MAP

Fr. Tadeusz Rozmus in his parish of St. Thomas of Vilanova in Castel Gandlofo Fr. Tadeusz Rozmus in his parish of St. Thomas of Vilanova in Castel Gandlofo 

ವಿಶ್ವಗುರು ಹದಿನಾಲ್ಕನೇ ಲಿಯೋರವರ ದಿವ್ಯಬಲಿಪೂಜೆಗೂ ಮುನ್ನವೇ ಕ್ಯಾಸ್ಟೆಲ್ ಗ್ಯಾಂಡೋಲ್ಫೊ ಧರ್ಮಕೇಂದ್ರವು ಸಂಭ್ರಮದಿಂದ ಕೂಡಿದೆ

ಭಾನುವಾರ ವಿಶ್ವಗುರು ಹದಿನಾಲ್ಕನೇ ಲಿಯೋರವರ ಭೇಟಿ ಮತ್ತು ಪವಿತ್ರ ದಿವ್ಯಬಲಿಪೂಜೆಯ ಆಚರಣೆಗೆ ಮುಂಚಿತವಾಗಿ, ಕ್ಯಾಸ್ಟೆಲ್ ಗ್ಯಾಂಡೋಲ್ಫೊದಲ್ಲಿರುವ ವಿಲ್ಲನೋವಾದ ಸಂತ ಥೋಮಸ್‌ರವರ ಧರ್ಮಕೇಂದ್ರ ಧರ್ಮಗುರು ತಮ್ಮ ಧರ್ಮಕೇಂದ್ರದ ಭಕ್ತಾಧಿಗಳ ಉತ್ಸಾಹ ಮತ್ತು ವಿಶ್ವಾಸವನ್ನು ಹಂಚಿಕೊಂಡರು.

ಸೆಬಾಸ್ಟಿಯನ್ ಸ್ಯಾನ್ಸನ್ ಫೆರಾರಿ - ಕ್ಯಾಸ್ಟೆಲ್ ಗ್ಯಾಂಡೋಲ್ಫೊ

ಕ್ಯಾಸ್ಟೆಲ್ ಗ್ಯಾಂಡೋಲ್ಫೊದ ಹೃದಯಭಾಗದಲ್ಲಿರುವ, ವಿಲ್ಲನೋವಾದ ಸಂತ ಥೋಮಸ್‌ರವರ ವಿಶ್ವಗುರುಗಳ ಧರ್ಮಕೇಂದ್ರವು ಇತ್ತೀಚಿನ ದಿನಗಳಲ್ಲಿ ಸಭೆಯ, ವಿಶ್ವಾಸ ಮತ್ತು ಸೇವೆಯ ಕೇಂದ್ರವಾಗಿದೆ. ಜುಲೈ 13ರ ಭಾನುವಾರದಂದು ಪವಿತ್ರ ದಿವ್ಯಬಲಿಪೂಜೆಯ ಅಧ್ಯಕ್ಷತೆ ವಹಿಸಲಿರುವ ವಿಶ್ವಗುರು ಹದಿನಾಲ್ಕನೇ ಲಿಯೋರವರನ್ನು ಸ್ವಾಗತಿಸಲು ಸಮುದಾಯವು ಕುತೂಹಲದಿಂದ ತಯಾರಿ ನಡೆಸುತ್ತಿದೆ.

ವ್ಯಾಟಿಕನ್ ಸುದ್ಧಿಯವರೊಂದಿಗೆ ಮಾತನಾಡಿದ ಸೇಲ್ಸಿಯನ್ ಧರ್ಮಕೇಂದ್ರ ಧರ್ಮಗುರು ಟಡಿಯುಸ್ಜ್ ರೋಜ್ಮಸ್ ರವರು, ಕ್ಯಾಸ್ಟೆಲ್ ಗ್ಯಾಂಡೋಲ್ಫೊದ ಭಕ್ತವಿಶ್ವಾಸಿ, ಧಾರ್ಮಿಕ ಸಮುದಾಯಗಳು ಮತ್ತು ಸ್ವಯಂಸೇವಕರು ಲಾಜಿಸ್ಟಿಕಲ್ ಮತ್ತು ಆಧ್ಯಾತ್ಮಿಕ ಸಿದ್ಧತೆಗಳಲ್ಲಿ ತಮ್ಮ ಪ್ರಯತ್ನಗಳನ್ನು ದ್ವಿಗುಣಗೊಳಿಸಿದ್ದಾರೆ ಎಂದು ಹೇಳಿದರು.

