಿ ತೋರಿಸಿರುವುದನ್ನು ಅವರು ಶ್ಲಾಘಿಸಿದರು.

ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುವಲ್ಲಿ ಸ್ಥಳೀಯ ಧರ್ಮಕೃಂದ್ರವು ಮತ್ತು ಸಮುದಾಯವು ಮಾಡುತ್ತಿರುವ ನಿರಂತರ ಕೆಲಸಕ್ಕಾಗಿ ಧರ್ಮಾಧ್ಯಕ್ಷರು ಅವರನ್ನು ಶ್ಲಾಘಿಸಿದರು, ಎಲ್ಲಾ ನಿವಾಸಿಗಳು ಯಾವುದೇ ರೀತಿಯ ಉಗ್ರವಾದವನ್ನು ತಪ್ಪಿಸಬೇಕು. ಶಾಂತಿ, ಪ್ರೀತಿ ಮತ್ತು ಕ್ಷಮೆಯ ಸಾಕ್ಷಿಯನ್ನು ನೀಡುವ ಮೂಲಕ ತಮ್ಮ ಕ್ರೈಸ್ತ ದೈವಕರೆಯನ್ನು ಮುಂದುವರಿಸಬೇಕೆಂದು ಒತ್ತಾಯಿಸಿದರು.
 

14 ಜುಲೈ 2025, 19:09