ಪ್ರಭುವಿನ ದಿನದ ಚಿಂತನೆ: ನನ್ನ ನೆರೆಹೊರೆಯವನು ಯಾರು?
ಧರ್ಮಗುರು ಜಾನ್ ಲ್ಯೂಕ್ ಗ್ರೆಗೊರಿ, OFM, ಪವಿತ್ರ ನಾಡಿನ ಕಸ್ಟಡಿ
ಸಂಘರ್ಷ ಮತ್ತು ವಿಭಜನೆಯಿಂದ ತುಂಬಿರುವ ಜಗತ್ತಿನಲ್ಲಿ, ವಿಶೇಷವಾಗಿ ಮಧ್ಯಪ್ರಾಚ್ಯದಲ್ಲಿ, ಒಬ್ಬರ ನೆರೆಹೊರೆಯವರನ್ನು ಪ್ರೀತಿಸುವ ಕಾಲಾತೀತ ಬೋಧನೆಯು ಹೊಸ ತುರ್ತುಸ್ಥಿತಿಯನ್ನು ಪಡೆಯುತ್ತಿದೆ. ಇಂದಿನ ಶುಭಸಂದೇಶದಲ್ಲಿ ಒಳ್ಳೆಯ ಸಮಾರಿಯದವನು ಚಿತ್ರಿಸುವ ಈ ಸಾಮತಿಯಲ್ಲಿ, ಪ್ರಭುಯೇಸು 'ನಿನ್ನ ನೆರೆಹೊರೆಯವನನ್ನು ಪ್ರೀತಿಸು' ಎಂಬ ಆಜ್ಞೆಯನ್ನು ಒತ್ತಿಹೇಳುತ್ತಾರೆ, ಇದು ಇಂದು ನಮ್ಮ ಸಮಾಜಗಳಲ್ಲಿ ವ್ಯಾಪಿಸಿರುವ ಪ್ರಕ್ಷುಬ್ಧತೆ ಮತ್ತು ತಪ್ಪುಗ್ರಹಿಕೆಯ ನಡುವೆ ಆಳವಾಗಿ ಪ್ರತಿಧ್ವನಿಸುತ್ತದೆ.
ಸದ್ಭಾವನೆಯ ಜನರಾಗಿ, ನಾವು ಗಡಿಗಳು, ಸಂಸ್ಕೃತಿಗಳು ಮತ್ತು ಇತಿಹಾಸಗಳನ್ನು ಮೀರಿ ನಮ್ಮ ನೆರೆಹೊರೆಯವರನ್ನು ಪ್ರೀತಿಸುವುದರ ಅರ್ಥವೇನೆಂದು ಧ್ಯಾನಿಸಲು ಕರೆಯಲ್ಪಡುತ್ತೇವೆ. ಒಳ್ಳೆಯ ಒಳ್ಳೆಯ ಸಮಾರಿಯದವನ ಸಾಮತಿಯಲ್ಲಿ, ನಿತ್ಯಜೀವನದ ಕುರಿತಾದ ವಿಚಾರಣೆಯೊಂದಿಗೆ ಪ್ರಾರಂಭವಾಗುತ್ತದೆ, ಇದು ಪ್ರೀತಿ, ಕರುಣೆ ಮತ್ತು ಸಹಾನುಭೂತಿಯ ಆಳವಾದ ಚರ್ಚೆಗೆ ಕಾರಣವಾಗುತ್ತದೆ. 'ನೆರೆಹೊರೆಯವರು' ಎಂದು ಯಾರು ಅರ್ಹತೆ ಪಡೆಯುತ್ತಾರೆ ಎಂಬ ಪ್ರಶ್ನೆ ಈ ನಿರೂಪಣೆಯ ಕೇಂದ್ರಬಿಂದುವಾಗಿದೆ. ಇದು ನಮ್ಮ ಪೂರ್ವಾಗ್ರಹಗಳನ್ನು ಮತ್ತು ನಾವು ಹೆಚ್ಚಾಗಿ ಕಡೆಗಣಿಸುವ ಜನರನ್ನು ಪರಿಗಣಿಸಲು ನಮಗೆ ಸವಾಲು ಹಾಕುತ್ತದೆ.