"ವಿಶ್ವಗುರುಗಳು ಬಂದಾಗಲೆಲ್ಲಾ, ಈ ಪಟ್ಟಣವು ತನ್ನ ಸ್ವರೂಪವನ್ನು ಅಥವಾ ವಾತತಾವರಣವನ್ನು ಬದಲಾಯಿಸುತ್ತದೆ: ಅದು ಒಂದು ಸಡಗರದ ಸಾಂಭ್ರಮಿಕ ಆಚರಣೆಯಾಗಿ ಬದಲಾಗುತ್ತದೆ," ಎಂದು ಅವರು ನಗುತ್ತಾ ಹೇಳಿದರು. ವಿಲ್ಲನೋವಾದ ಸಂತ ಥೋಮಸ್‌ರವರ ಧರ್ಮಕೇಂದ್ರ ಧರ್ಮಗುರು ಚರ್ಚ್ ಜಿಯಾನ್ ಲೊರೆಂಜೊ ಬರ್ನಿನಿರವರು ವಿನ್ಯಾಸಗೊಳಿಸಿದ ವಾಸ್ತುಶಿಲ್ಪದ ರತ್ನವಾಗಿದ್ದು, ಇದನ್ನು ವಿಶ್ವಗುರು ಏಳನೇ ಅಲೆಕ್ಸಾಂಡರವರು ನಿಯೋಜಿಸಿದರು.

ಆಗಸ್ಟ್ 7, 1926 ರಂದು ಆಗಸ್ತೀನಿನ ಧರ್ಮಗುರುಗಳಿಂದ ಸೇಲ್ಸಿಯನ್ನರಿಗೆ ಹಸ್ತಾಂತರಿಸಲ್ಪಟ್ಟ ಕಟ್ಟಡವು, ಧರ್ಮಗುರು ಗಮನಿಸಿದಂತೆ, "ಸುಂದರವಾದ ಹಂಚಿಕೆಯ ಆನುವಂಶಿಕತೆ"ಯಾಗಿ ಉಳಿದಿದೆ. ನೀವು ಮನೆಯಲ್ಲಿ ಅತಿಥಿಯನ್ನು ಸ್ವೀಕರಿಸಲು ಸಿದ್ಧರಾದಾಗ ಸ್ಥಿತಯಲ್ಲಿಯೇ ಇರುತ್ತದೆ" ಎಂದು ಪೋಲಿಷ್ ಮೂಲದ ಧರ್ಮಗುರು ಹೇಳಿದರು.

ಧರ್ಮಸಭೆಯ ಭೌತಿಕ ಸುಧಾರಣೆಗಳಲ್ಲಿ ಪಾಪಲ್ ಕೋಟ್ ಆಫ್ ಆರ್ಮ್ಸ್‌ನ ಪುನಃಸ್ಥಾಪನೆ, ದೇವಾಲಯದ ರಚನೆಗೆ ತಾಂತ್ರಿಕ ಹೊಂದಾಣಿಕೆಗಳು ಮತ್ತು ಹೊಸ ಬೆಳಕು ಸೇರಿವೆ. ವ್ಯಾಟಿಕನ್ ಕಚೇರಿಗಳ ಬೆಂಬಲದೊಂದಿಗೆ ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡಲು ಮತ್ತು ಪಕ್ಷಿಗಳನ್ನು ತಡೆಯಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನವೀಕರಣಗಳನ್ನು ಮೀರಿ, ಈ ಸಿದ್ಧತೆಗಳ ಹಿಂದಿನ ಪ್ರೇರಕ ಶಕ್ತಿ ಸಮುದಾಯವೇ ಆಗಿದೆ.

ಸಮುದಾಯಕ್ಕೆ, ವಿಶ್ವಗುರುಗಳ ಆಗಮನವು ಕೇವಲ ಒಂದು ಘಟನೆಯಲ್ಲ, ಬದಲಾಗಿ ಧರ್ಮಸಭೆಯ ಸಿನೊಡಲಿಟಿಯ ಕುರಿತಾದ ಸಿನೊಡ್ ನ್ನು ಕಾರ್ಯಗತಗೊಳಿಸಲು ಪ್ರಯತ್ನಿಸುತ್ತಿರುವಾಗ ಏಕತೆಯ ಸಂಕೇತವಾಗಿದೆ.
ನಾವು ಒಂದು ಅಗಾಧ ಕೊಡುಗೆಯನ್ನು ಅನುಭವಿಸುತ್ತಿದ್ದೇವೆ ಎಂದು ಅವರು ಹೇಳಿದರು. ನಾವೆಲ್ಲಾ ಧರ್ಮಸಭೆಯ ಸಿನೊಡಲ್ ಪ್ರಯಾಣದ ಮಾರ್ಗದಲ್ಲಿದ್ದೇವೆಂದು ನೆನಪಿಸುತ್ತದೆ, ವಿಶ್ವವು ತುಂಬಾ ವಿಭಜನೆಯಾಗಿದ್ದರೂ ಒಗ್ಗಟ್ಟಾಗಿದೆ.
 

12 ಜುಲೈ 2025, 22:43