MAP

People attend a memorial service at Santa Maria Catholic Church on May 13, 2025 People attend a memorial service at Santa Maria Catholic Church on May 13, 2025  (AFP or licensors)

ಇಂಡೋನೇಷ್ಯಾದಲ್ಲಿ ಪೂಜ್ಯ ಕನ್ಯಾ ಮರಿಯಳ ಹಬ್ಬವು ಕ್ರೈಸ್ತರನ್ನು ಮತ್ತು ಮುಸ್ಲಿಮರನ್ನು ಒಟ್ಟುಗೂಡಿಸುತ್ತಿದೆ

ಫ್ಲೋರ್ಸ್ ದ್ವೀಪದಲ್ಲಿ ಐದು ವಾರಗಳ ಕಾಲ, 26 ಧರ್ಮಕೇಂದ್ರಗಳು ಪೂಜ್ಯ ಕನ್ಯಾ ಮರಿಯಳ ಸಾಂಭ್ರಮಿಕ ಆಚರಣೆಗೂ ಮುನ್ನ ಮೆರವಣಿಗೆಗಳು ಮತ್ತು ಪ್ರಾರ್ಥನೆಗಳಲ್ಲಿ ಭಾಗವಹಿಸುತ್ತಿವೆ.

ಕೀಲ್ಸ್ ಗುಸ್ಸಿ

ಜುಲೈ 9 ರಿಂದ ಆಗಸ್ಟ್ 14 ರವರೆಗೆ, ಫ್ಲೋರ್ಸ್ ದ್ವೀಪದಲ್ಲಿರುವ ಇಂಡೋನೇಷಿಯದವರು ಪೂಜ್ಯ ಕನ್ಯಾ ಮರಿಯಳಿಗೆ ಮೀಸಲಾದ ಧಾರ್ಮಿಕ ಹಬ್ಬವನ್ನು ಆಚರಿಸುತ್ತಿದ್ದಾರೆ. ಫ್ಲೋರ್ಸ್‌ನ ಬ್ಯಾರಿಯಲ್ಲಿರುವ ಸಂತ ಮಾರ್ಟಿನ್ ಧರ್ಮಕೇಂದ್ರದಲ್ಲಿ ಸ್ಥಳೀಯವಾಗಿ ಗೊಲೊ ಕೋ ಎಂದು ಕರೆಯಲ್ಪಡುವ ಉತ್ಸವವನ್ನು ಪ್ರಾರಂಭಿಸಲು ನೂರಾರು ಮುಸ್ಲಿಮರು ಮತ್ತು ಕ್ರೈಸ್ತರು ಪೂಜ್ಯ ಕನ್ಯಾ ಮರಿಯಳ ಪ್ರತಿಮೆಯನ್ನು ಹೊತ್ತುಕೊಂಡು ಮೆರವಣಿಗೆಗಳು ಮತ್ತು ಪ್ರಾರ್ಥನೆಗಳಲ್ಲಿ ಭಾಗವಹಿಸಲು ಒಟ್ಟಾಗಿ ಸೇರಿದರು.

ಸ್ವರ್ಗ ಸ್ವೀಕೃತ ಮಾತೆ ಮರಿಯಳ ಹಬ್ಬವನ್ನು ಐದು ವಾರಗಳ ಕಾಲ ನಡೆಯುವ ಈ ಕಾರ್ಯಕ್ರಮವನ್ನು ಲಬೌನ್ ಬಾಜೊ ಮಹಾಧರ್ಮಕ್ಷೇತ್ರದ್ಯಾಂತ 26 ಧರ್ಮಕೇಂದ್ರದಗಳಲ್ಲಿ ಆಚರಿಸಲಾಗುತ್ತಿದೆ. ಮೂಲತಃ, ಮೆರವಣಿಗೆಯನ್ನು ನೀರಿನ ಮೇಲೆ ನಡೆಸಬೇಕಿತ್ತು. ಆದರೆ ಹವಾಮಾನ ಬದಲಾವಣೆಗಳಿಂದಾಗಿ, ಅದನ್ನು ನೆಲದ ಮೇಲೆ ನಡೆಸಲು ಬದಲಾಯಿಸಲಾಯಿತು.