ನಾವು 'ನೆರೆಹೊರೆಯವರು' ಯಾರು? ಎಂದು ಯೋಚಿಸುವಾಗ, ನಮ್ಮ ವಿಶ್ವಾಸವು, ಜನಾಂಗೀಯತೆ ಅಥವಾ ಸಾಮಾಜಿಕ ಸ್ಥಾನಮಾನವನ್ನು ಹಂಚಿಕೊಳ್ಳುವವರಿಗೆ ಮಾತ್ರ, ನಾವು ಅದನ್ನು ಸೀಮಿತಗೊಳಿಸುತ್ತೇವೆಯೇ? ಅಥವಾ ಈ ವ್ಯಾಖ್ಯಾನವನ್ನು ಎಲ್ಲರಿಗೂ ಅನ್ವಯಿಸುವಂತೆ ವಿಶೇಷವಾಗಿ ನೆರವಿನ ಅವಶ್ಯಕತೆಯ ಅಗತ್ಯವಿರುವವರಿಗೆ ವಿಸ್ತರಿಸುತ್ತೇವೆಯೇ?
ಇಂದು, ಮಧ್ಯಪ್ರಾಚ್ಯವು ರಾಜಕೀಯ ಸಂಘರ್ಷದಿಂದ ಹಿಡಿದು ಮಾನವೀಯ ಬಿಕ್ಕಟ್ಟಿನವರೆಗೆ ಎಣಿಸಲಾರದಷ್ಟು ಕಷ್ಟಗಳನ್ನು ಎದುರಿಸುತ್ತಿದೆ. ಜನರು ಎಲ್ಲಾ ಕಡೆಯಿಂದಲೂ ಬಳಲುತ್ತಿದ್ದಾರೆ, ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳ ಕೊರತೆಯಿದೆ, ಕುಟುಂಬಗಳು ಛಿದ್ರವಾಗಿವೆ ಮತ್ತು ಸಮುದಾಯಗಳು ಛಿದ್ರವಾಗಿವೆ. ಈ ನೋವಿನ ವಾಸ್ತವಗಳಲ್ಲಿ, ಒಳ್ಳೆಯ ಸಮಾರಿಯದವನ ಸಂದೇಶವು ದ್ವೇಷ ಮತ್ತು ವಿಭಜನೆಯನ್ನು ಮೀರಿ, ಇತರರಿಗೆ ನೆರವಾಗಲು ನಮ್ಮನ್ನು ಆಹ್ವಾನಿಸುತ್ತದೆ. ಇದು ಪ್ರೀತಿಯನ್ನು ಸ್ಪಷ್ಟವಾದ ರೀತಿಯಲ್ಲಿ ಸಾಕಾರಗೊಳಿಸುವ, ನಮ್ಮಿಂದ ಭಿನ್ನವಾಗಿರುವವರೊಂದಿಗೆ ಸಂಪರ್ಕವನ್ನು ಬೆಳೆಸುವ ಮತ್ತು ನೆರವಿನ ಅಗತ್ಯವಿರುವವರಿಗೆ ನಮ್ಮ ಕೈಗಳು ಮತ್ತು ಹೃದಯಗಳ ಸಹಾಯ ಹಸ್ತವನ್ನು ಚಾಚುವ ಕರೆಯಾಗಿದೆ.
ನಮ್ಮ ನೆರೆಹೊರೆಯವರನ್ನು ಪ್ರೀತಿಸುವುದು ಎಂದರೆ ಪ್ರತಿಯೊಬ್ಬ ವ್ಯಕ್ತಿಯ ಅಂತರ್ಗತ ಮೌಲ್ಯದೊಂದಿಗೆ, ಅವರ ನೋವಿನ ಕಥೆಗಳನ್ನು ಕೇಳುವುದು ಮತ್ತು ಆಳವಾದ ಸಹಾನುಭೂತಿ ಹಾಗೂ ಅಚಲ ಬೆಂಬಲದೊಂದಿಗೆ ಪ್ರತಿಕ್ರಿಯಿಸುವುದು. ಪ್ರೀತಿ ಮತ್ತು ಕರುಣೆ ವಿಭಜನೆಗಳನ್ನು ಅತಿಕ್ರಮಿಸುವ, ಅಂಧಕಾರದ ಸಮಯದಲ್ಲೂ ಭರವಸೆಯನ್ನು ಹೊತ್ತಿಸುವ ಜಗತ್ತನ್ನು ಸೃಷ್ಟಿಸುವ ಬಗ್ಗೆಯಿದು. ನಾವೆಲ್ಲರೂ ಆ ಒಳ್ಳೆಯ ಸಮಾರಿಯದವನಾಗಲು ಶ್ರಮಿಸೋಣ, ಏಕೆಂದರೆ ಹಾಗೆ ಮಾಡುವುದರಿಂದ, ನಾವು ಪ್ರೀತಿಯ ಬೋಧನೆಗಳನ್ನು ಗೌರವಿಸುವುದಲ್ಲದೆ, ಎಲ್ಲರಿಗೂ ಉತ್ತಮ ಭವಿಷ್ಯಕ್ಕಾಗಿ ದಾರಿ ಮಾಡಿಕೊಡುತ್ತೇವೆ.