MAP

Le Suore del Buon Pastore della Divina Provvidenza nell'Istituto Penitenziario di Krzywaniec in Polonia Le Suore del Buon Pastore della Divina Provvidenza nell'Istituto Penitenziario di Krzywaniec in Polonia 

'ಭರವಸೆ ನೀಡಲು' ಪೋಲಿಷ್ ಜೈಲಿನಲ್ಲಿರುವ ಮಹಿಳೆಯರನ್ನು ಭೇಟಿ ಮಾಡುವ ಪವಿತ್ರ ಹೃದಯದ ಸಭೆಯ ಧಾರ್ಮಿಕ ಭಗಿನಿಯರು

ಸಿಸ್ಟರ್ ಕ್ರಿಜ್ಜ್ಟೋಫಾ ಕುಜಾವ್ಸ್ಕಾರವರ ಪ್ರಕಾರ, ದೈವಾನುಗ್ರಹದ ಪವಿತ್ರ ಹೃದಯದ ಧಾರ್ಮಿಕ ಭಗಿನಿಯರ ಸಭೆಯು (ಸಿಸ್ಟರ್ಸ್ ಆಫ್ ದಿ ಗುಡ್ ಶೆಫರ್ಡ್ ಆಫ್ ಡಿವೈನ್ ಪ್ರಾವಿಡೆನ್ಸ್), ಪೋಲೆಂಡ್‌ನ ಕ್ರಿಜ್ವಾನಿಕ್ ಜೈಲು ಸಂಸ್ಥೆಯ ಸಹಕಾರದೊಂದಿಗೆ ಬಂಧನಕ್ಕೊಳಗಾದ ಮಹಿಳೆಯರನ್ನು ಆಧ್ಯಾತ್ಮಿಕವಾಗಿ ಮತ್ತು ನಿರ್ದಿಷ್ಟವಾಗಿ ಬೆಂಬಲಿಸುತ್ತದೆ.

ಕರೋಲ್ ಡಾರ್ಮೊರೊಸ್

ದೈವಾನುಗ್ರಹದ ಪವಿತ್ರ ಹೃದಯದ ಧಾರ್ಮಿಕ ಭಗಿನಿಯರ ಸಭೆಯು (ಸಿಸ್ಟರ್ಸ್ ಆಫ್ ದಿ ಗುಡ್ ಶೆಫರ್ಡ್ ಆಫ್ ಡಿವೈನ್ ಪ್ರಾವಿಡೆನ್ಸ್) ಮತ್ತು ಪೋಲೆಂಡ್‌ನ ಕ್ರೈವಾಮಿಕ್‌ನಲ್ಲಿರುವ ಜೈಲಿನ ನಡುವಿನ ಒಪ್ಪಂದವು ಬಂಧನದಲ್ಲಿರುವ ಮಹಿಳೆಯರಿಗೆ ಮರುಸಾಮಾಜಿಕೀಕರಣ ಚಟುವಟಿಕೆಗಳನ್ನು ನೀಡುತ್ತಿದೆ. ಕಷ್ಟದಲ್ಲಿರುವ ಮಹಿಳೆಯರಿಗೆ ಸಹಾಯ ಮಾಡುವ ಸಭೆಯ ಧ್ಯೇಯವನ್ನು ಪೂರೈಸುತ್ತಿದೆ.

ನಾವು ಏಪ್ರಿಲ್‌ನಲ್ಲಿ ಜೈಲಿನಲ್ಲಿ ಬಂಧನದಲ್ಲಿರುವ ಮಹಿಳೆಯರನ್ನು ಭೇಟಿಯಾಗಲು ಪ್ರಾರಂಭಿಸಿದೆವು ಸಿಸ್ಟರ್ ಕ್ರಿಸ್ಜ್ಟೋಫಾ ಕುಜಾವ್ಸ್ಕಾರವರು ವ್ಯಾಟಿಕನ್ ಸುದ್ಧಿಗೆ ತಿಳಿಸಿದರು.