ಇಂಡೋನೇಷ್ಯಾದ ಪಶ್ಚಿಮ ಫ್ಲೋರ್ಸ್‌ನಲ್ಲಿರುವ ಸಾಂಪ್ರದಾಯಿಕ ಮಂಗ್‌ಗರೈ ನೃತ್ಯಗಳು, ಹಾಡುಗಳು ಮತ್ತು ಆಚರಣೆಗಳೊಂದಿಗೆ ಮೆರವಣಿಗೆಯನ್ನು ಉದ್ಘಾಟಿಸಿದರು, ಆದರೆ ಸಾಂಪ್ರದಾಯಿಕ ಉಡುಪುಗಳನ್ನು ಧರಿಸಿದ ಮುಸ್ಲಿಂ ಗ್ರಾಮಸ್ಥರು ಸಹ ಇದರಲ್ಲಿ ಸೇರಿಕೊಂಡರು. ನಂತರ ಅವರು ಪೂಜ್ಯ ಕನ್ಯಾ ಮರಿಯಳ ಪ್ರತಿಮೆಯನ್ನು ಸ್ವಾಗತಿಸಲು ಬೀದಿಗಳಲ್ಲಿ ಬಿದಿರಿನಿಂದ ಸಾಲಾಗಿ ನಿಂತರು, ಇದನ್ನು ರೇಡಿಯೋ ವೆರಿಟಾಸ್ ಏಷ್ಯಾ (RVA) "ಅಂತರ್ಧರ್ಮೀಯ ಒಗ್ಗಟ್ಟಿನ ಪ್ರಬಲ ಸಾಕ್ಷಿ" ಎಂದು ಬಣ್ಣಿಸಿದೆ.

ಧಾರ್ಮಿಕ ಗಡಿಗಳನ್ನು ಮೀರಿದ ಹಬ್ಬ
ಮಹಾಧರ್ಮಾಧ್ಯಕ್ಷರಾದ ಮ್ಯಾಕ್ಸಿಮಸ್ ರೆಗಸ್ ರವರು ಉದ್ಘಾಟನದ ದೈವಾರಾಧನಾ ವಿಧಿಯ ಅಧ್ಯಕ್ಷತೆ ವಹಿಸಿ, ಪೂಜ್ಯ ಕನ್ಯಾ ಮರಿಯಳ ತ್ಯಾಗ ಮತ್ತು ಸೇವೆಯನ್ನು, ಏಕತೆ ಮತ್ತು ಉಪಸ್ಥಿತಿಯ ಮಾದರಿಯಾಗಿ ಪ್ರತಿಬಿಂಬಿಸಿದರು. "ನಮ್ಮ ಮುಸ್ಲಿಂ ಸಹೋದರ ಸಹೋದರಿಯರ ಒಳಗೊಳ್ಳುವಿಕೆ ಈ ಹಬ್ಬದ ಸಮಗ್ರ ಮನೋಭಾವವನ್ನು ಪ್ರತಿಬಿಂಬಿಸುತ್ತದೆ" ಎಂದು ಅವರು ಒತ್ತಿ ಹೇಳಿದರು.

ಧರ್ಮಕ್ಷೇತ್ರದ ಪ್ರಧಾನ ಶ್ರೇಷ್ಟಗುರು ಮತ್ತು ಉತ್ಸವದ ಅಧ್ಯಕ್ಷರು ಸಹ ಈ ಕಾರ್ಯಕ್ರಮವು ಧಾರ್ಮಿಕತೆಯನ್ನು ಮೀರಿದೆ ಎಂದು ಗಮನಸೆಳೆದರು. ಅವರು ಇದನ್ನು "ಧಾರ್ಮಿಕ ಮತ್ತು ಜನಾಂಗೀಯ ಗಡಿಗಳನ್ನು ಮೀರಿದ ಒಗ್ಗಟ್ಟಿನ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಚಳುವಳಿ" ಎಂದು ಕರೆದರು.

ಆಗಸ್ಟ್ 14 ರಂದು, ಈ ಕಾರ್ಯಕ್ರಮವು ವಾಟರ್‌ಫ್ರಂಟ್ ಸಿಟಿಯಿಂದ ಗೊಲೊ ಕೋ ಬೆಟ್ಟಕ್ಕೆ ದೊಡ್ಡ ಮೆರವಣಿಗೆಯೊಂದಿಗೆ ಮುಕ್ತಾಯಗೊಳ್ಳಲಿದೆ, ಇದು ಪೂಜ್ಯ ಕನ್ಯಾ ಮರಿಯಳ ಹಬ್ಬದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಾಕಾಷ್ಠೆಯಾಗಲಿದೆ.

RVA ಎತ್ತಿ ತೋರಿಸಿದಂತೆ, ಮರಿಯಳ ಸ್ವರ್ಗಾರೋಹಣವನ್ನು ಆಚರಿಸುವುದರ ಜೊತೆಗೆ, ಈ ಹಬ್ಬವು ಫ್ಲೋರ್ಸ್ ದ್ವೀಪದಲ್ಲಿ ಕಥೋಲಿಕ ಧರ್ಮಸಭೆಯ ಗುರುತಿನ ಕೇಂದ್ರವಾಗಿರುವ ಶ್ರೀಮಂತ ವಿಶ್ವಾಸದ ಸಂಪ್ರದಾಯಗಳು, ಸ್ಥಳೀಯ ಆಚರಣೆ ಮತ್ತು ಸಾಮುದಾಯಿಕ ಭರವಸೆಯನ್ನು ಎತ್ತಿ ತೋರಿಸುತ್ತದೆ.
 

14 ಜುಲೈ 2025, 18:59