ಸಭೆಯ ಧಾರ್ಮಿಕ ಭಗಿನಿಯರು ಪ್ರಸ್ತುತ ಎರಡು ಗುಂಪುಗಳ ಮಹಿಳೆಯರಿಗೆ ನಿಯಮಿತ ತರಗತಿಗಳನ್ನು ನಡೆಸುತ್ತಾರೆ. ಜೈಲಿನಿಂದ ಹೊರಬಂದ ನಂತರ ಆಧ್ಯಾತ್ಮಿಕ ರಚನೆ ಮತ್ತು ಪ್ರಾಯೋಗಿಕ ಪುನರ್ಮಿಲನ, ವಸತಿ ಸಹಾಯ ಸೇರಿದಂತೆ ಸಹಾಯವನ್ನು ಒದಗಿಸುವ ಗುರಿಯನ್ನು ಹೊಂದಿದ್ದಾರೆ. ಅವರು ನಮ್ಮೊಂದಿಗೆ ವಾಸಿಸಬಹುದು, ಉದ್ಯೋಗವನ್ನು ಹುಡುಕಬಹುದು ಅಥವಾ ಮಾನಸಿಕ ಬೆಂಬಲವನ್ನು ಪಡೆಯಬಹುದು ಎಂದು ಅವರು ಹೇಳಿದರು.

ಯಾರನ್ನೂ ದೂರ ಕಳುಹಿಸದ ನಿವಾಸ
ಪವಿತ್ರ ಹೃದಯದ ಧಾರ್ಮಿಕ ಭಗಿನಿಯರ ಸಭೆಯು ಕೇಂದ್ರಗಳನ್ನು ನಡೆಸುವುದಿಲ್ಲ. ಮಹಿಳೆಯರು ತಮ್ಮ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರ ಅವರನ್ನು ತಮ್ಮ ಧಾರ್ಮಿಕ ನಿವಾಸಗಳಿಗೆ ಸ್ವಾಗತಿಸುತ್ತಾರೆ.
ಬಂಧನದಿಂದ ತೇರ್ಗಡೆಯಾಗುವರು, ಯಾರಾದರೂ ನಮ್ಮೊಂದಿಗೆ ಇರಲು ಬಯಸಿದರೆ, ಅವರು ನಮ್ಮೊಂದಿಗೆ ವಾಸಿಸಬಹುದು ಏಕೆಂದರೆ ಇದು ನಮ್ಮ ವರ್ಚಸ್ಸು ಮತ್ತು ಅವರ ಜೀವನದುದ್ದಕ್ಕೂ ನಮ್ಮ ನಿವಾಸಗಳಲ್ಲಿ ವಾಸಿಸಬಹುದು. ನಮ್ಮಲ್ಲಿ ಈಗಾಗಲೇ ಇತರ ಜೈಲುಗಳಿಂದ ಮಹಿಳೆಯರು ಇದ್ದಾರೆ, ”ಎಂದು ಸಿಸ್ಟರ್ ಕ್ರಿಜ್ಜ್ಟೋಫಾರವರು ಹೇಳಿದರು.

ಬಂಧಿತರಿಗೆ ಸಹಾಯ ಮಾಡುವುದರಲ್ಲಿ ಪಾರ್ಸೆಲ್‌ಗಳನ್ನು ದಾನ ಮಾಡುವುದು ಅಥವಾ ಮೇಲ್ ತಲುಪಿಸುವುದು ಕೂಡ ಸೇರಿದೆ, ಇದು ಯಾವಾಗಲೂ ಜೈಲು ಸಿಬ್ಬಂದಿಯೊಂದಿಗೆ ಒಪ್ಪಂದದಂತೆ - ಜೈಲು ಹೆಚ್ಚಾಗಿ ಕುಟುಂಬ ಸದಸ್ಯರಿಂದ ಮತ್ತು ಸ್ನೇಹಿತರಿಂದ ದೂರವಿಡುವುದರಿಂದ, ನೆರವಿನ ಹೆಚ್ಚು ಅಗತ್ಯವಿರುವ ಮಹಿಳೆಯರಿಗೆ ಬೆಂಬಲ ನೀಡುವ ಒಂದು ಮಾರ್ಗವಾಗಿದೆ.

ವಿಶ್ವಾಸದಿಂದ ಪರಿವರ್ತನೆಯವರೆಗೆ
ಜೈಲಿನಲ್ಲಿರುವ ಮಹಿಳೆಯರ ಭೇಟಿ ಮತ್ತು ಸಂಭಾಷಣೆಯ ಸಮಯದಲ್ಲಿ ವಿಶ್ವಾಸವನ್ನು ಬೆಳೆಸುವುದು ಮೂಲಭೂತವಾಗಿದೆ ಎಂದು ಸಿಸ್ಟರ್ ಕ್ರಿಸ್ಜ್ಟೋಫಾರವರು ಎತ್ತಿ ತೋರಿಸಿದರು. ಅವರ ಮಾತನ್ನು ಕೇಳುವುದು ಬಹಳ ಮುಖ್ಯವಾಗಿದೆ ಮತ್ತು ಸಂಭಾಷಣೆಯನ್ನು ಯಾವಾಗ ಪ್ರಾರಂಭಿಸಬೇಕು ಅಥವಾ ಮುಂದಿನ ಹಂತಕ್ಕೆ ಹೇಗೆ ಕರೆದೊಯ್ಯಬೇಕು ಎಂಬುದನ್ನು ನಿರ್ಧರಿಸುವವರು ಅವರೇ.

"ನಾನು ಮೊದಲ ಭೇಟಿಗೆ ಅಲ್ಲಿಗೆ ಹೋದಾಗ, ಯಾವುದೇ ಹೆಚ್ಚಿನ ಸಹಕಾರ ಅಥವಾ ಯೋಜನೆಗಳ ಬಗ್ಗೆ ಯಾವುದೇ ಮಾತುಕತೆ ಇರಲಿಲ್ಲ. ಮಹಿಳೆಯರು ನನ್ನನ್ನು ಸ್ವೀಕರಿಸಬೇಕೆ ಎಂದು ನಿರ್ಧರಿಸಿದರು. ಅವರು ಮುಂದಿನ ಸಭೆಯ ಬಗ್ಗೆ ನನ್ನನ್ನು ಕೇಳಿದರು. ಅದು ನಾವು ಒಂದು ಹೆಜ್ಜೆ ಮುಂದೆ ಹೋಗಬಹುದು ಎಂಬುದರ ಸಂಕೇತವಾಗಿತ್ತು ಎಂದು ಸಿಸ್ಟರ್ ಕ್ರಿಸ್ಜ್ಟೋಫಾರವರು ಹೇಳಿದರು.

ಸಭೆಯು ತನ್ನ ಕೆಲಸವನ್ನು ಇತರ ಜೈಲುಗಳಿಗೂ ವಿಸ್ತರಿಸಲು ಯೋಜಿಸಿದೆ. ಸಿಸ್ಟರ್ಸ್ ಆಫ್ ದಿ ಗುಡ್ ಶೆಫರ್ಡ್ ಆಫ್ ಡಿವೈನ್ ಪ್ರಾವಿಡೆನ್ಸ್ ಈಗಾಗಲೇ ಈ ಕೆಲಸದಲ್ಲಿ ಅನುಭವವನ್ನು ಹೊಂದಿದೆ. 1990ರ ದಶಕದಲ್ಲಿ, ಅವರು ಗ್ರುಡ್ಜಿಯಾಡ್ಜ್‌ನಲ್ಲಿರುವ ಜೈಲಿಗೆ ಭೇಟಿ ನೀಡಿದರು ಮತ್ತು ಹಲವಾರು ಮಹಿಳೆಯರು ತಮ್ಮ ಶಿಕ್ಷೆಯನ್ನು ಅನುಭವಿಸಿದ ನಂತರ ಧಾರ್ಮಿಕ ಭಗಿನಿಯರ ಮನೆಗಳಲ್ಲಿ ವಾಸಿಸಲು ಹೋದರು.
 

11 ಜುಲೈ 2025, 19:46